Advertisement
ಕೆಎಂಎಫ್ ನಲ್ಲಿ 15 ಒಕ್ಕೂಟಗಳಿದ್ದು ಎಲ್ಲ ಒಕ್ಕೂಟಗಳಲ್ಲಿ ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಹಾಲು ಉತ್ಪಾದನೆ ಪ್ರಮಾಣ ಪ್ರಸ್ತುತ 87 ಲಕ್ಷ ಲೀಟರ್‌ಗೆ ತಲುಪಿದೆ. ಈ ಹಿಂದೆ ಕೆಎಂಎಫ್ ಜೂನ್ 2021ರಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪಾದನೆಯ ದಾಖಲೆಯಾಗಿತ್ತು.
Related Articles
Advertisement
ಬಮೂಲ್‌ನಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೌಡರ್ ಮಾಡಿ ದಾಸ್ತಾನು ಇಟ್ಟುಕೊಂಡು ಮಾರುಕಟ್ಟೆಯಲ್ಲಿ ಬೇಡಿಕೆ ಬಂದಾಗ ಮಾರಾಟ ಮಾಡಲಾಗುವುದು. ಇದರಿಂದ ಒಕ್ಕೂಟಕ್ಕೆ ಲಾಭವಾಗಲಿದೆ. ಆದರೆ, ಯಾವುದೇ ಕಾರಣ ಕ್ಕೂ ಹಾಲು ಉತ್ಪಾದಕರಿಗೆ ರಜೆ ಘೋಷಿಸುವುದಿಲ್ಲ ಎಂದು ತಿಳಿಸುತ್ತಾರೆ.
ಹಾಸನ ಡೈರಿಯಲ್ಲಿ ಈ ಹಿಂದೆ ಪ್ರತಿ ನಿತ್ಯ 9.5 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಈಗ 11.5 ಲಕ್ಷ ಲೀಟರ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಹಾಸನ ಹಾಲು ಒಕ್ಕೂಟದ ಹಿರಿಯ ಅಧಿಕಾರಿ ಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗುವ ಹಾಲನ್ನು ನಂದಿನಿ ಬ್ರಾಂಡ್‌ನ ವಿವಿಧ ಉತ್ಪನ್ನಗಳಿಗೆ ಬಳಕೆ ಮಾಡಲಾಗುವುದು. ಜತೆಗೆ ಪೌಡರ್ ರೂಪದಲ್ಲಿ ದಾಸ್ತನು ಮಾಡಲಾಗುವುದು ಎಂದು ಹೇಳುತ್ತಾರೆ.
ಅವಧಿಗೆ ಮುನ್ನ ಮಳೆ ಹಿನ್ನೆಲೆಯಲ್ಲಿ ಕೆಎಂಎಫ್ ವ್ಯಾಪ್ತಿಯ ಹಾಲು ಒಕ್ಕೂಟಗಳಲ್ಲಿ ಹಾಲು ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕೆಎಂಎಫ್ ನಲ್ಲಿ ಪ್ರತಿದಿನ 83.5 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಿತ್ತು. ಇದೀಗ 87 ಲಕ್ಷ ಲೀಟರ್‌ಗೆ ತಲುಪಿದೆ. ಮುಂದಿನ ದಿನಗಳಲ್ಲಿ ನಿತ್ಯ 97 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುವ ಸಾಧ್ಯತೆಯಿದೆ. ●ಬಿ.ಸಿ.ಸತೀಶ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ
●ದೇವೇಶ ಸೂರಗುಪ್ಪ