Advertisement
ಶನಿವಾರದ ಉದ್ಘಾಟನಾ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈಗೆ ಗಳಿಸಲು ಸಾಧ್ಯವಾದದ್ದು 5ಕ್ಕೆ 131 ರನ್ ಮಾತ್ರ. ಕೋಲ್ಕತಾ 18.3 ಓವರ್‌ಗಳಲ್ಲಿ 4 ವಿಕೆಟಿಗೆ 133 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಇದರೊಂದಿಗೆ ಕೆಕೆಆರ್‌ನ ನೂತನ ನಾಯಕ ಶ್ರೇಯಸ್ ಅಯ್ಯರ್ ಗೆಲುವಿನ ಆರಂಭ ಪಡೆದರೆ, ಮತ್ತೋರ್ವ ಹೊಸ ನಾಯಕ ರವೀಂದ್ರ ಜಡೇಜ ಸೋಲಿನ ಆಘಾತ ಎದುರಿಸುವಂತಾಯಿತು.
ಧೋನಿ ಮತ್ತು ಜಡೇಜ ಡೆತ್ ಓವರ್‌ಗಳಲ್ಲಿ ಬಿರುಸಿನ ಆಟವಾಡಿದ್ದರಿಂದ ಸಿಎಸ್‌ಕೆ ಗೌರವಯುತ ಮೊತ್ತ ದಾಖಲಿತು. ಮೊದಲ 15 ಓವರ್‌ಗಳ ಆಟ ಕಂಡಾಗ ಚೆನ್ನೈ ನೂರರ ಆಸುಪಾಸಿನಲ್ಲಿ ಕುಸಿಯುವ ಭೀತಿ ದಟ್ಟವಾಗಿತ್ತು. ಆದರೆ ಧೋನಿ-ಜಡೇಜ ಸೇರಿಕೊಂಡು ಮುರಿಯದ 6ನೇ ವಿಕೆಟಿಗೆ 56 ಎಸೆತಗಳಿಂದ 70 ರನ್ ಪೇರಿಸಿ ತಂಡದ ಮರ್ಯಾದೆ ಕಾಪಾಡಿದರು. ಕೊನೆಯ 3 ಓವರ್‌ಗಳಲ್ಲಿ 47 ರನ್ ಹರಿದು ಬಂತು. ಧೋನಿ 50 ರನ್ (38 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಜಡೇಜ 26 ರನ್ ಮಾಡಿ ಅಜೇಯರಾಗಿ ಉಳಿದರು.
Related Articles
Advertisement
ನೋಬಾಲ್‌ನೊಂದಿಗೆ ಆರಂಭ15ನೇ ಐಪಿಎಲ್ ನೋಬಾಲ್‌ನೊಂದಿಗೆ ಆರಂಭಗೊಂಡಿತು. ಇದನ್ನೆಸೆದವರು ಕೆಕೆಆರ್‌ನ ವೇಗಿ ಉಮೇಶ್ ಯಾದವ್. ದ್ವಿತೀಯ ಎಸೆತ ವೈಡ್ ಆಗಿತ್ತು. 3ನೇ ಎಸೆತದಲ್ಲಿ ಋತುರಾಜ್ ಗಾಯಕ್ವಾಡ್ ವಿಕೆಟ್ ಉರುಳಿಸಿದರು. 4ನೇ ಎಸೆತವೂ ವೈಡ್ ಆಗಿತ್ತು. ಹೀಗೆ ನಾಟಕೀಯ ರೀತಿಯಲ್ಲಿ ಐಪಿಎಲ್‌ಗೆ ಚಾಲನೆ ಲಭಿಸಿತು. ಬ್ಯಾಟ್ ಮೂಲಕ ಮೊದಲ ರನ್ ಬಂದದ್ದು ಶಿವಂ ಮಾವಿ ಎಸೆದ ದ್ವಿತೀಯ ಓವರ್‌ನ 3ನೇ ಎಸೆತದಲ್ಲಿ. ಡೇವನ್ ಕಾನ್ವೇ ಸಿಂಗಲ್ ಮೂಲಕ ಖಾತೆ ತೆರೆದರು. ಬಳಿಕ ರಾಬಿನ್ ಉತ್ತಪ್ಪ ತಾನೆದುರಿಸಿದ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿದರು. ಮೊದಲ ಸಿಕ್ಸರ್ ಕೂಡ ಉತ್ತಪ್ಪ ಅವರಿಂದಲೇ ಸಿಡಿಯಿತು. ಆಕ್ರಮಣಕಾರಿ ಮೂಡ್‌ನಲ್ಲಿದ್ದ ಉತ್ತಪ್ಪ, ಮಾವಿ ಅವರ ಮುಂದಿನ ಓವರ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಅಪಾಯಕಾರಿಯಾಗಿ ಬೆಳೆಯುವ ಸೂಚನೆ ನೀಡಿದರು. ಈ ಹಂತದಲ್ಲಿ ಉಮೇಶ್ ಯಾದವ್ ಮತ್ತೊಂದು ವಿಕೆಟ್ ಬೇಟೆಯಾಡಿದರು. ತಮ್ಮ 3ನೇ ಓವರ್‌ನ ಮೊದಲ ಎಸೆತದಲ್ಲೇ ಕಾನ್ವೇಗೆ ಪೆವಿಲಿಯನ್ ಹಾದಿ ತೋರಿಸಿದರು. ಕಿವೀಸ್ ಆರಂಭಿಕನ ಗಳಿಕೆ ಕೇವಲ 3 ರನ್. ಪವರ್ ಪ್ಲೇ ಮುಗಿಯುವಾಗ ಚೆನ್ನೈ 2 ವಿಕೆಟಿಗೆ 35 ರನ್ ಗಳಿಸಿತ್ತು. ಬಿರುಸಿನ ಆಟವಾಡುತ್ತಿದ್ದ ರಾಬಿನ್ ಉತ್ತಪ್ಪ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮೋಡಿಗೆ ಸಿಲುಕಿದರು. ಮುನ್ನುಗ್ಗಿ ಬಾರಿಸಲು ಹೋಗಿ ಕೀಪರ್ ಶೆಲ್ಡನ್ ಜಾಕ್ಸನ್ ಅವರಿಂದ ಸ್ಟಂಪ್ಡ್ ಆದರು. ಉತ್ತಪ್ಪ ಗಳಿಕೆ 21 ಎಸೆತಗಳಿಂದ 28 ರನ್ (2 ಬೌಂಡರಿ, 2 ಸಿಕ್ಸರ್). ಅಂಬಾಟಿ ರಾಯುಡು ಕೂಡ ಉತ್ತಮ ಲಯದಲ್ಲಿದ್ದರು. ಆದರೆ ನಾಯಕ ರವೀಂದ್ರ ಜಡೇಜ ಅವರೊಂದಿಗೆ ಮಿಕ್ಸ್‌ಅಪ್ ಆಗಿ ರನೌಟ್ ಆಗಬೇಕಾಯಿತು. ರಾಯುಡು ಗಳಿಕೆ 17 ಎಸೆತಗಳಿಂದ 15 ರನ್ (1 ಫೋರ್, 1 ಸಿಕ್ಸರ್). ಇದರೊಂದಿಗೆ ಐಪಿಎಲ್‌ನಲ್ಲಿ ರಾಯುಡು 15ನೇ ಸಲ ರನೌಟ್ ಆದಂತಾಯಿತು. ಅತ್ಯಧಿಕ ಸಲ ರನೌಟ್ ಆದವರ ಯಾದಿಯಲ್ಲಿ ಅವರು ಸುರೇಶ್ ರೈನಾ ಜತೆ ದ್ವಿತೀಯ ಸ್ಥಾನದಲ್ಲಿ ಕಾಣಿಕೊಂಡರು. ಶಿಖರ್ ಧವನ್ ಮತ್ತು ಗೌತಮ್ ಗಂಭೀರ್ ತಲಾ 16 ಸಲ ರನೌಟ್ ಆದದ್ದು ಐಪಿಎಲ್ ದಾಖಲೆ. ಅರ್ಧ ಹಾದಿ ಕ್ರಮಿಸುವಾಗ ಚೆನ್ನೈ 4 ವಿಕೆಟಿಗೆ 57 ರನ್ ಮಾಡಿ ಪರದಾಡುತ್ತಿತ್ತು. ಶಿವಂ ದುಬೆ (3) ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ. ಆ್ಯಂಡ್ರೆ ರಸೆಲ್ ತಮ್ಮ ಮೊದಲ ಓವರ್‌ನಲ್ಲೇ ಇವರ ವಿಕೆಟ್ ಕಿತ್ತರು. ಒಲಿಂಪಿಕ್ಸ್ ಸಾಧಕರಿಗೆ ಬಿಸಿಸಿಐ ಸಮ್ಮಾನ
ಐಪಿಎಲ್ ಆರಂಭಕ್ಕೂ ಮೊದಲು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾ ಸಾಧಕರನ್ನು ಬಿಸಿಸಿಐ ಸಮ್ಮಾನಿಸಿತು. ಇವರಲ್ಲಿ ಜಾವೆಲಿನ್ ಚಿನ್ನ ಗೆದ್ದ ನೀರಕ್ ಚೋಪ್ರಾ ಆಕರ್ಷಣೆಯ ಕೇಂದ್ರವಾಗಿದ್ದರು. ಅವರಿಗೆ ಬಿಸಿಸಿಐ ಒಂದು ಕೋಟಿ ರೂ. ಮೊತ್ತ ನೀಡಿ ಗೌರವಿಸಿತು. ಹಾಕಿಯಲ್ಲಿ ಕಂಚು ಗೆದ್ದ ಪುರುಷರ ತಂಡಕ್ಕೆ ಒಂದು ಕೋಟಿ ರೂ. ನೀಡಲಾಯಿತು. ತಂಡದ ಪರವಾಗಿ ನಾಯಕ ಮನ್‌ಪ್ರೀತ್ ಸಿಂಗ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಂದ ಚೆಕ್ ಪಡೆದರು. ಬಾಕ್ಸಿಂಗ್‌ನಲ್ಲಿ ಕಂಚು ಗೆದ್ದ ಲವಿÉನಾ ಬೊರ್ಗೊಹೇನ್ ಅವರಿಗೆ 25 ಲಕ್ಷ ರೂ. ನೀಡಲಾಯಿತು. ಸ್ಕೋರ್ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್
ಗಾಯಕ್ವಾಡ್ ಸಿ ರಾಣಾ ಬಿ ಉಮೇಶ್ 0
ಡೇವನ್ ಕಾನ್ವೇ ಸಿ ಶ್ರೇಯಸ್ ಬಿ ಉಮೇಶ್ 3
ರಾವಿನ್ ಉತ್ತಪ್ಪ ಸ್ಟಂಪ್ಡ್ ಜಾಕ್ಸನ್ ಬಿ ಚಕ್ರವರ್ತಿ 28
ಅಂಬಾಟಿ ರಾಯುಡು ರನೌಟ್ 15
ರವೀಂದ್ರ ಜಡೇಜ ಔಟಾಗದೆ 26
ಶಿವಂ ದುಬೆ ಸಿ ನಾರಾಯಣ್ ಬಿ ರಸೆಲ್ 3
ಎಂ.ಎಸ್. ಧೋನಿ ಔಟಾಗದೆ 50
ಇತರ 6
ಒಟ್ಟು (5 ವಿಕೆಟಿಗೆ) 131
ವಿಕೆಟ್ ಪತನ:1-2, 2-28, 3-49, 4-52, 5-61.
ಬೌಲರ್;
ಉಮೇಶ್ ಯಾದವ್ 4-0-20-2
ಶಿವಂ ಮಾವಿ 4-0-35-0
ವರುಣ್ ಚಕ್ರವರ್ತಿ 4-0-23-1
ಸುನೀಲ್ ನಾರಾಯಣ್ 4-0-15-0
ಆ್ಯಂಡ್ರೆ ರಸೆಲ್ 4-0-38-1
ಕೋಲ್ಕತಾ ನೈಟ್‌ರೈಡರ್
ಅಜಿಂಕ್ಯ ರಹಾನೆ ಸಿ ಜಡೇಜ ಬಿ ಸ್ಯಾಂಟ್ನರ್ 44
ವೆಂಕಟೇಶ್ ಸಿ ಧೋನಿ ಬಿ ಬ್ರಾವೊ 16
ನಿತೀಶ್ ರಾಣಾ ಸಿ ರಾಯುಡು ಬಿ ಬ್ರಾವೊ 21
ಶ್ರಯಸ್ ಅಯ್ಯರ್ ಔಟಾಗದೆ 20
ಸ್ಯಾಮ್ ಬಿಲ್ಲಿಂಗ್ ಸಿ ತುಷಾರ್ ಬಿ ಬ್ರಾವೊ 25
ಶೆಲ್ಡನ್ ಜಾಕ್ಸನ್ ಔಟಾಗದೆ 3
ಇತರ 4
ಒಟ್ಟು (18.3 ಓವರ್‌ಗಳಲ್ಲಿ 4 ವಿಕೆಟಿಗೆ) 133
ವಿಕೆಟ್ ಪತನ:1-43, 2-76, 3-87, 4-123.
ಬೌಲಿಂಗ್;
ತುಷಾರ್ ಪಾಂಡೆ 3-0-23-0
ಆ್ಯಂಡಂ ಮಿಲ್ನೆ 2.3-0-19-0
ಮಿಚೆಲ್ ಸ್ಯಾಂಟ್ನರ್ 4-0-31-1
ಡ್ವೇನ್ ಬ್ರಾವೊ 4-0-20-3
ಶಿವಂ ದುಬೆ 1-0-11-0
ರವೀಂದ್ರ ಜಡೇಜ 4-0-25-0