ಕಲಬುರಗಿ: ಸಂವಿಧಾನದ 371 ಜೆ ವಿಧಿ ಅಡಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ವಾರ್ಷಿಕ 5000 ಕೋ. ರೂ. ಅನುದಾನ ಕೊಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಹೇಳಿದರು.
ರವಿವಾರ ನ ಕಲಬುರಗಿ ದಕ್ಷಿಣ ಮತಕ್ಷೇತ್ರದ ಸದಸ್ಯತ್ವ ಅಭಿಯಾನವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ಮಂಡಳಿಗೆ ಮೂರು ಸಾವಿರ ಕೋ.ರೂ ಅನುದಾನ ಎಂಬುದಾಗಿ ಬಜೆಟ್ ದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಮಂಡಳಿಗೆ ನೀಡಲಾಗಿರುವ ಅನುದಾನವನ್ನು ಇತರ ಇಲಾಖೆಗಳಿಗೆ ಬರುವ ಅನುದಾನ ಕಡಿತ ಮಾಡಿ ನೀಡುವುದು ಸಮಂಜಸವಲ್ಲ. ವಿಮಾನ ನಿಲ್ದಾಣ, ಜಯದೇವ್ ಆಸ್ಪತ್ರೆ ಹಾಗೂ ನೀರಾವರಿ ಯೋಜನೆ ಸೇರಿದಂತೆ ಇತರ ಕಾಮಗಾರಿಗಳಿಗೆ ಕೆಕೆಆರ್ ಡಿಬಿ ಅನುದಾನವನ್ನು ಬಳಸುವುದು ಸರಿಯಲ್ಲ. ಒಂದು ವೇಳೆ ಸರ್ಕಾರಕ್ಕೆ ನಿಜವಾಗಿ ಈ ಭಾಗ ಅಭಿವೃದ್ವಿಯಾಗಬೇಕೆಂದರೆ ಮಂಡಳಿಗೆ ಅನುದಾನ ವಿಶೇಷ ಅಭಿವೃದ್ದಿಗೆ ಬಳಕೆಯಟಗಬೇಕು. ಆದರೆ ತಮ್ಮ ಸರ್ಕಾರ ಬಂದಲ್ಲಿ ಮಂಡಳಿಗೆ ಐದು ಸಾವಿರ ಕೋ.ರೂ ನೀಡುವುದರ ಮುಖಾಂತರ ಈ ಭಾಗದ ಅಭಿವೃದ್ಧಿ ಗೆ ಮತ್ತೆ ನಾಂದಿ ಹಾಡಲಾಗುವುದು ಎಂದು ಭರವಸೆ ನೀಡಿದರು.
ಈ ಭಾಗದ ಅಭಿವೃದ್ದಿಯಾಗುವಲ್ಲಿ ಮರಳಿ ಕಾಂಗ್ರೆಸ್ ಪಕ್ಷ ಅಧಿಕಾರಕದಕ್ಕೆ ತರುವಲ್ಲಿ ಪಕ್ಷದ ಶ್ರಮ ಅಗತ್ಯವಿದೆ ಎಂದ ಖಂಡ್ರೆ, ಮುಂಬರುವ ವಿಧಾನಸಭೆ ಚುನಾವಣೆ ವೇಳೆಯೊಳಗೆ ಹೆಚ್ಚು ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠಗೊಳಿಸಬೇಕು. ಮಾರ್ಚ್ ತಿಂಗಳ 31 ರವರೆಗೆ ಅಭಿಯಾನ ಇರಲಿದೆ ಎಂದರು.
ಸದಸ್ಯತ್ವ ಮಾಡುವಾಗ ಎಚ್ಚರಿಕೆ ವಹಿಸಬೇಕು. ಖೊಟ್ಟಿ ಸದಸ್ಯತ್ವ ಅಗುವುದನ್ನು ತಡೆಯಬೇಕು. ಈ ಬಗ್ಗೆ ಮುಖ್ಯ ನೋಂದಣಿಗಾರರು ಸದಸ್ಯರಾಗ ಬಯಸುವ ವ್ಯಕ್ತಿಗಳ ಪೂರ್ವಾಪರ ತಿಳಿದುಕೊಳ್ಳಬೇಕು. ಕೆಲವು ಕಡೆ ಖೊಟ್ಟಿ ಸದಸ್ಯರು ಆಗಿರುವ ಬಗ್ಗೆ ಮಾಹಿತಿ ಇದೆ. ಅಂತಹ ಸದ್ಯತ್ವವನ್ನು ಯುವಕರನ್ನು ಅದರಲ್ಲೂ ಯುವತಿಯರ ಹೆಚ್ಚು ಹೆಚ್ಚು ಸದಸ್ಯತ್ವ ಮಾಡಬೇಕು ಎಂದು ಖಂಡ್ರೆ ಕರೆ ನೀಡಿದರು.
ಒಂದು ಬೂತ್ ನ ಮುಖ್ಯ ನೋಂದಣಿಗಾರರು ಮತ್ತೊಂದು ಬೂತ್ ನಲ್ಲಿ ಡಿಜಿಟಲ್ ಮಾಡಬಹುದು. ಈ ತರ ಮಾಡಲಾದ ನೋಂದಣಿಯನ್ನು ತಾಂತ್ರಿಕ ಸಮಿತಿ ಪರಿಶೀಲನೆ ನಡೆಸುತ್ತದೆ. ಕಳೆದ ಚುನಾವಣೆಯಲ್ಲಿ ನಾವು ದಕ್ಷಿಣದಲ್ಲಿ ಸೋತಿದ್ದೇವೆ. ಆದರೆ ಮುಂದಿನ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಬೇಕು. ಹಾಗಾಗಿ ಪ್ರತಿಬೂತ್ ನಲ್ಲಿಯೂ ಸುಮಾರು 200 ಸದಸ್ಯರನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಮುಖ್ಯ ನೋಂದಣಿಗಾರರು ಹಾಗೂ ನೋಂದಣಿಗಾರರೊಂದಿಗೆ ಸಂವಾದ ಮಾಡಿದ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಮಾರ್ಚ್ 31 ರವರೆಗೆ ಸದಸ್ಯತ್ವ ಅಭಿಯಾನ ಚಾಲನೆಯಲಿರಲಿದೆ ಎಂದು ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಡಾ. ಅಜಯಸಿಂಗ್ ಮಾತನಾಡಿ, ಬಿಜೆಪಿ ಸರ್ಕಾರ ಅಭಿವೃದ್ಧಿ ಎಂಬುದನ್ನೇ ಮರೆತ್ತಿದೆ ಎಂದು ವಾಗ್ದಾಳಿ ನಡೆಸಿದರು.