ಮಹದೇವಪುರ: ಪತ್ರಿಕೆಗಳನ್ನು ಓದುವುದರಿಂದ ಮಕ್ಕಳಲ್ಲಿ ಜಾnನಾರ್ಜನೆ ಉಂಟಾಗುತ್ತದೆ ಎಂದು ಪಾಲಿಕೆ ಸದಸ್ಯ ಎ.ಸಿ.ಹರಿಪ್ರಸಾದ್ ತಿಳಿಸಿದರು. ಕ್ಷೇತ್ರದ ಬಿಳೇಶಿವಾಲೆಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಉದಯವಾಣಿ ಪತ್ರಿಕೆ ವಿತರಿಸಿ ಮಾತನಾಡಿದರು,
“ಗ್ರಾಮ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿತ್ಯ ನಡೆಯುವ ವಿದ್ಯಾಮಾನಗಳನ್ನು ಹೊತ್ತುತರುವ ಜಾnನ ಭಂಡಾರವೇ ಪತ್ರಿಕೆ. ಅಲ್ಲದೆ 10ನೇ ತರಗತಿಯ ವ್ಯಾಸಾಂಗಕ್ಕೆ ಸಹಾಯಕವಾದ ಶಿಕ್ಷಣ ಮಾರ್ಗ ಸೂಚಿಯೂ ಪತ್ರಿಕೆಯಲ್ಲಿ ಲಭ್ಯವಿದ್ದು, ಮಕ್ಕಳಿಗೆ ಪರೀಕ್ಷೆಗಳನ್ನೆದುರಿಸಲು ಸಹಕಾರಿ. ಈ ಮಾರ್ಗ ಸೂಚಿಯನ್ನು ನಿತ್ಯ ಓದುವುದರಿಂದ ಮಕ್ಕಳು ಪರೀಕ್ಷೆಗಳನ್ನು ಸುಲಭವಾಗಿ ಎದುರಸಬಹುದು,’ ಎಂದು ಸಲಹೆ ನೀಡಿದರು.
“ಬಿಳೇಶಿವಾಲೆ ಸರ್ಕಾರಿ ಪ್ರೌಢ ಶಾಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದೆ. ಇಲ್ಲಿಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಶ್ಯವಾದ ಪರಿಕರಗಳ ಕೊರತೆಯಿದ್ದರೆ ಅದನ್ನು ಪೂರೈಸಲಾಗುವುದು,’ ಎಂದು ಹರಿಪ್ರಸಾದ್ ಭರವಸೆ ನೀಡಿದರು.
“ಹಡಗು ರಿಪೇರಿ ಮಾಡುವ ಸಾಮಾನ್ಯ ಬಡಗಿಯ ಮನೆಯಲ್ಲಿ ಜನಸಿದ ಹುಡುಗನೊಬ್ಬ ಪತ್ರಿಕೆ ಹಂಚುತ್ತಾ, ಅದ್ವಿತೀಯ ಸಾಧನೆ ಮಾಡಿ, ಇಸ್ರೋ ಮತ್ತು ದೇಶದ ಅತ್ಯುನ್ನತ ಸ್ಥಾನ ಮಾನಗಳಿಗೆ ಪಾತ್ರರಾದ ಅಬ್ದುಲ್ ಕಲಾಂ ಅವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರೇರಣೆಯಾಗಬೇಕಿದೆ,’ ಎಂದು ಇದೇ ವೇಳೆ ಹರಿಪ್ರಸಾದ್ ಅವರು ಕಿವಿ ಮಾತು ಹೇಳಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಅನಿಲ್‌ಕುಮಾರ್, ಬಯಲು ಸೀಮೆ ಅಭಿವೃದ್ಧಿ ಮಂಡಳಿ ನಿರ್ದೇಶಕ ನಾಗರಾಜ್, ಸುರೇಶ್, ಶಾಲೆಯ ಮುಖ್ಯ ಶಿಕ್ಷಕ ಎ.ಕೃಷ್ಣಪ್ಪ, ಪ್ರಬಾರಿ ಮುಖ್ಯ ಶಿಕ್ಷಕ ಬಿ.ಬಿ. ದಡ್ಡಿ, ಶಿಕ್ಷಕರಾದ ಬಿ.ಎನ್.ರಾಜ್‌ಗೊàಪಾಲ್, ಎ.ಜೆ. ಸುಮನಾ, ಎಮ್.ರೂಪಾ, ಶಿಕ್ಷಕರು, ವಿದ್ಯಾರ್ಥಿಗಳು ಈ ವೇಳೆ ಉಪಸ್ಥಿತರಿದ್ದರು.