Advertisement

ಪ್ಲಾಸ್ಮಾ ಚಿಕಿತ್ಸೆಗೆ ಕೆಕೆಆರ್‌ಡಿಬಿ ಹಣ ಮಂಜೂರು

04:44 PM Aug 18, 2020 | Suhan S |

ಕಲಬುರಗಿ: ನಿಯಂತ್ರಣಗೊಳ್ಳದೇ ವ್ಯಾಪಕವಾಗುತ್ತಿರುವ ಕೋವಿಡ್‌-19 ನಿಯಂತ್ರಣದ ಹಿನ್ನೆಲೆಯಲ್ಲಿ ಸೋಂಕಿತರಿಗೆ ನಗರದ ಜಿಮ್ಸ್‌ನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಅಗತ್ಯ ಉಪಕರಣಗಳಿಗಾಗಿ 40 ಲಕ್ಷ ರೂ. ಮತ್ತು ಇಎಸ್‌ಐಸಿನಲ್ಲಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಗೆ 54 ಲಕ್ಷ ರೂ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ನೀಡಲಾಗಿದೆ.

Advertisement

ಕಲಬುರಗಿ ಜಿಮ್ಸ್‌ ಕೇಂದ್ರದಲ್ಲಿ ಪ್ಲಾಸ್ಮಾ ಥೆರಪಿ ಸ್ಥಾಪಿಸಿ ಉನ್ನತೀಕರಿಸಿದಕೋವಿಡ್‌ ಚಿಕಿತ್ಸಾ ವಿಧಾನ ಅಳವಡಿಸಲು 40 ಲಕ್ಷ ರೂ. ವೆಚ್ಚದಲ್ಲಿ ಪ್ಲಾಸ್ಮಾ ಥೆರಪಿ ಅಗತ್ಯ ಉಪಕರಣಗಳಿಗೆ ಮಂಜೂರಾತಿ ನೀಡಲಾಗಿದೆ. ಜತೆಗೆ ನಗರದ ಇಎಸ್‌ಐಸಿ ಆಸ್ಪತ್ರೆ ಕೋರಿಕೆ ಆಧರಿಸಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಗೆ 54 ಲಕ್ಷ ರೂ. ಅನುದಾನಕ್ಕೆ ಮಂಜೂರಿ ನೀಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ರೇವೂರ ತಿಳಿಸಿದ್ದಾರೆ.

ಮಂಡಳಿ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಅಡ್ವಾನ್ಸ್‌ ಲೈಫ್ ಸಪೋರ್ಟ್‌ ಅಂಬ್ಯುಲೆನ್ಸ್‌ಗಳನ್ನು 4.50 ಕೋಟಿ ರೂ. ಅನುದಾನದಲ್ಲಿ ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ಲಾಸ್ಮಾ ಥೆರಪಿ ಉಪಕರಣಕ್ಕೆ ಸಂಬಂಧಿಸಿದಂತ 40 ಲಕ್ಷ ರೂ. ಅನುದಾನ ಮಂಜೂರಿ ಮಾಡಿದ ಆದೇಶ ಪತ್ರವನ್ನು ಜಿಮ್ಸ್‌ ನಿರ್ದೇಶಕಿ ಡಾ| ಕವಿತಾ ಪಾಟೀಲರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಅಪ್ಪುಗೌಡ ಹಸ್ತಾಂತರಿಸಿದರು. ಕೋವಿಡ್‌ ನಿಯಂತ್ರಣಕ್ಕೆ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next