Advertisement

ಜ್ಞಾನ ಅನಾವರಣಕ್ಕೆ ಚಿತ್ರಕಲೆ ಅಗತ್ಯ

10:47 AM Jan 23, 2019 | |

ವಿಜಯಪುರ: ಚಿತ್ರಕಲೆ ಮಕ್ಕಳಲ್ಲಿ ಹುದಗಿರುವ ಜ್ಞಾನವನ್ನು ಜಗತ್ತಿಗೆ ಅನಾವರಣ ಮಾಡುವ ಸಾಧನವಾಗಿದೆ. ಪ್ರಸಕ್ತ ಸಂದರ್ಭದಲ್ಲಿ ಮಕ್ಕಳು ಮುಖ್ಯವಾಗಿ ಅಧುನಿಕ ತಂತ್ರಜ್ಞಾನದ ಅಂತರ್ಜಾಲದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮೇಲ್ಮನೆ ಸದಸ್ಯ ಸುನೀಲಗೌಡ ಪಾಟೀಲ ಅಭಿಪ್ರಾಯಪಟ್ಟರು.

Advertisement

ನಗರದ ಪ್ರವಾಸೋದ್ಯಮ ಇಲಾಖೆಯ ಆರ್ಟ್‌ ಗ್ಯಾಲರಿಯಲ್ಲಿ ಎಕ್ಸ್‌ಲೆಂಟ್ ಶಿಕ್ಷಣ ಸಂಸ್ಥೆ ಚಿತ್ರಕಲಾ ಶಿಕ್ಷಕ ಮುಸ್ತಾಕ್‌ ತಿಕೋಟಾ ಮಾರ್ಗದರ್ಶನದಲ್ಲಿ 500 ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚಿತ್ರಕಲಾ ಶಿಕ್ಷಕ ಮುಸ್ತಾಕ್‌ ಆವರು ತಮ್ಮೊಂದಿಗೆ ತಮ್ಮ 500 ಶಿಷ್ಯರ ಪ್ರತಿಭೆ ಅನಾವರಣಕ್ಕೆ ಈ ವೇದಿಕೆ ಕಲ್ಪಿಸಿರುವುದು ಸ್ವಾಗತಾರ್ಹ ಕ್ರಮ. ಮಕ್ಕಳಲ್ಲಿ ಹಲವಾರು ವಿಷಯಗಳ ಕುರಿತು ಮನಸ್ಸಿನಲ್ಲಿರುವ ಪ್ರಶ್ನೆಗಳ ಹಾಗೂ ಜಗತ್ತಿನ ಸಮಸ್ಯೆಗಳ ಪ್ರತಿಬಿಂಬವಾಗಿ ಚಿತ್ರಕಲೆಯು ಸಾಧನವಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಎಕ್ಸ್‌ಲೆಂಟ್ ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಚಿತ್ರಕಲೆಯು ಇಡಿ ಇತಿಹಾಸವನ್ನು ಒಂದು ಚಿತ್ರದಲ್ಲಿ ಸೆರೆ ಹಿಡಿಯಬಹುದು. ಜಗತ್ತಿಗೆ ಸಂದೇಶ ನೀಡಲು ಹಾಗೂ ಸಮಸ್ಯೆಗಳನ್ನು ಒಂದು ಚಿತ್ರದಲ್ಲಿ ಅನಾವರಣ ಮಾಡಬಹುದು. ಚಿತ್ರಕಲೆಯು ಮನಸ್ಸಿಗೆ ಮುದ ನೀಡುವ ವಿಷಯವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಹೇಶ ಕ್ಯಾಥನ್‌ ಮಾತನಾಡಿ, 500 ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ 7 ದಿನ ನಡೆಯಲಿದ್ದು, ಜಿಲ್ಲೆಯ ಜನರು ಅದರಲ್ಲೂ ಶಾಲಾ ಮಕ್ಕಳು ಈ ಪ್ರದರ್ಶನ ವೀಕ್ಷಣೆ ಮೂಲಕ ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

Advertisement

ಖ್ಯಾತ ಕಲಾವಿದ ಪಿ.ಎಸ್‌. ಕಡೆಮನಿ ಮಾತನಾಡಿ, ತಮ್ಮ ಕಲೆಯೊಂದಿಗೆ ಮಕ್ಕಳ ಕಲೆ ಅಭಿರುಚಿ ಹಾಗೂ ಅವರಲ್ಲಿ ಅಡಗಿರುವ ಜ್ಞಾನವನ್ನು ಅಭಿವ್ಯಕ್ತಿಸಲು ಮುಸ್ತಾಕ್‌ ತಿಕೋಟಾ ಮುಕ್ತ ವೇದಿಕೆ ಕಲ್ಪಿಸಿರುವುದು ಅನುಕರಣೀಯ ಎಂದರು.

ಸಿದ್ದೇಶ್ವರ ಬ್ಯಾಂಕ್‌ ನಿರ್ದೇಶಕ ವೈಜನಾಥ ಕರ್ಪೂರಮಠ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ಶರಣಪ್ಪ ಯಕ್ಕುಂಡಿ, ಮೈಹಬೂಬ ತಿಕೋಟಾ, ಎಂ.ಕೆ. ಪತ್ತಾರ, ರಾಜು ಶಟಗಾರ, ಲಿಂಗರಾಜ ಕಾಚಾಪುರ, ರುದ್ರೇಶ ಕುಂಬಾರ, ರಮೇಶ ಚವ್ಹಾಣ, ಶಬ್ಬೀರ್‌ ನದಾಫ್‌, ಜಾವೀದ್‌ ತಿಕೋಟಾ, ಇಕ್ಬಾಲ್‌ ತಿಕೋಟಾ, ರಾಜೇಶ್ವರಿ ಕುಮಸಿ ಇದ್ದರು. ಬಸವರಾಜ ವಾಲೀಕಾರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next