ಬೆಂಗಳೂರು: ಹೈನೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ ನಿಯಮಿತ (ಕೆಎಂಎಫ್) ಇದೀಗ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಕಳೆದ ಮೇ 24ರಂದು 91.07 ಲಕ್ಷ ಕೆ.ಜಿ. ಗರಿಷ್ಠ ಪ್ರಮಾಣದ ಹಾಲು ಶೇಖರಿಸಿ ಮಂಡಲದ ಇತಿಹಾಸದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಹಾಲು ಶೇಖರಣೆ ಮಾಡುವ ಮೂಲಕ ಮತ್ತೂಂದು ಯಶೋಗಾಥೆ ಬರೆದಿದೆ.
ಈ ಹಿಂದೆ ಕೆಎಂಎಫ್ 2020ನೇ ಸಾಲಿನ ಜುಲೈ 14ರಂದು 88.30 ಲಕ್ಷ ಕೆ.ಜಿ.ಯಷ್ಟು ಗರಿಷ್ಠ ಪ್ರಮಾಣದ ಹಾಲನ್ನು ಶೇಖರಣೆ ಮಾಡಿ ಮೊದಲ ಬಾರಿಗೆ ಹೊಸ ಮೈಲುಗಲ್ಲು ಸ್ಥಾಪಿಸಿತ್ತು. 2021ರ ಜೂ. 11ರಂದು 90.62 ಲಕ್ಷ ಕೆ.ಜಿ.ಯಷ್ಟು ಗರಿಷ್ಠ ಪ್ರಮಾಣದ ಹಾಲನ್ನು ಶೇಖರಿಸಿ 2ನೇ ಬಾರಿ ಮೈಲಿಗಲ್ಲನ್ನು ಮೆರೆದಿತ್ತು. ಇದೀಗ 91.07 ಲಕ್ಷ ಕೆ.ಜಿ. ಪ್ರಮಾಣದಷ್ಟು ಹಾಲು ಶೇಖರಿಸಿ ಮಂಡಲದ ಇತಿಹಾಸದಲ್ಲಿ ಮೂರನೇ ಬಾರಿ ಹೊಸ ದಾಖಲೆ ಬರೆದಿದೆ ಎಂದು ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಹೇಳಿದ್ದಾರೆ.
100 ಲಕ್ಷ ಕೆ.ಜಿ. ಗುರಿ
ಮುಂದಿ ದಿನಗಳಲ್ಲಿ ಸರಾಸರಿ ಲೆಕ್ಕಾಚಾರದಲ್ಲಿ ದಿನವಹಿ 100 ಲಕ್ಷ ಕೆ.ಜಿ. ಪ್ರಮಾಣದಷ್ಟು ಹಾಲು ಶೇಖರಣೆ ಮಾಡುವಷ್ಟರ ಮಟ್ಟಿಗೆ ಹಾಲು ಉತ್ಪಾದನ ವೇಗವನ್ನು ವೃದ್ಧಿಸಿಕೊಳ್ಳುವುದು ಕೆಎಂಎಫ್ನ ಗುರಿಯಾಗಿದೆ ಎಂದು ಬಿ.ಸಿ. ಸತೀಶ್ ತಿಳಿಸಿದ್ದಾರೆ.