Advertisement

KMC ವೈದ್ಯಕೀಯ ಜೆನೆಟಿಕ್ಸ್ ವಿಭಾಗದಿಂದ ಮೇ. 25ರಂದು ʼಓಪನ್ ಡೇʼ ಕಾರ್ಯಕ್ರಮ

05:50 PM May 22, 2024 | Team Udayavani |

ಮಣಿಪಾಲ: ಅಪರೂಪದ ಅನುವಂಶಿಕ ಅಸ್ವಸ್ಥತೆಗಳಲ್ಲಿ ವಿಶೇಷ ಸೇವೆಗಳಿಗೆ ಹೆಸರುವಾಸಿಯಾದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಜೆನೆಟಿಕ್ಸ್ (ತಳಿಶಾಸ್ತ್ರ)ವಿಭಾಗ 2024 ರ ಶನಿವಾರ ಮೇ. 25ರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ‘ಓಪನ್ ಡೇ’ ಕಾರ್ಯಕ್ರಮ ಆಯೋಜಿಸಲು ಸಜ್ಜಾಗಿದೆ.

Advertisement

ಕಾರ್ಯಕ್ರಮವು ಮಣಿಪಾಲದ ಬೇಸಿಕ್ ಲೈಫ್ ಸೈನ್ಸ್ ಕಟ್ಟಡದ 3ನೇ ಮಹಡಿಯಲ್ಲಿರುವ ವೈದ್ಯಕೀಯ ತಳಿಶಾಸ್ತ್ರ ವಿಭಾಗದಲ್ಲಿ ನಡೆಯಲಿದೆ.

ತಳಿಶಾಸ್ತ್ರ ಸಂಬಂಧಿತ ಆರೋಗ್ಯ ಮತ್ತು ರೋಗದ ಕುರಿತು ಎಲ್ಲರಿಗೂ ಪರಿಚಯಿಸಲು ಮೂಲಭೂತ ಪರಿಕಲ್ಪನೆಗಳೊಂದಿಗೆ ಈ ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ.

ಎಲ್ಲಾ ವಯಸ್ಸಿನವರನ್ನು ತೊಡಗಿಸಿಕೊಳ್ಳುವ ವಿನೋದ ಚಟುವಟಿಕೆ ಮತ್ತು ತಿಳುವಳಿಕೆ, ಮಾಹಿತಿ ನೀಡುವ ಅನೇಕ ಸಂವಾದಾತ್ಮಕ ಆಟಗಳು ಮತ್ತು ರಸಪ್ರಶ್ನೆಗಳು ಕಾರ್ಯಕ್ರಮದಲ್ಲಿ ಒಳಗೊಂಡಿದೆ.

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಈ ಮಾಹಿತಿ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಲು ಎಲ್ಲಾ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಿದೆ.

Advertisement

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ವಿಭಾಗದ ಸೌಲಭ್ಯಗಳನ್ನು ಅನ್ವೇಷಿಸಲು, ಅಂತರರಾಷ್ಟ್ರೀಯ ಮಾನದಂಡಗಳಲ್ಲಿ ನಡೆಯುತ್ತಿರುವ ಸಂಶೋಧನಾ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ವೈದ್ಯಕೀಯ ತಳಿಶಾಸ್ತ್ರ ಕ್ಷೇತ್ರದಲ್ಲಿ ತಜ್ಞರೊಂದಿಗೆ ಸಂವಹನ ನಡೆಸಲು ಅವಕಾಶವಿದೆ.

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಜೆನೆಟಿಕ್ಸ್ (ತಳಿಶಾಸ್ತ್ರ) ವಿಭಾಗವು ಅಪರೂಪದ ಅನುವಂಶಿಕ ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುವ ರೋಗಿಗಳು ಮತ್ತು ಕುಟುಂಬಗಳಿಗೆ ಸಮಗ್ರ ಸೇವೆಗಳನ್ನು ಒದಗಿಸಲು ಮೀಸಲಾಗಿರುವ ಭಾರತದ ಕೆಲವೇ ಕೇಂದ್ರಗಳಲ್ಲಿ ಒಂದಾಗಿದೆ. ಕ್ಲಿನಿಕಲ್ ಸೇವೆಗಳ ಜೊತೆಗೆ ವಿಭಾಗವು ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ಪ್ರವರ್ತಕ ಸಂಶೋಧನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದೆ.

‘ಓಪನ್ ಡೇ ‘ ಕಾರ್ಯಕ್ರಮದ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ವೈದ್ಯಕೀಯ ಜೆನೆಟಿಕ್ಸ್ ವಿಭಾಗವನ್ನು ಸಂಪರ್ಕಿಸಿ ಅಥವಾ ದೂ.ಸಂ. 0820 2922836 ಗೆ ಕರೆ ಮಾಡಿ ವಿಚಾರಿಸಬಹುದು ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next