Advertisement

ಹಾರುವ ಕಾರನ್ನು ಆವಿಷ್ಕರಿಸಿದ ಕ್ಲೈನ್‌ ವಿಷನ್‌ ಕಂಪನಿ! 30 ವರ್ಷಗಳ ಪ್ರಯತ್ನಕ್ಕೆ ಯಶಸ್ಸು

06:25 PM Nov 04, 2020 | sudhir |

ಬ್ರಾಟಿಸ್ಲಾವಾ: ಸತತ 30 ವರ್ಷಗಳ ಪ್ರಯತ್ನದ ಬಳಿಕ ಕಂಪನಿಯೊಂದು ತನ್ನ ಕನಸನ್ನು ನನಸಾಗಿಸಿಕೊಂಡಿದ್ದು, ಹಾರುವ ಕಾರನ್ನು ಆವಿಷ್ಕರಿಸಿದೆ. ಈ ಕಾರ್‌ ನೆಲದ ಮೇಲೆ ಓಡುತ್ತೆ, ಮಾತ್ರವಲ್ಲದೆ ಆಕಾಶದಲ್ಲಿಯೂ ಹಾರುತ್ತದೆ.

Advertisement

ಹೌದು, ಯೂರೋಪ್‌ನ ಸ್ಲೋವಾಕಿಯಾ ದೇಶದ ಕ್ಲೈನ್‌ ವಿಷನ್‌ ಕಂಪನಿ ಏರ್‌ ಕಾರ್‌ ತಯಾರಿಸುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದೆ. ಇತ್ತೀಚಿನ ಪೀಳಿಗೆಯ ಫ್ಲೈಯಿಂಗ್‌ ಕಾರು ಪರೀಕ್ಷಾರ್ಥ ಹಾರಾಟವನ್ನುವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಿಳಿಸಿದೆ.

ಈ ಏರ್‌ ಕಾರ್‌ ಆಕಾಶದಲ್ಲಿ ಹಾರಬಲ್ಲದು, ಮಾತ್ರವಲ್ಲದೆ ನೆಲದ ಮೇಲೆ ಓಡಬಲ್ಲದು. ಹಾರುವ ವೇಳೆ ತನ್ನಷ್ಟಕ್ಕೆ ತಾನೇ ಏರೋಪ್ಲೇನ್‌ ಆಗಿ ಬದಲಾಗುತ್ತದೆ. ಏರ್‌ ಕಾರ್‌ನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ.

ಇದನ್ನೂ ಓದಿ:ಎಂ.ಎ.ಸಿ.ಟಿ‌ ಮತ್ತು ಹೊಸದುರ್ಗ ಫಾಸ್ಟ್‌ ಟ್ರ್ಯಾಕ್‌ ಸ್ಪೆಷಲ್‌ ನ್ಯಾಯಾಲಯ ಉದ್ಘಾಟನೆ

ಕಾರ್‌ ಸಾಮರ್ಥ್ಯ ಎಷ್ಟು?
ಏರ್‌ ಕಾರ್‌ 1,100 ಕೆ.ಜಿ.ತೂಕ ಇದ್ದು, ಹೆಚ್ಚುವರಿಯಾಗಿ 200 ಕೆ.ಜಿ.ತೂಕವನ್ನು ಹೊತ್ತಯ್ಯಬಲ್ಲದು. ಇತ್ತೀಚಿನ ಪೀಳಿಗೆಯ ಈ ಹಾರುವ ಕಾರನ್ನು ಕ್ಲೈನ್‌ ವಿಷನ್‌ ಕಂಪನಿ ಅಭಿವೃದ್ಧಿ ಪಡಿಸಿದ್ದು, ಕೇವಲ 3 ನಿಮಿಷಗಳೊಳಗೆ ಈ ಕಾರ್‌ ರಸ್ತೆಯಿಂದ ಆಕಾಶಕ್ಕೆ ಹಾರಬಲ್ಲದು. ಕಾರ್‌ನ ವಿಡಿಯೋವನ್ನು ಕ್ಲೈನ್‌ ವಿಷನ್‌ ತನ್ನ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಭವಿಷ್ಯದ ವಾಹನವಾಗಿದೆ ಎಂದು ಬರೆದುಕೊಂಡಿದೆ. ಈ ವಿಡಿಯೋದಲ್ಲಿ ಏರ್‌ ಕಾರ್‌ ರೆಕ್ಕೆ ಬಿಚ್ಚಿ ಹಾರುವ ಮೊದಲು ರಸ್ತೆಯಲ್ಲಿ ಓಡಾಡುತ್ತದೆ. ಇನ್ನು ಆಟೋ ಎವಲ್ಯೂಷನ್‌ ಪ್ರಕಾರ, ಅಂತಿಮ ಏರ್‌ಕಾರನ ಮೂಲ ಮಾದರಿಯನ್ನು 2019ರಲ್ಲಿ ಸಾರ್ವಜನಿಕರಿಗೆ ಪರಿಚಯಿಸಲಾಗಿತ್ತು. ಇತ್ತೀಚೆಗೆ ಸ್ಲೋವಾಕಿಯಾದ ಪಿಸ್ತಾನಿ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಎರಡು ಬಾರಿ ಹಾರಾಟ ಹಾಗೂ ಎರಡು ಬಾರಿ ಲ್ಯಾಂಡಿಂಗ್‌ ಎಲ್ಲ ನಾಲ್ಕು ಪ್ರಯೋಗಗಳು ಯಶಸ್ವಿಯಾಗಿದ್ದವು.

Advertisement

ಇದನ್ನೂ ಓದಿ:ಕೆರೆಗೆ ಈಜಲು ಹೋದ ನಾಲ್ಕು ವಿದ್ಯಾರ್ಥಿಗಳು ನೀರುಪಾಲು :ಇಬ್ಬರ ದೇಹ ಪತ್ತೆ, ಇಬ್ಬರು ನಾಪತ್ತೆ

ಎಷ್ಟು ವೇಗದಲ್ಲಿ ಚಲಿಸುತ್ತೆ?
ಪೊ›ಫೆಸರ್‌ ಸ್ಟೆಫ‌ನ್‌ ಕ್ಲೈನ್‌ ಅವರ ಕ್ಲೈನ್‌ ವಿಷನ್‌ ಕಂಪೆನಿಯ ಮಾಹಿತಿ ಪ್ರಕಾರ, ಈ ಏರ್‌ ಕಾರ್‌ ಭೂಮಿಯಿಂದ ಸುಮಾರು 300 ಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಲಿದೆ. ಅಲ್ಲದೆ ಪ್ರತಿ ಗಂಟೆಗೆ 200 ಕಿ.ಮೀ.ವೇಗದಲ್ಲಿ ಚಲಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಇನ್ನು ಈ ವಿಡಿಯೋ ನೋಡಿದ ಹಲವು ಜನ ಕಮೆಂಟ್‌ ಮಾಡುತ್ತಿದ್ದು, ಅತ್ಯಂತ ಪ್ರಭಾವಶಾಲಿ ಅಂತಿಮವಾಗಿ ಪ್ರಾಯೋಗಿಕ ಹಾರುವ ಕಾರ್‌ ಲಾಂಚ್‌ ಆಗಿದ್ದು, ತುಂಬಾ ಸುಂದರವಾಗಿದೆ. ಪೊ›ಫೆಸರ್‌ ಕ್ಲೈನ್‌ ಮತ್ತು ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next