Advertisement

PTI ಅಧ್ಯಕ್ಷರಾಗಿ ಕೆ.ಎನ್‌.ಶಾಂತಕುಮಾರ್‌ ನೇಮಕ

10:03 PM Sep 29, 2023 | Team Udayavani |

ನವದೆಹಲಿ: ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪ್ರತಿಕೆಗಳ ಮಾತೃ ಸಂಸ್ಥೆಯಾದ ದಿ ಪ್ರಿಂಟರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ನಿರ್ದೇಶಕ ಕೆ.ಎನ್‌. ಶಾಂತಕುಮಾರ್‌ ಅವರು ಸುದ್ದಿಸಂಸ್ಥೆ ಪ್ರಸ್‌ ಟ್ರಸ್ಟ್‌ ಆಫ್ ಇಂಡಿಯಾದ(ಪಿಟಿಐ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ಶುಕ್ರವಾರ ನಡೆದ ಪಿಟಿಐನ ಆಡಳಿತ ಮಂಡಳಿ ನಿರ್ದೇಶಕರ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದೂಸ್ಥಾನ್‌ ಟೈಮ್ಸ್‌ ಸಿಇಒ ಪ್ರವೀಣ್‌ ಸೋಮೇಶ್ವರ್‌ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ 1 ವರ್ಷದ್ದಾಗಿದ್ದು, ಈ ಹಿಂದೆ ಅವೀಕ್‌ ಸರ್ಕಾರ್‌ 2 ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಬಾರಿ ಅಧ್ಯಕ್ಷರಾಗಿರುವ ಶಾಂತಕುಮಾರ್‌ ಅವರು ಈ ಹಿಂದೆ ಪಿಟಿಐನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸುದ್ದಿಗಳ ಜತೆಗೆ ವಿಡಿಯೋ ಸುದ್ದಿಗಳನ್ನೂ ನೀಡುವ ಮೂಲಕ ಪಿಟಿಐ ಸಂಕ್ರಮಣ ಕಾಲದಲ್ಲಿದ್ದು, ಈ ಸಮಯದಲ್ಲಿ ತಾವು ಅಧ್ಯಕ್ಷನಾಗಿರುವುದು ಸಂತಸ ತಂದಿದೆ ಎಂದೂ ಶಾಂತಕುಮಾರ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next