Advertisement

ಕೊಡಗು ನಿರಾಶ್ರಿತರಿಗೆ ನೆರವಿನ ಮಹಾಪೂರ

11:22 AM Aug 25, 2018 | |

ವಿಜಯಪುರ: ಕೊಡಗು ನೆರೆ ಸಂತ್ರಸ್ತರಿಗೆ ವಿಜಯಪುರ ತಾಲೂಕಿನ ಇಟ್ಟಂಗಿಹಾಳದ ಎಕ್ಸ್‌ಲೆಂಟ್‌ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಸಂಗ್ರಹಿಸಿದ 80 ಸಾವಿರ ರೂ. ಗಳ ಸಹಾಯಧನದ ಚೆಕ್‌ನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರಗೆ ಹಸ್ತಾಂತರಿಸಲಾಯಿತು.

Advertisement

ಶಿಕ್ಷಣ ಸಂಸ್ಥೆಯ ಮಕ್ಕಳು ತಮ್ಮ ಜನ್ಮದಿನ ಆಚರಿಸಿಕೊಳ್ಳಲು ಕಾಯ್ದಿರಿಸಿದ ಹಣವನ್ನೇ ಸಂತ್ರಸ್ತರಿಗೆ ನೀಡಿದ್ದು, ಅದರಲ್ಲಿ
ಸಂಗ್ರಹಿಸಿದ 25 ಸಾವಿರ ರೂ., ಶಿಕ್ಷಣ ಸಂಸ್ಥೆಯಲ್ಲಿ ಡ್ರೈವರ್‌ ಸೇರಿದಂತೆ ಪ್ರತಿ ಸಿಬ್ಬಂದಿ ಒಂದು ದಿನದ ವೇತನ ನೀಡಿದ್ದರಿಂದ 40 ಸಾವಿರ ರೂ. ಸಂಗ್ರಹವಾಗಿದೆ. ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ವೈಯುಕ್ತಿಕವಾಗಿ 15 ಸಾವಿರ ರೂ. ಸೇರಿದಂತೆ 80 ಸಾವಿರ ರೂ. ಚೆಕ್‌ ಸಂತ್ರಸ್ತರ ನಿಧಿಗೆ ಒಪ್ಪಿಸಲಾಯಿತು.

ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ಪ್ರಳಯ ಸದೃಶ್ಯ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಹೆಮ್ಮೆಯ ಸೈನಿಕರು ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಅದರಂತೆಯೇ ನಾವು ಸಹ ಸಂತ್ರಸ್ತರ ನೋವಿಗೆ ಸ್ಪಂದಿಸಬೇಕು. ಅಳಿಲು ಸೇವೆ ಸಲ್ಲಿಸಬೇಕು, ನಮ್ಮ ಶಿಕ್ಷಣ ಸಂಸ್ಥೆ ಮಕ್ಕಳು ಈ ಉದಾತ್ತ ಕಾರ್ಯ ಕೈಗೊಂಡಿದ್ದಾರೆ ಎಂದರು.

ಶಿಕ್ಷಣ ಸಂಸ್ಥೆ ಸಂಯೋಜಕ ಎನ್‌.ಜಿ. ಯರನಾಳ, ಮುಖ್ಯೋಪಾಧ್ಯಾಯ ಎಸ್‌.ಬಿ. ಹೆಗಲಾಡಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಜ್ಯೋತಿಪ್ರಕಾಶ ಮುದ್ದೇಬಿಹಾಳ, ಶಿವಕುಮಾರ ಶಿರಕನಹಳ್ಳಿ, ಬಿ.ಎಸ್‌. ತಳವಾರ, ಶ್ರೀಶೈಲ ರೆಬಿನಾಳ ಇದ್ದರು.

ಅಂಗವಿಕರಿಂದ ದೇಣಿಗೆ: ಕೊಡಗು ನೆರೆ ಸಂತ್ರಸ್ತರಿಗೆ ಜಿಲ್ಲೆಯ ಅಂಗವಿಕಲರು ರ್ಯಾಲಿ ನಡೆಸಿ ದೇಣಿಗೆ ಸಂಗ್ರಹಿಸಿದರು.
ನಗರದ ಸಿದ್ಧೇಶ್ವರ ದೇವಾಲಯದಿಂದ ತ್ರಿಚಕ್ರ ವಾಹನದಲ್ಲಿ ರ್ಯಾಲಿ ನಡೆಸುವ ಮೂಲಕ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸಿದರು. ಸಂಗ್ರಹಗೊಂಡ 20,700 ರೂ. ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಿದರು.

Advertisement

ಸಬಿಯಾ ಬೇಗಂ, ಮರ್ತೂರ, ಪರಶುರಾಮ ಗುನ್ನಾಪುರ, ಸುರೇಶ ಚವ್ಹಾಣ, ಸಂತೋಷ ಬಮ್ಮನಹಳ್ಳಿ, ಮಹೇಶ ತೋಟದ, ಸಂಗಮೇಶ ಹಿಟ್ನಳ್ಳಿ, ಕಂಟೆಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ವಿಠ್ಠಲ ಹಂಚಿನಾಳ, ಸಾಗರ ಲಮಾಣಿ, ಯಾಸಿನ, ಶ್ರೀರಾಮ ನಾಯಕ, ನಿಮಿಶ ಆಚಾರ್ಯ, ಬಸವರಾಜ ಯಾಳವಾರ, ಶಂಕರ ಪವಾರ, ನಾಮದೇವ ದೊಡಮನಿ, ಸದ್ದಾಮ ಹೆಬ್ಟಾಳ, ಮನೋಜ ಶಿರೋಳ, ರಾಜು ಕುಮಟಗಿ, ಮಹೇಶ ಮುದೋಳ, ಅಶೋಕ ಚೋಳಕೆ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next