Advertisement

ನಮ್ಮನ್ನು ತಿಳಿದು ಪರರನ್ನು ಪ್ರೀತಿಸುವುದು ನೈಜ ಧರ್ಮ: ಡಾ|ಹೆಗ್ಡೆ

12:26 PM Apr 24, 2018 | Harsha Rao |

ಹಿರಿಯಡಕ: ಮನುಷ್ಯನ ಸಾಮಾಜಿಕ ಜವಾಬ್ದಾರಿ ಮತ್ತು ನಡವಳಿಕೆ ಬಹಳ ಮುಖ್ಯವಾಗಿದೆ. ನಾವು ನಮ್ಮನ್ನು ತಿಳಿದುಕೊಂಡು, ಪರರನ್ನು ಪ್ರೀತಿಸುವುದೇ ನಿಜವಾದ ಧರ್ಮ. ಪ್ರತಿಯೊಬ್ಬರೂ ಅದನ್ನು ಪಾಲನೆ ಮಾಡಬೇಕು ಎಂದು ಮಣಿಪಾಲ ಮಾಹೆಯ ನಿವೃತ್ತ ಉಪಕುಲಾಧಿಪತಿ ಡಾ| ಬಿ.ಎಂ. ಹೆಗ್ಡೆ ಹೇಳಿದರು.

Advertisement

ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕೃತ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ, ಬ್ರಹ್ಮಕಲ ಶೋತ್ಸವ ಕಾರ್ಯಕ್ರಮದ ಅಂಗವಾಗಿ ರವಿವಾರ ನಡೆದ ಸುಧರ್ಮ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಮೈಸೂರು ವಿ.ವಿ.ಯ ನಿವೃತ್ತ ಕುಲಾಧಿಪತಿ ಪ್ರೊ| ಎನ್‌.ಎನ್‌. ಹೆಗ್ಡೆ  ಮಾತ ನಾಡಿ, ನಾಡಿನಲ್ಲಿ ಸುಖ, ಶಾಂತಿ ನೆಲೆಯಾಗಬೇಕಾದರೆ ಜನತೆಗೆ ದೈವ, ದೇವರ ನಂಬಿಕೆ ಹೆಚ್ಚಬೇಕು ಎಂದರು.

ಶ್ರೀ ಬ್ರಹ್ಮಶ್ರೀ ಉಚ್ಚಿಲತ್ತಾಯ ನಿಲೇಶ್ವರ ಪದ್ಮನಾಭ ತಂತ್ರಿ ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದರು.
ದಾನಿಗಳನ್ನು ಸಮ್ಮಾನಿಸಲಾಯಿತು. ನ್ಯಾ| ವಿಶ್ವನಾಥ ಶೆಟ್ಟಿ, ಡಾ| ರತನ್‌ ಕೇಳ್ಕರ್‌, ಮುನಿಯಂಗಳ ಪ್ರಸಾದ್‌ ಭಟ್‌, ನಾಡೋಜ ಜಿ. ಶಂಕರ್‌, ಡಾ| ಎಂ. ಮೋಹನ ಆಳ್ವ, ಸದನಂ ನಾರಾಯಣ ಪುದುವಾಳ್‌, ಬಿ. ಜಗನ್ನಾಥ ಶೆಟ್ಟಿ, ಡಾ| ಶಶಿಕಿರಣ್‌ ಶೆಟ್ಟಿ, ಎನ್‌.ಬಿ. ಶೆಟ್ಟಿ, ಪ್ರಕಾಶ್‌ ಶೆಟ್ಟಿ ಪರೀಕ, ಪಿ.ಎ. ಕಿಣಿ, ಬಸ್ತಿ ಸರ್ವೋತ್ತಮ ಪೈ, ಕೊಡಿಬೈಲು ನಾರಾಯಣ ಹೆಗ್ಡೆ, ಅರುಣಾಕರ ಡಿ. ಶೆಟ್ಟಿ, ಸುಭಾಶ್ಚಂದ್ರ ಹೆಗ್ಡೆ, ಜಯಪ್ರಕಾಶ್‌ ಹೆಗ್ಡೆ, ಹರ್ಷವರ್ಧನ ಹೆಗ್ಡೆ, ಗೋವರ್ಧನದಾಸ ಹೆಗ್ಡೆ, ಅಮರ್‌ನಾಥ ಆರ್‌. ಶೆಟ್ಟಿ, ಎಚ್‌. ಕೃಷ್ಣಮೂರ್ತಿ, ಎನ್‌.ಬಿ. ಶೆಟ್ಟಿ, ಅರವಿಂದ ಹೆಗ್ಡೆ ಅಂಜಾರು ಬೀಡು, ಹರಿಪ್ರಸಾದ್‌ ಶೆಟ್ಟಿ ಅಂಜಾರು ಬೀಡು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next