Advertisement

ಮರಳಿ ಅಗ್ರಸ್ಥಾನಕ್ಕೇರಿದ ಕೆಕೆಆರ್‌

08:51 PM Apr 27, 2017 | Karthik A |

ಪುಣೆ: ನಾಯಕ ಗೌತಮ್‌ ಗಂಭೀರ್‌ ಮತ್ತು ರಾಬಿನ್‌ ಉತ್ತಪ್ಪ ಅವರ ಆಕರ್ಷಕ ಅರ್ಧಶತಕದಿಂದಾಗಿ ಕೋಲ್ಕತಾ ನೈಟ್‌ರೈಡರ್ ತಂಡವು ಬುಧವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಗೆಲ್ಲಲು 183 ರನ್‌ ತೆಗೆಯುವ ಕಠಿನ ಗುರಿ ಪಡೆದ ಕೆಕೆಆರ್‌ ತಂಡವು 18.1 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟದಲ್ಲಿ ಜಯದ ಗುರಿ ತಲುಪಿತು. ಈ ಮೊದಲು ಪುಣೆ ತಂಡವು 5 ವಿಕೆಟಿಗೆ 182 ರನ್‌ ಗಳಿಸಿತ್ತು. ಗಂಭೀರ್‌ ಮತ್ತು ಉತ್ತಪ್ಪ  ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದು ತಂಡದ ಗೆಲುವನ್ನು ಖಚಿತಪಡಿಸಿದರು. ಬಿರುಸಿನ ಆಟವಾಡಿದ ಅವರು ದ್ವಿತೀಯ ವಿಕೆಟಿಗೆ 158 ರನ್‌ ಪೇರಿಸಿದರು. ಗೆಲುವಿಗೆ 5 ರನ್‌ ಇರುವಾಗ ಉತ್ತಪ್ಪ ಔಟಾದರು. 47 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 87 ರನ್‌ ಹೊಡೆದರು. ಉತ್ತಪ್ಪ ಮತ್ತು ಗಂಭೀರ್‌ ಅವರ ಆಟ ಗುಜರಾತ್‌ ವಿರುದ್ಧ ಗಂಭೀರ್‌ ಮತ್ತು ಆ್ಯಂಡ್ರೂé ಲಿನ್‌ ಅವರ ಆಟವನ್ನು ನೆನಪಿಸುವಂತಿತ್ತು. 

Advertisement


ಉತ್ತಪ್ಪ ಔಟಾದ ತತ್‌ಕ್ಷಣವೇ ಗಂಭೀರ್‌ ಕೂಡ ಕ್ರಿಸ್ಟಿಯನ್‌ಗೆ ವಿಕೆಟ್‌ ಒಪ್ಪಿಸಿದರು. 46 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 62 ರನ್‌ ಹೊಡೆದರು.
ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪುಣೆ ತಂಡವು ಭರ್ಜರಿ ಆರಂಭ ಪಡೆಯಿತು. ಆರಂಭಿಕರಾದ ಅಜಿಂಕ್ಯ ರಹಾನೆ ಮತ್ತು ರಾಹುಲ್‌ ತ್ರಿಪಾಠಿ ಬಿರುಸಿನ ಆಟವಾಡಿ ಮೊದಲ ವಿಕೆಟಿಗೆ 7.5 ಓವರ್‌ಗಳಲ್ಲಿ 65 ರನ್ನುಗಳ ಜತೆಯಾಟ ನಡೆಸಿದರು. ಉತ್ತಮವಾಗಿ ಆಡುತ್ತಿದ್ದ ತ್ರಿಪಾಠಿ ಅಂತಿಮವಾಗಿ ಚಾವ್ಲಾ ಮೋಡಿಗೆ ಕ್ಲೀನ್‌ಬೌಲ್ಡ್‌ ಆದರು. 23 ಎಸೆತ ಎದುರಿಸಿದ ಅವರು 38 ರನ್‌ ಹೊಡೆದರು.

ಸ್ಕೋರ್‌ ಪಟ್ಟಿ
ರೈಸಿಂಗ್‌ ಪುಣೆ ಸೂಪರ್‌ಜೈಂಟ್‌

ಅಜಿಂಕ್ಯ ರಹಾನೆ    ಸ್ಟಂಪ್ಡ್ ಉತ್ತಪ್ಪ ಬಿ ನಾರಾಯಣ್‌    46
ರಾಹುಲ್‌ ತ್ರಿಪಾಠಿ    ಬಿ ಚಾವ್ಲಾ    38
ಸ್ಟೀವನ್‌ ಸ್ಮಿತ್‌    ಔಟಾಗದೆ    51
ಎಂಎಸ್‌ ಧೋನಿ    ಸ್ಟಂಪ್ಡ್ ಉತ್ತಪ್ಪ ಬಿ ಕುಲದೀಪ್‌    23
ಮನೋಜ್‌ ತಿವಾರಿ    ಸ್ಟಂಪ್ಡ್ ಉತ್ತಪ್ಪ ಬಿ ಕುಲದೀಪ್‌    1
ಡಿ. ಕ್ರಿಸ್ಟಿಯನ್‌    ಸಿ ಪಾಂಡೆ ಬಿ ಉಮೇಶ್‌    16

ಇತರ:        7
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ)    182

ವಿಕೆಟ್‌ ಪತನ: 1-65, 2-112, 3-148, 4-150, 5-182

Advertisement

ಬೌಲಿಂಗ್‌:
ಉಮೇಶ್‌ ಯಾದವ್‌    3-0-28-1
ಕ್ರಿಸ್‌ ವೋಕ್ಸ್‌        3-0-38-0
ಸುನೀಲ್‌ ನಾರಾಯಣ್‌    4-0-34-1
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    2-0-14-0
ಪೀಯೂಷ್‌ ಚಾವ್ಲಾ        4-0-36-1
ಕುಲದೀಪ್‌ ಯಾದವ್‌    4-0-31-2

ಕೋಲ್ಕತಾ ನೈಟ್‌ರೈಡರ್ಸ್
ಸುನೀಲ್‌ ನಾರಾಯಣ್‌    ರನೌಟ್‌    16
ಗೌತಮ್‌ ಗಂಭೀರ್‌    ಸಿ ಠಾಕುರ್‌ ಬಿ ಕ್ರಿಸ್ಟಿಯನ್‌    62
ರಾಬಿನ್‌ ಉತ್ತಪ್ಪ    ಸಿ ತ್ರಿಪಾಠಿ ಬಿ ಉನಾದ್ಕತ್‌    87
ಡ್ಯಾರನ್‌ ಬ್ರಾವೊ    ಔಟಾಗದೆ    6
ಮನೀಷ್‌ ಪಾಂಡೆ    ಔಟಾಗದೆ    0

ಇತರ:        13
ಒಟ್ಟು  (18.1 ಓವರ್‌ಗಳಲ್ಲಿ 3 ವಿಕೆಟಿಗೆ)    184

ವಿಕೆಟ್‌ ಪತನ: 1-20, 2-178, 3-179

ಬೌಲಿಂಗ್‌:
ಜೈದೇವ್‌ ಉನಾದ್ಕತ್‌    3-0-26-1
ಶಾದೂìಲ್‌ ಠಾಕುರ್‌    3.1-0-31-0
ವಾಷಿಂಗ್ಟನ್‌ ಸುಂದರ್‌    3-0-32-0
ಡೇನಿಯಲ್‌ ಕ್ರಿಸ್ಟಿಯನ್‌    4-0-31-1
ಇಮ್ರಾನ್‌ ತಾಹಿರ್‌        4-0-48-0
ರಾಹುಲ್‌ ತ್ರಿಪಾಠಿ        1-0-12-0

ಪಂದ್ಯಶ್ರೇಷ್ಠ: ರಾಬಿನ್‌ ಉತ್ತಪ್ಪ

Advertisement

Udayavani is now on Telegram. Click here to join our channel and stay updated with the latest news.

Next