Advertisement

ಮಳೆ ನಡುವೆ ರಾಹುಲ್‌-ಗೇಲ್‌ ಖೇಲ್‌

12:41 PM Apr 22, 2018 | Team Udayavani |

ಕೋಲ್ಕತಾ: ಮಳೆ ನಡುವೆ ಬ್ಯಾಟಿಂಗ್‌ ಮಿಂಚು ಹರಿಸಿದ ಪಂಜಾಬ್‌ ತಂಡದ ಆರಂಭಿಕರಾದ ಕೆ.ಎಲ್‌. ರಾಹುಲ್‌ ಮತ್ತು ಕ್ರಿಸ್‌ ಗೇಲ್‌ ಆತಿಥೇಯ ಕೆಕೆಆರ್‌ಗೆ 9 ವಿಕೆಟ್‌ಗಳ ಭಾರೀ ಸೋಲುಣಿಸಿದ್ದಾರೆ. ಇದು ಪಂಜಾಬ್‌ 5 ಪಂದ್ಯಗಳಲ್ಲಿ ಸಾಧಿಸಿದ 4ನೇ ಜಯವಾಗಿದೆ.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೆಕೆಆರ್‌ ಗಳಿಕೆ 7 ವಿಕೆಟಿಗೆ 191 ರನ್‌. ಪಂಜಾಬ್‌ 8.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 96 ರನ್‌ ಮಾಡಿದ ವೇಳೆ ಮಳೆ ಸುರಿಯಿತು. ಈ ಹಂತದಲ್ಲೇ ಪಂದ್ಯ ಕೊನೆಗೊಂಡಿದ್ದರೂ ಪಂಜಾಬ್‌ ಗೆಲ್ಲುತ್ತಿತ್ತು. ಡಿ-ಎಲ್‌ ನಿಯಮದಂತೆ ಆಗ ಪಂಜಾಬ್‌ 31 ರನ್ನುಗಳ ಮುನ್ನಡೆಯಲ್ಲಿತ್ತು. ಆದರೆ ಮಳೆ ನಿಂತ ಬಳಿಕ ಓವರ್‌ಗಳ ಸಂಖ್ಯೆಯನ್ನು 13ಕ್ಕೆ ಕಡಿತಗೊಳಿಸಿ 125 ರನ್ನುಗಳ ಗುರಿಯನ್ನು ನಿಗದಿಪಡಿಸಲಾಯಿತು. 11.1 ಓವರ್‌ಗಳಲ್ಲಿ ಒಂದು ವಿಕೆಟಿಗೆ 126 ರನ್‌ ಬಾರಿಸುವ ಮೂಲಕ ಅಶ್ವಿ‌ನ್‌ ಪಡೆ ಜಯಭೇರಿ ಮೊಳಗಿಸಿತು.

ಸ್ಫೋಟಕ ಆಟವನ್ನು ಸತತ 3ನೇ ಪಂದ್ಯಕ್ಕೂ ವಿಸ್ತರಿಸಿದ ಗೇಲ್‌ 38 ಎಸೆತಗಳಲ್ಲಿ 62 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಸಿಡಿಸಿದ್ದು 6 ಸಿಕ್ಸರ್‌ ಹಾಗೂ 5 ಬೌಂಡರಿ. ಇವರಿಗಿಂತ ಬಿರುಸಿನ ಆಟವಾಡಿದ ಕೆ.ಎಲ್‌. ರಾಹುಲ್‌ 27 ಎಸೆತಗಳಿಂದ 60 ರನ್‌ ಸೂರೆಗೈದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 9 ಫೋರ್‌, 2 ಸಿಕ್ಸರ್‌ ಒಳಗೊಂಡಿತ್ತು. ಇವರಿಬ್ಬರ ಮೊದಲ ವಿಕೆಟ್‌ ಜತೆಯಾಟದಲ್ಲಿ 9.4 ಓವರ್‌ಗಳಿಂದ 116 ರನ್‌ ಹರಿದು ಬಂತು.

ಕೆಕೆಆರ್‌ಗೆ ಲಿನ್‌, ಕಾರ್ತಿಕ್‌ ನೆರವು
ಆರಂಭಕಾರ ಕ್ರಿಸ್‌ ಲಿನ್‌ ಮತ್ತು ನಾಯಕ ದಿನೇಶ್‌ ಕಾರ್ತಿಕ್‌ ಅವರ ಹೋರಾಟದ ಫ‌ಲವಾಗಿ ಕೆಕೆಆರ್‌ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿತ್ತು. 16ನೇ ಓವರ್‌ ತನಕ ಪಂಜಾಬ್‌ ಬೌಲಿಂಗ್‌ ದಾಳಿಗೆ ಸವಾಲಾಗಿ ಉಳಿದ ಲಿನ್‌ 41 ಎಸೆತ ನಿಭಾಯಿಸಿ ಸರ್ವಾಧಿಕ 74 ರನ್‌ ಬಾರಿಸಿದರು. 2 ಅತ್ಯುತ್ತಮ ಜತೆಯಾಟಗಳಲ್ಲಿ ಭಾಗಿಯಾದರು. ಈ ಜವಾಬ್ದಾರಿಯುತ ಬ್ಯಾಟಿಂಗ್‌ ವೇಳೆ ಲಿನ್‌ ಬ್ಯಾಟಿನಿಂದ 4 ಸಿಕ್ಸರ್‌ ಹಾಗೂ 6 ಬೌಂಡರಿ ಸಿಡಿಯಿತು. 

ಆದರೆ ಲಿನ್‌ ನಿರ್ಗಮನದ ಬಳಿಕ ಕೆಕೆಆರ್‌ ರನ್‌ ಗಳಿಕೆಯಲ್ಲಿ ತೀವ್ರ ಕುಸಿತ ಕಂಡುಬಂತು. ಅಂತಿಮ 5 ಓವರ್‌ಗಳಲ್ಲಿ ಗಳಿಸಲು ಸಾಧ್ಯವಾದದ್ದು 45 ರನ್‌ ಮಾತ್ರ. ಈ ಹಂತದಲ್ಲಿ ಆ್ಯಂಡ್ರೂé ಟೈ “ಟೈಟ್‌’ ಬೌಲಿಂಗ್‌ ದಾಳಿ ಸಂಘಟಿಸಿ ಕೋಲ್ಕತಾಕ್ಕೆ ಕಡಿವಾಣ ಹಾಕಿದರು. ಟೈ ಸಾಧನೆ 30ಕ್ಕೆ 2 ವಿಕೆಟ್‌. ಸ್ರಾನ್‌ ಕೂಡ 2 ವಿಕೆಟ್‌ ಉರುಳಿಸಿದರೂ 50 ರನ್‌ ನೀಡಿ ದುಬಾರಿಯಾದರು. 

Advertisement

ದಿನೇಶ್‌ ಕಾರ್ತಿಕ್‌ ಕಪ್ತಾನನ ಆಟವಾಡುವಲ್ಲಿ ಯಶಸ್ವಿಯಾದರು. 28 ಎಸೆತ ಎದುರಿಸಿದ ಕಾರ್ತಿಕ್‌ 6 ಬೌಂಡರಿ ನೆರವಿನಿಂದ 43 ರನ್‌ ಬಾರಿಸಿದರು. ಇವರಿಬ್ಬರನ್ನು ಹೊರತುಪಡಿಸಿದರೆ ವನ್‌ಡೌನ್‌ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಅವರ ಆಟ ಉತ್ತಮವಾಗಿತ್ತು. 23 ಎಸೆತ ಎದುರಿಸಿದ ಉತ್ತಪ್ಪ 5 ಬೌಂಡರಿ, ಒಂದು ಸಿಕ್ಸರ್‌ ನೆರವಿನಿಂದ 34 ರನ್‌ ಹೊಡೆದರು. 

ಓಪನರ್‌ ಸುನೀಲ್‌ ನಾರಾಯಣ್‌ (1) ಅವರನ್ನು ಅಗ್ಗಕ್ಕೆ ಕಳೆದುಕೊಂಡ ಕೆಕೆಆರ್‌ ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಆಗ 1.3 ಓವರ್‌ಗಳಲ್ಲಿ ಕೇವಲ 6 ರನ್ನಷ್ಟೇ ಆಗಿತ್ತು. ಈ ಹಂತದಲ್ಲಿ ಜತೆಗೂಡಿದ ಲಿನ್‌-ಉತ್ತಪ್ಪ 8.1 ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿ 2ನೇ ವಿಕೆಟಿಗೆ 72 ರನ್‌ ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next