ತುಮಕೂರು: ಸ್ವಾರ್ಥ, ನಿಸ್ವಾರ್ಥದಿಂದ, ಸರ್ವ ಧರ್ಮದಲ್ಲಿ ನಂಬಿಕೆ ಇಟ್ಟಿರುವ ಜ್ಞಾನ ಪರಿಸರವೇ ಜ್ಞಾನಬುತ್ತಿ ಸತ್ಸಂಗ ಕೇಂದ್ರ ಎಂದು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಅಭಿಪ್ರಾಯಿಸಿದರು.
ನಗರದ ವಾಸವಿ ದೇವಾಲಯದಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗದ 500ನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಞಾನವನ್ನೇ ಪ್ರಸಾರ ಮಾಡುತ್ತಿರುವ ಜ್ಞಾನಬುತ್ತಿ ಸತ್ಸಂಗವು ಸರ್ವ ಧರ್ಮದ ಸಮನ್ವಯತೆಯಿಂದ ಕೂಡಿದ್ದು, ಇಲ್ಲಿನ ಕಾರ್ಯಕ್ರಮಗಳು ಮಕ್ಕಳ ಮನೋವಿಕಾಸಕ್ಕೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಟ್ಟಡ ನಿರ್ಮಾಣಕ್ಕೆ ಸಹಾಯ: ಸತ್ಸಂಗ ಕಾರ್ಯ ಕ್ರಮಗಳು ನಗರದಲ್ಲಿ ಹೆಚ್ಚುವ ಮೂಲಕ ಶಾಂತಿ ಯುತ ಸಮಾಜ ನಿರ್ಮಾಣ ಕಾರ್ಯಕ್ಕೆ ಜ್ಞಾನಬುತ್ತಿ ಸತ್ಸಂಗ ಮುನ್ನುಡಿ ಬರೆದಿದ್ದು, ಇಂಥ ಕಾರ್ಯ ಕ್ರಮದಲ್ಲಿ ಪೋಷಕರು ಮಕ್ಕಳೊಂದಿಗೆ ಪಾಲ್ಗೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವ ಮರು ರೂಪಿಸಿಕೊಳ್ಳ ಬಹುದಾಗಿದೆ. ಸಂಸ್ಥೆಯು ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಸಹಾಯ ಮಾಡುವುದಾಗಿ ತಿಳಿಸಿದರು.
ಜ್ಞಾನ ಹುಡುಕಿಕೊಂಡು ಹೋಗಬೇಕು: ಜ್ಞಾನಬುತ್ತಿ ಸತ್ಸಂಗದ 500ನೇ ಸಾಪ್ತಾಹಿಕದ ಸಾನ್ನಿಧ್ಯ ವಹಿಸಿ ಮಾತನಾಡಿದ ಹಿರೇಮಠ ಅಧ್ಯಕ್ಷ ಡಾ.ಶಿವಾ ನಂದ ಶಿವಾಚಾರ್ಯ ಸ್ವಾಮೀಜಿ, ಎಲ್ಲಿ ಜ್ಞಾನ ಇರುತ್ತದೆಯೇ, ಆ ಜ್ಞಾನ ಹುಡುಕಿಕೊಂಡು ನಾವು ಹೋಗಬೇಕು. ಆಗ ಜ್ಞಾನ ಎಲ್ಲರಿಗೂ ಸಿಗುತ್ತದೆ. ಇಷ್ಟು ವರ್ಷ ನಮ್ಮ ನಡುವೆ ನೂರಾಹನ್ನೊಂದು ವರ್ಷ ಬದುಕಿದ್ದ ನಡೆದಾಡುವ ದೇವರು ಎನ್ನಿಸಿ ಕೊಂಡಿದ್ದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಅವರು ನಡೆದ ದಾರಿಯಲ್ಲಿ ನಡೆದರೆ ಸಾಕು ನಾವು ಅವರಿಗೆ ಸಲ್ಲಿಸುವ ಗೌರವ ಎಂದು ನುಡಿದರು.
ಹಣಕೊಟ್ಟು ಡಾಕ್ಟರೆಟ್: ಸಂಘದ ಪಿ.ಶಾಂತಿಲಾಲ್ ಮತ್ತು ಟಿ.ಮುರಳೀಕೃಷ್ಣಪ್ಪ ಇಬ್ಬರು ಎರಡು ಕಣ್ಣುಗಳಿದ್ದಂತೆ. ಈ ಎರಡು ಕಣ್ಣುಗಳು ಅತ್ಯಂತ ಶ್ರೇಷ್ಠ ಎಂದು ಹೇಳಿದರು. ಅಮ್ಮ ಮಕ್ಕಳಿಗೆ ಕೈತುತ್ತು ಕೊಡುತ್ತಾರೆ. ಅದೇ ಅಮ್ಮ ಮಕ್ಕಳು ಹಸಿದುಕೊಂಡಿರ ಬಾರದೆಂದು ಬುತ್ತಿ ಕೊಡುತ್ತಾಳೆ. ಇವತ್ತು ಡಾಕ್ಟರೆಟ್ ಪದವಿ ಮತ್ತು ಪ್ರಶಸ್ತಿಗಳನ್ನು ಹಣಕೊಟು rಕೊಂಡು ಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜ್ಞಾನಬುತ್ತಿ ಸತ್ಸಂಗದ ಸಂಸ್ಥಾಪಕ ಅಧ್ಯಕ್ಷ ಶಾಂತಿಲಾಲ್ ದಂಪತಿಯನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸನ್ಮಾನಿತ ಶಾಂತಿಲಾಲ್ ಜೈನ್, ವಿದ್ಯಾವಾಹಿನಿ ಸಂಸ್ಥೆಯ ಕೆ.ಬಿ. ಜಯಣ್ಣ, ಮುಸ್ತಾಕ್ ಅಹ್ಮದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ.ಜಿ.ಸಿದ್ದರಾಮಣ್ಣ, ಎಂ.ಸಿ.ಲಲಿತಾ, ಕೆ.ಬಿ.ಜಯಣ್ಣ, ಮಿಮಿಕ್ರಿ ಈಶ್ವರಯ್ಯ, ಶೈಲಾ, ರವೀಂದ್ರನಾಥ ಟಾಗೋರ್, ಮುರಳೀಕೃಷ್ಣ, ಲಕ್ಷ್ಮಣ್‌ದಾಸ್, ಸಾಹಿತಿ ಎನ್.ನಾಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.