Advertisement

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ 

11:15 AM Jan 29, 2018 | Team Udayavani |

ಕಾವೂರು: ಪುಸ್ತಕಗಳು ಜ್ಞಾನ ವೃದ್ಧಿಗೆ ಅಗತ್ಯವಾಗಿವೆ. ಪ್ರತೀ ವಾರ್ಡ್‌ನಲ್ಲಿ ಗ್ರಂಥಾಲಯಗಳಿದ್ದಲ್ಲಿ ಮಹಿಳೆಯರು, ಮಕ್ಕಳಿಗೆ ಜ್ಞಾನ ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಶಾಸಕ ಮೊದಿನ್‌ ಬಾವಾ ಹೇಳಿದರು.

Advertisement

ರವಿವಾರ ಕಾವೂರು ಕೆ.ಎಚ್‌.ಬಿ ಕಾಲನಿಯಲ್ಲಿ ಪಾಲಿಕೆ 14ರ ನಿಯಮದಡಿ ಹಾಗೂ ಪಾಲಿಕೆ ಸದಸ್ಯ ಹರಿನಾಥ್‌ ಅವರ ಸದಸ್ಯ ನಿಧಿ ಯಿಂದ ಮಾಡಲಾದ ಇಂಟರ್‌ ಲಾಕ್‌, ಆವರಣಗೋಡೆ ಸಹಿತ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗ್ರಂಥಾಲಯ ಕಟ್ಟಡ ಹಾಗೂ ಉದ್ಯಾನವನ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಂಥಾಲಯಗಳು ವಿಶ್ವ ವಿದ್ಯಾಲಯಗಳು ಇದ್ದಂತೆ. ಪುಸ್ತಕ ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳುವ ಅವಕಾಶ ನಮಗಿದೆ. ಈ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅಭಿವೃದ್ಧಿಗೆ ಒತ್ತು
ಮಾಜಿ ಮೇಯರ್‌ ಶಶಿಧರ ಹೆಗ್ಡೆ ಮಾತನಾಡಿ, ಶಾಸಕ ಮೊದಿನ್‌ಬಾವಾ ಅವರ ನೇತೃತ್ವದಲ್ಲಿ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಕಾಂಕ್ರೀಟ್‌ ಕಾಮಗಾರಿ, ಮುಖ್ಯಮಂತ್ರಿ ಪರಿಹಾರ ನಿಧಿ ಸಹಾಯ ವಿತರಣೆ, ಮಾರುಕಟ್ಟೆ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಸ್ಥಳೀಯ ಮನಪಾ ಸದಸ್ಯ ಹರಿನಾಥ್‌ ಅವರ ಆಡಳಿತದಲ್ಲಿ ಗ್ರಂಥಾಲಯ, ಬೃಹತ್‌ ಉದ್ಯಾನವನ ನಿರ್ಮಿಸಿಕೊಟ್ಟಿದ್ದಾರೆ ಇದರ ಶುಚಿತ್ವವನ್ನು ಕಾಪಾಡುವುದರ ಜತೆಗೆ ವಿಶ್ರಾಂತಿ, ವ್ಯಾಯಾಮ, ಮನೋರಂಜನೆಗಾಗಿ ಸದುಪಯೋಗಪಡಿಸಿಕೊಳ್ಳಬಹುದು ಎಂದರು.

ಉಪಮೇಯರ್‌ ರಜನೀಶ್‌, ಕಾರ್ಪೊರೇಟರ್‌ ಹರಿನಾಥ್‌, ಮಹಮದ್‌, ದೀಪಕ್‌ ಪೂಜಾರಿ, ನಾಗವೇಣಿ, ಹಿಲ್ಡಾ ಆಳ್ವ, ಅಶೋಕ್‌ ಕುಮಾರ್‌, ಸುಮಂತ್‌, ಎಂಜಿನಿಯರ್‌ ಲಕ್ಷ್ಮಣ ಪೂಜಾರಿ, ಕಂದಾಯಾಧಿಕಾರಿ ನವೀನ್‌, ಫ್ರಾನ್ಸಿಸ್‌ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್‌ ಸ್ವಾಗತಿಸಿದರು. ರೆಹಮಾನ್‌ ಕುಂಜತ್ತಬೈಲ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ಕ್ಷಿಪ್ರಗತಿಯಲ್ಲಿ ಬೆಳವಣಿಗೆ
ಸುರತ್ಕಲ್‌ ಅಭಿವೃದ್ಧಿಗೆ ಸಾರ್ವಜನಿಕರು ಸಹಕರಿಸಿದಾಗ ನಮಗೂ ಹೆಚ್ಚಿನ ಉತ್ಸಾಹ ಬರುತ್ತದೆ. ಕಾವೂರು ಈಗ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಹೊಸ ಮಾರುಕಟ್ಟೆ, ವೃತ್ತ ನಿರ್ಮಾಣ, ಒಳಚರಂಡಿ ಸಹಿತ ಮೂಲ ಸೌಕರ್ಯ ಕಾಮಗಾರಿ ನಿರ್ಮಾಣ ಹಂತದಲ್ಲಿವೆ.
– ಮೊಯಿದಿನ್‌ ಬಾವಾ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next