Advertisement

ಮೋಟಾರು ವಾಹನಗಳ ಕಾಯ್ದೆ ತಿಳಿವಳಿಕೆ ಅಗತ್ಯ

03:05 PM Oct 31, 2021 | Team Udayavani |

ಪಾಂಡವಪುರ: ಮನುಷ್ಯ ತನ್ನ ಜೀವನವನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಕಾನೂನುಗಳ ಬಗ್ಗೆ ಅಲ್ಪ ಮಟ್ಟದ ಜ್ಞಾನ ಪಡೆದು ಕೊಳ್ಳುವುದು ಅತ್ಯಗತ್ಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾ ಧೀಶ ಎನ್‌. ಮುನಿರಾಜ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮೋಟಾರು ವಾಹನಗಳ ಕಾಯ್ದೆ-1988 ಮತ್ತು ಗ್ರಾಹಕರ ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೆಮ್ಮದಿಯ ಜೀವನ ಸಾಧ್ಯ: ದೇಶದಲ್ಲಿ ದಿನೇ ದಿನೆ ವಾಹನಗಳ ಸಂಖ್ಯೆ ಮತ್ತು ಜನಸಂದಣಿ ಹೆಚ್ಚಾಗುತ್ತಿದ್ದು, ಅಪಘಾತಗಳ ಸಂಖ್ಯೆಯೂ ಅ ಧಿಕವಾಗುತ್ತಿದೆ. ಹೀಗಾಗಿ ಮೋಟಾರು ವಾಹನಗಳ ಕಾಯ್ದೆಯ ತಿಳುವಳಿಕೆ ಪ್ರತಿಯೊಬ್ಬರಿಗೂ ಅಗತ್ಯ. ಅಪರಾಧ ವೆಸಗಿ ನನಗೆ ಕಾನೂನಿನ ಅರಿವು ಇರಲಿಲ್ಲ ಎಂದರೆ ಅದಕ್ಕೆ ಕಾನೂನಿನಲ್ಲಿ ಕ್ಷಮೆ ಇರು ವುದಿಲ್ಲ.

ಇದನ್ನೂ ಓದಿ:- ಚಾಲಕನ ನಿಯಂತ್ರಣ ಕಳೆದು 300 ಅಡಿ ಪ್ರಪಾತಕ್ಕೆ ಉರುಳಿದ ಬಸ್ : 14 ಮಂದಿ ಸಾವು, 4 ಮಂದಿ ಗಂಭೀರ

ಕಾನೂನಿನ ಚೌಕಟ್ಟು ಮತ್ತು ಪರಿಮಿತಿಯಲ್ಲೇ ಕೆಲಸ ಮಾಡಬೇಕು ಎಂದರು. ನಿಯಮ ಪಾಲನೆ ಬಹುಮುಖ್ಯ: ತಹಶೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌ ಮಾತನಾಡಿ, ಸರ್ಕಾರ ಕಾನೂನು ಜಾರಿ ಮಾಡುವ ಮುನ್ನ ಜನಾಭಿಪ್ರಾಯ ಸಂಗ್ರಹಿಸುತ್ತದೆ. ಹೀಗಾಗಿ ಕಾಯ್ದೆ ಅನುಷ್ಠಾನಕ್ಕೂ ಮುನ್ನ ಚರ್ಚೆಗೆ ಒಳಪಟ್ಟು ಸಾಧಕ ಬಾಧಕಗಳು ವಿಮರ್ಶೆಗೆ ಒಳಪಟ್ಟಿರುತ್ತವೆ. ವಾಹನ ಹೊಂದುವುದು ಮುಖ್ಯವಲ್ಲ. ಚಲಾಯಿಸಬೇಕಾದರೆ ಅನುಸರಿಸರಿಬೇಕಾದ ನಿಯಮ ಮತ್ತು ಕಾನೂನು ಪಾಲನೆ ಬಹುಮುಖ್ಯ ಎಂದರು.

Advertisement

ದಾಖಲಾತಿ ಇರಲಿ: ಪೊಲೀಸ್‌ ಇನ್ಸ್‌ಪೆಕ್ಟರ್‌ ಕೆ.ಪ್ರಭಾಕರ್‌ ಮಾತನಾಡಿ, ಕುಡಿದು ವಾಹನ ಚಲಾಯಿಸುವುದು, ಪರವಾನಗಿ, ಆರ್‌ಸಿ, ಪರ್ಮೀಟ್‌, ಇನ್ಶೂರೆನ್ಸ್‌ ಇಲ್ಲದೇ ವಾಹನಗಳನ್ನು ರಸ್ತೆಗೆ ಇಳಿಸುವುದು ಅಪರಾಧ ಎಂದರು. ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ ನೇತ್ರಾವತಿ, ತಾಪಂ ಇಒ ಆರ್‌.ಪಿ.ಮಹೇಶ್‌, ಪ್ರಾದೇಶಿಕ ಸಾರಿಗೆ ಅ ಧಿಕಾರಿ ಜವರಯ್ಯ, ಪುರಸಭೆ ಮುಖ್ಯಾಧಿಕಾರಿ ವೀಣಾ, ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಮಂಜುನಾಥ್‌, ವಕೀಲರ ಸಂಘದ ಅಧ್ಯಕ್ಷ ಎಚ್‌.ಕೆ.ರಾಮೇಗೌಡ, ಕಾರ್ಯದರ್ಶಿ ಸಿ.ಎನ್‌.ಧನಂಜಯ, ಎಎಸ್‌ ಐಗಳಾ ದ ಮಹದೇವ, ಸುಕಂದರಾಜ್‌, ಪೊಲೀಸ್‌ ಸಿಬ್ಬಂದಿ ಗಳಾದ ಅಣ್ಣೇಗೌಡ, ಅಭಿಷೇಕ್‌, ಶೋಭಾ, ಮುಕ್ರಂ ಜಾನ್‌ ಕೋರ್ಟ್‌ ಸಿಬ್ಬಂದಿ ಮಂಚಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next