Advertisement

ತಿರುಪತಿ ಲಡ್ಡುಗೆ ಕೆಎಂಎಫ್ ತುಪ್ಪ  

12:30 AM Feb 13, 2019 | |

ಬೆಂಗಳೂರು: ವಿಶ್ವ ವಿಖ್ಯಾತ ತಿರುಪತಿಯಲ್ಲಿ ಲಡ್ಡು ಪ್ರಸಾದ ತಯಾರಿಸಲು ಕೆಎಂಎಫ್ (ನಂದಿನಿ )ತುಪ್ಪ ಪೂರೈಕೆಗೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಆದೇಶ ನೀಡಿದೆ. ಈ ಮೂಲಕ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಬಳಕೆಯಾಗಲಿದ್ದು ಲಕ್ಷಾಂತರ ಭಕ್ತರು ಪ್ರಸಾದವಾಗಿ ಸ್ವೀಕರಿಸುವ ಲಡ್ಡುಗೆ ಕರ್ನಾಟಕದ ಕೆಎಂಎಫ್ ನಂದಿನಿ ತುಪ್ಪ ಬಳಕೆ ಮಾಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.

Advertisement

ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ಪ್ರಸಿದಟಛಿ ಲಡ್ಡು ಪ್ರಸಾದ ತಯಾರಿಸಲು ನಂದಿನ ತುಪ್ಪ ಸರಬರಾಜು ಮಾಡಲು ಆದೇಶ ನೀಡಿದೆ. ಸುಮಾರು 20 ವರ್ಷಗಳಿಂದ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿ(ಕೆಎಂಎಫ್) ಯ ಉತ್ಕೃಷ್ಟ ಮತ್ತು ಸುವಾಸಿತ ನಂದಿನಿ ತುಪ್ಪ ಬಳಸಿ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯು ಲಡ್ಡುಗಳನ್ನು ತಯಾರಿಸುತ್ತಿದೆ. ಪ್ರಸಕ್ತ 14 ಲಕ್ಷ ಕೆ.ಜಿ. ನಂದಿನಿ ತುಪ್ಪ ಸರಬರಾಜು ಮಾಡಲು ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯಿಂದ ಆದೇಶ ಪಡೆಯಲಾಗಿದೆ. ಅದರಂತೆ ತತಕ್ಷಣದಿಂದ 14 ಲಕ್ಷ ಕೆ.ಜಿ. ತುಪ್ಪ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಇನ್ಮುಂದೆ ಪ್ರಸಿದಟಛಿ ಲದ್ದು ಪ್ರಸಾದವು ನಂದಿನಿ ತುಪ್ಪದ ಸುವಾಸನೆ ಮತ್ತು ರುಚಿಯೊಂದಿಗೆ ಭಕ್ತರಿಗೆ ಲಭಿಸಲಿದೆ ಎಂದು ಕೆಎಂಎಫ್ ಮಾರುಕಟ್ಟೆ ವಿಭಾಗದ ನಿರ್ದೇಶಕ ಮೃತ್ಯುಂಜಯ ಟಿ.ಕುಲಕರ್ಣಿ ತಿಳಿಸಿದರು.

ಕೆಎಂಎಫ್ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಗುಣಮಟ್ಟಕ್ಕಾಗಿ ಐಎಸ್‌ಒ ಮತ್ತು ಎಫ್ ಎಸ್‌ಸ್‌ಐ ಪ್ರಮಾಣ ಪತ್ರ ಹೊಂದಿದ್ದು, ರಾಷ್ಟ್ರೀಯ ಹಾಲು ಅಭಿವೃದಿಟಛಿ ಮಂಡಳಿಯು ಸಹ ಗುಣಮಟ್ಟ ಚಿಹ್ನೆಯನ್ನು ನಮ್ಮ ಒಕ್ಕೂಟ ಮತ್ತು ಘಟಕಗಳಿಗೆ ನೀಡಿದೆ. ದೇಶದ ರಕ್ಷಣಾ ಇಲಾಖೆಗೆ ದೀರ್ಘ‌ ಕಾಲ ಬಾಳಿಕೆಗೆ ಬರುವ ಗುಡ್‌ಲೈಫ್ ಹಾಲು, ತುಪ್ಪ, ಬೆಣ್ಣೆ ಮತ್ತು ಹಾಲಿನ ಪುಡಿಯನ್ನು ವರ್ಷಪೂರ್ತಿ ಸರಬರಾಜು ಮಾಡಲಾಗುತ್ತಿದೆ. ನೆರೆಯ ರಾಜ್ಯ ಮತ್ತು ರಾಷ್ಟ್ರಗಳಿಗೂ ನಂದಿನಿ ಉತ್ಪನ್ನ ರಫ್ತು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಕೆಎಂಎಫ್ ರಾಷ್ಟ್ರದ ಎರಡನೇ ಅತಿದೊಡ್ಡ ಸಹಕಾರಿ ಹಾಲು ಮಹಾಮಂಡಳಿಯಾಗಿದೆ.

ಪ್ರತಿದಿನ ರಾಜ್ಯದ ರೈತರಿಂದ 74 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ. ಸರಿ ಸುಮಾರು 18 ಕೋಟಿ ರೂ.ಗಳನ್ನು ರೈತರಿಗೆ ಪಾವತಿಸಲಾಗುತ್ತಿದೆ. ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ಹಾಲಿನ ಪೊಟ್ಟಣ, ಗುಡ್‌ಲೈಪ್‌ ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ತುಪ್ಪ, ಬೆಣ್ಣೆ, ಪನ್ನೀರ್‌, ಕೇಸರ್‌ ಪೇಡ, ಬಾದಮ್‌ ಬರ್ಪಿ, ಕ್ಯಾಶು ಬರ್ಫಿ, ಮೈಸೂರ್‌ ಪಾಕ್‌ ಸೇರಿದಂತೆ ಅನೇಕ ಉತ್ಪನ್ನವನ್ನು ಒದಗಿಸುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next