Advertisement

ಭೂಮಿಯಾಳದಲ್ಲಿದೆ ಸಮುದ್ರ! ವಜ್ರವೊಂದರ ಆಧಾರದಲ್ಲಿ ವಿಜ್ಞಾನಿಗಳ ಅಂದಾಜು

11:15 PM Sep 30, 2022 | Team Udayavani |

ನವದೆಹಲಿ: ಭೂಮಿಯಲ್ಲಿ ಅಟ್ಲಾಂಟಿಕ್‌, ಪೆಸಿಫಿಕ್‌, ಹಿಂದೂ ಮಹಾಸಾಗರ, ಆರ್ಕ್ಟಿಕ್, ದಕ್ಷಿಣ ಸಮುದ್ರ ಎಂಬ ಹೆಸರಿನ ಐದು ಸಮುದ್ರಗಳಿವೆ. ಇನ್ನೂ ಒಂದು ಸಮುದ್ರವಿದೆ ಗೊತ್ತಾ? ಅದೂ ಭೂಮಿಯ ಗರ್ಭದಾಳದಲ್ಲಿ!
ಇಂತಹದ್ದೊಂದು ಖಚಿತ ಅಭಿಪ್ರಾಯಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

Advertisement

ಇತ್ತೀಚೆಗೆ ಅಮೆರಿಕ-ಇಟಲಿ-ಜರ್ಮನಿಗಳು ಒಂದು ವಜ್ರವನ್ನು ಪರಿಶೀಲಿಸಿದ್ದಾರೆ. ಅದನ್ನು ನೋಡಿ ಭೂಮಿಯಡಿ ಸಮುದ್ರದಷ್ಟು ವಿಸ್ತಾರದಲ್ಲಿ ನೀರಿದೆ ಎಂದು ಅವರು ಊಹಿಸಿದ್ದಾರೆ. ವಿಜ್ಞಾನಿಗಳಿಗೆ ಬೋಟ್ಸ್ವಾನದಲ್ಲಿ 1.5 ಸೆಂಟಿಮೀಟರ್‌ ಗಾತ್ರದ ವಜ್ರ ಸಿಕ್ಕಿದೆ. ಅದು ಸಿದ್ಧವಾಗಿರುವುದು ಭೂಮಿಯ ಮೇಲ್ಪದರದಿಂದ 660 ಕಿ.ಮೀ. ಆಳದಲ್ಲಿ. ಅಷ್ಟು ಆಳದಲ್ಲಿ ಇಂತಹ ವಜ್ರ ಸಿಕ್ಕಿರಬೇಕಾದರೆ, ಅದಕ್ಕೆ ಬೇಕಾದ ರಾಸಾಯನಿಕ ಸಂರಚನಾ ವ್ಯವಸ್ಥೆ ಅಲ್ಲಿರಬೇಕು.

ಭೂಮಿಯಾಳದಲ್ಲಿ ಪರಿವರ್ತನಾ ವಲಯವಿದೆ. ಅದು ಶುರುವಾಗುವುದು ಮೇಲ್ಪದರದಿಂದ 410 ಕಿ.ಮೀ. ಆಳದಿಂದ 690 ಕಿ.ಮೀ. ಆಳದ ನಡುವೆ. ಈ ಹಂತವನ್ನು ಶಿಲಾಪದರ ಎನ್ನುತ್ತಾರೆ. ಇಲ್ಲಿಂದ ನಂತರ ದೊಡ್ಡ ಅಂತರವಿದೆ.

ಅನಂತರವಿರುವುದೇ ಆಳಾತಿಆಳ ಕೆಳಪದರ. 690 ಕಿ.ಮೀ. ಆಳದಲ್ಲಿರುವ ಶಿಲಾಪದರವೇ ಭೂಮಿಗೆ ಆಧಾರ. ಇಲ್ಲಿ ಆಲಿವಿನ್‌ ಎಂಬ ಖನಿಜವಿದೆ.

ಇಲ್ಲಿರುವ ಒತ್ತಡದ ಪರಿಣಾಮ ಹವಳಗಳ ರೂಪ ಬದಲಾಗುವ ಅವಕಾಶವಿದೆ. ಹಾಗೆಯೇ ಭೂಮಿಯ ಮೇಲ್ಪದರಿಂದ 520 ಕಿ.ಮೀ. ಆಳದಲ್ಲಿ ರಿಂಗ್‌ವುಡೈಟ್‌ ಪದರ ಬರುತ್ತದೆ. ಬೋಟ್ಸ್ವಾನದಲ್ಲಿ ಸಿಕ್ಕ ವಜ್ರವನ್ನು ಪರಿಶೀಲಿಸಿದಾಗ ಈ ರಿಂಗ್‌ವುಡೈಟ್‌ ಭಾಗದಲ್ಲಿ ಭಾರೀ ಪ್ರಮಾಣದ ನೀರಿರುವ ಸುಳಿವು ಸಿಕ್ಕಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next