Advertisement

ಅವೇರ್‌ ಫೌಂಡೇಶನ್‌ಗೆ ನೆರವಾಗಲು ರಾಹುಲ್‌ ನಿರ್ಧಾರ

12:40 AM Apr 21, 2020 | Sriram |

ಬೆಂಗಳೂರು: ಮಕ್ಕಳ ಕಲ್ಯಾಣ ಸಲುವಾಗಿ ಶ್ರಮಿಸುತ್ತಿರುವ “ಅವೇರ್‌ ಫೌಂಡೇಶನ್‌’ಗೆ ನೆರವಾಗಲು ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ಕೆ.ಎಲ್‌. ರಾಹುಲ್‌, 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ತಾವು ಬಳಸಿದ್ದ ಬ್ಯಾಟ್‌, ಪ್ಯಾಡ್‌ ಮತ್ತು ಹೆಲ್ಮೆಟ್‌ ಸಹಿತ ಪ್ರಮುಖ ವಸ್ತುಗಳನ್ನು ಹರಾಜಿಗೆ ಇಡಲು ನಿಶ್ಚಯಿಸಿದ್ದಾರೆ.

Advertisement

“ದಿ ಭಾರತ್‌ ಆರ್ಮಿ’ ಸಹಯೋಗದಲ್ಲಿ ಹರಾಜು
ಟೀಮ್‌ ಇಂಡಿಯಾದ ಅಧಿಕೃತ ಅಭಿಮಾನಿ ಬಳಗ “ದಿ ಭಾರತ್‌ ಆರ್ಮಿ’ ಸಹಯೋಗದಲ್ಲಿ ಹರಾಜು ಮೂಲಕ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಈ ಕುರಿತಾಗಿ ವೀಡಿಯೊ ಸಂದೇಶವೊಂದನ್ನು ರವಾನಿಸಿರುವ ರಾಹುಲ್‌, ನಾನು ಒಂದು ಒಳ್ಳೆಯ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಇದು ಅತ್ಯಂತ ವಿಶೇಷವಾದದ್ದು ಕೂಡ. ನನ್ನ ಬ್ಯಾಟ್‌, ಪ್ಯಾಡ್‌, ಗ್ಲೌಸ್‌, ಹೆಲ್ಮೆಟ್‌ ಮತ್ತು ಸಮವಸ್ತ್ರ ಎಲ್ಲವನ್ನೂ ಭಾರತ್‌ ಆರ್ಮಿ ಜತೆಗಿನ ಸಹಯೋಗದಲ್ಲಿ ಹರಾಜು ಮಾಡಲಿದ್ದೇನೆ. ಈ ಹರಾಜಿನಿಂದ ಬರುವ ಹಣವನ್ನು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವೇರ್‌ ಫೌಂಡೇಶನ್‌ಗೆನೀಡಲಾಗುವುದು ಎಂದಿದ್ದಾರೆ.

ಇದೇ ಮೊದಲೇನಲ್ಲ
ರಾಹುಲ್‌ ಸಾಮಾಜಿಕ ಕಳಕಳಿ ಮೆರೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಪ್ರಾಣಿದಯಾ ಸಂಘಗಳಿಗೆ ನೆರವಾಗಿದ್ದಾರೆ. ಇನ್ನು ಲಾಕ್‌ಡೌನ್‌ ದಿನಗಳಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಆಹಾರ ಸಾಮಗ್ರಿ ಒದಗಿಸುವ ಕೆಲಸವನ್ನು ರಾಹುಲ್‌ ಮಾಡುತ್ತಿದ್ದು, ಈಗಾಗಲೇ ಹಲವಾರು ಬಾರಿ ದೇಣಿಗೆಯನ್ನು ಕೂಡ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next