Advertisement

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

11:39 PM May 21, 2024 | Team Udayavani |

ಅಹ್ಮದಾಬಾದ್‌: ಲೀಗ್‌ ಹಂತದಲ್ಲಿ “ರನ್‌ ರೈಸರ್’ ಆಗಿದ್ದ ಹೈದರಾಬಾದ್‌ ತಂಡ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರನ್‌ ಬರಗಾಲ ಅನುಭವಿಸಿ ಕೋಲ್ಕತಾ ನೈಟ್‌ರೈಡರ್ಗೆ 8 ವಿಕೆಟ್‌ಗಳಿಂದ ಶರಣಾಗಿದೆ. ಈ ಜಯಭೇರಿಯೊಂದಿಗೆ ಕೆಕೆಆರ್‌ 4ನೇ ಬಾರಿ ಐಪಿಎಲ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಹೈದರಾಬಾದ್‌ 2ನೇ ಕ್ವಾಲಿಫೈಯರ್‌ ಸ್ಪರ್ಧೆಯತ್ತ ಮುಖ ಮಾಡಿದೆ.

Advertisement

ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಹೈದರಾಬಾದ್‌ 19.3 ಓವರ್‌ಗಳಲ್ಲಿ 159ಕ್ಕೆ ಆಲೌಟ್‌ ಆದರೆ, ಕೆಕೆಆರ್‌ ಕೇವಲ 13.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 164 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಸಾಮಾನ್ಯ ಮೊತ್ತದ ಚೇಸಿಂಗ್‌ ವೇಳೆ ವೆಂಕಟೇಶ್‌ ಅಯ್ಯರ್‌ (ಅಜೇಯ 51) ಮತ್ತು ಶ್ರೇಯಸ್‌ ಅಯ್ಯರ್‌ (ಅಜೇಯ 58) ಅರ್ಧ ಶತಕ ಬಾರಿಸಿ ಮಿಂಚಿದರು. ಮುರಿಯದ 3ನೇ ವಿಕೆಟಿಗೆ 44 ಎಸೆತಗಳಿಂದ 97 ರನ್‌ ಪೇರಿಸಿದರು. ಇಬ್ಬರೂ 5 ಬೌಂಡರಿ, 4 ಸಿಕ್ಸರ್‌ ಸಿಡಿಸಿದರು.

ಕೈಕೊಟ್ಟ ಓಪನರ್!

ಬ್ಯಾಟಿಂಗ್‌ ಆಯ್ದುಕೊಂಡ ದೊಡ್ಡ ಮೊತ್ತ ಪೇರಿಸುವ ಯೋಜನೆ ಹಾಕಿಕೊಂಡಿದ್ದ ಹೈದರಾಬಾದ್‌ಗೆ ಆರಂಭಿಕರಿಬ್ಬರೂ ಕೈಕೊಟ್ಟರು. ಈ ಕೂಟದ ಯಶಸ್ವಿ ಹಾಗೂ ಅಪಾಯಕಾರಿ ಆರಂಭಿಕರಾದ ಟ್ರ್ಯಾವಿಸ್‌ ಹೆಡ್‌ ಮತ್ತು ಅಭಿಷೇಕ್‌ ಶರ್ಮ ಬಂದಷ್ಟೇ ಬೇಗ ಪೆವಿಲಿಯನ್‌ ಸೇರಿಕೊಂಡರು. ಆಗ ಸ್ಕೋರ್‌ಬೋರ್ಡ್‌ ಬರೀ 13 ರನ್‌ ದಾಖಲಿಸುತ್ತಿತ್ತು.

Advertisement

ಹೆಡ್‌ ವಿಕೆಟ್‌ ಹಾರಿಸಿದವರು ಆಸ್ಟ್ರೇಲಿಯದವರೇ ಆದ ಮಿಚೆಲ್‌ ಸ್ಟಾರ್ಕ್‌. ಇವರ ಬೌಲಿಂಗ್‌ ಬ್ಯೂಟಿಗೆ ಮಿಡ್ಲ್ ಮತ್ತು ಆಫ್ಸ್ಟಂಪ್‌ಗ್ಳೆರಡೂ ಹಾರಿ ಹೋದವು. ಹೆಡ್‌ ಸತತ ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ ಸಂಕಟಕ್ಕೆ ಸಿಲುಕಿದರು. ಪಂಜಾಬ್‌ ವಿರುದ್ಧ ಗೋಲ್ಡನ್‌ ಡಕ್‌ ಆದರೆ, ಇಲ್ಲಿ 2ನೇ ಎಸೆತದಲ್ಲಿ ವಿಕೆಟ್‌ ಕೈಚೆಲ್ಲಿದರು. ಅಭಿಷೇಕ್‌ ಆಟ ಮೂರೇ ರನ್ನಿಗೆ ಮುಗಿಯಿತು. ವೈಭವ್‌ ಅರೋರಾ ಕೂಡ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್‌ ಬೇಟೆಯಾಡಿದರು.

ಸ್ಟಾರ್ಕ್‌ ಅವರ 3ನೇ ಓವರ್‌ ಇನ್ನಷ್ಟು ಅಪಾಯಕಾರಿ ಆಗಿತ್ತು. ಸತತ ಎಸೆತಗಳಲ್ಲಿ ನಿತೀಶ್‌ ರೆಡ್ಡಿ ಮತ್ತು ಶಾಬಾಜ್‌ ಅಹ್ಮದ್‌ ವಿಕೆಟ್‌ ಉಡಾಯಿಸಿ ಕೋಲ್ಕತಾ ಪಾಳೆಯದಲ್ಲಿ ಖುಷಿಯ ಅಲೆಗಳನ್ನೆಬ್ಬಿಸಿದರು. 4 ಓವರ್‌ ಆಗುವಷ್ಟರಲ್ಲಿ 39 ರನ್ನಿಗೆ 4 ವಿಕೆಟ್‌ ಬಿತ್ತು.

5ನೇ ವಿಕೆಟಿಗೆ ಜತೆಗೂಡಿದ ರಾಹುಲ್‌ ತ್ರಿಪಾಠಿ (ಸರ್ವಾಧಿಕ 55) ಮತ್ತು ಕ್ಲಾಸೆನ್‌ (32) 62 ರನ್‌ ಪೇರಿಸಿ ತಂಡವನ್ನು ಆಧರಿಸಿದರು. ಅನಂತರ ಮತ್ತೆ ಕುಸಿತ ಮೊದಲ್ಗೊಂಡಿತು. 126 ರನ್‌ ಆಗುವಷ್ಟರಲ್ಲಿ 9 ವಿಕೆಟ್‌ ಬಿತ್ತು. ಕೊನೆಯಲ್ಲಿ ಕಮಿನ್ಸ್‌ ಹೋರಾಟ ನಡೆಸಿದ್ದರಿಂದ ತಂಡದ ಮೊತ್ತ ನೂರೈವತ್ತರ ಗಡಿ ದಾಟಿತು. ಕೆಕೆಆರ್‌ ಪರ ಬೌಲಿಂಗ್‌ ದಾಳಿಗಿಳಿದ ಎಲ್ಲರೂ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next