Advertisement
ಕೋಟ್ಲಾದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯ ದಲ್ಲಿ ಕೆಕೆಆರ್ ವಿರುದ್ಧ ಡೆಲ್ಲಿ ತಂಡ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿತ್ತು. ಎರಡೂ ತಂಡಗಳು 185 ರನ್ ಬಾರಿಸಿದ್ದರಿಂದ ಪಂದ್ಯ ಟೈ ಆಗಿತ್ತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಸೂಪರ್ ಓವರ್‌ಗೆ ವಿಸ್ತರಿಸಲ್ಪಟ್ಟ ಏಕೈಕ ಪಂದ್ಯವಾಗಿದೆ.
ಮಾ. 27ರ ಬಳಿಕ ಕೆಕೆಆರ್ ಈಡನ್ ಅಂಗಳದಲ್ಲಿ ಆಡಲಿ ಳಿಯಲಿದೆ. ಈ ಅವಧಿಯಲ್ಲಿ ಕೋಟ್ಲಾ ಪಂದ್ಯದಲ್ಲಿ ಅದೃಷ್ಟ ಕೈಕೊಟ್ಟರೆ, ಬೆಂಗಳೂರು ಮತ್ತು ಜೈಪುರದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್ ತಂಡಗಳಿಗೆ ಸೋಲುಣಿಸಿ ಮೆರೆದಾಡಿದೆ. ಈ ಎಲ್ಲ ಪಂದ್ಯ ಗಳಲ್ಲೂ “ರಸೆಲ್ ಫ್ಯಾಕ್ಟರ್’ ಎದುರಾಳಿಗಳನ್ನು ಕಾಡಿತ್ತು. ಕೂಟದಲ್ಲಿ ಏಕರೀತಿಯ ಫಾರ್ಮ್ ಕಾಯ್ದು ಕೊಂಡು ಬಂದಿರುವ ಕೆರಿಬಿಯನ್‌ನ ಬಿಗ್ ಹಿಟ್ಟರ್ ಆ್ಯಂಡ್ರೆ ರಸೆಲ್ ಅಸಾಧ್ಯವಾದುದನ್ನೆಲ್ಲ ತಮ್ಮ ಸ್ಫೋಟಕ ಬ್ಯಾಟಿಂಗಿನಿಂದ ಸಾಧ್ಯವಾಗಿಸುತ್ತ ಬಂದಿದ್ದಾರೆ. 5 ಇನ್ನಿಂಗ್ಸ್‌ಗಳಿಂದ 257 ರನ್ ಪೇರಿಸಿದ್ದಾರೆ. ಸರಾಸರಿ 128.50; ಸ್ಟ್ರೈಕ್‌ರೇಟ್ 212.39. ಇದರಲ್ಲಿ 150 ರನ್ ಸಿಕ್ಸರ್ ಮೂಲಕವೇ ಸಿಡಿಯಲ್ಪಟ್ಟಿರುವುದು ರಸೆಲ್ ಅಬ್ಬರಕ್ಕೆ ಸಾಕ್ಷಿ. ಚೆನ್ನೈ ವಿರುದ್ಧದ ಕಳೆದ ಪಂದ್ಯದಲ್ಲಿ ಇಡೀ ಬ್ಯಾಟಿಂಗ್ ಸರದಿಯೇ ಕೈಕೊಟ್ಟಾಗ ರಸೆಲ್ ಅರ್ಧ ಶತಕ ಬಾರಿಸಿದ್ದನ್ನು ಮರೆಯುವಂತಿಲ್ಲ.
Related Articles
Advertisement
ಕೆಕೆಆರ್ ತ್ರಿವಳಿ ಸ್ಪಿನ್ನರ್‌ಗಳ ಬಲದೊಂದಿಗೆ ಸಶಕ್ತವಾಗಿದೆ. ಚಾವ್ಲಾ, ಕುಲದೀಪ್, ನಾರಾಯಣ್ ದಾಳಿಯನ್ನು ಡೆಲ್ಲಿ ಹೇಗೆ ನಿಭಾಯಿ ಸಲಿದೆ ಎಂಬುದು ನಿರ್ಣಾಯಕವಾಗಲಿದೆ.
ಸೇಡಿಗೆ ಕಾದಿದೆ ಕೆಕೆಆರ್ಅಂದು ಅನುಭವಿಸಿದ ಸೋಲಿಗೆ ಕೆಕೆಆರ್ ಈಗ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿ ಕುಳಿತಿದೆ. ಕಾರ್ತಿಕ್ ಬಳಗಕ್ಕೆ ಇದು ಅಸಾಧ್ಯ ಸವಾಲೇನೂ ಅಲ್ಲ. ಕೋಲ್ಕತಾದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಆತಿಥೇಯ ತಂಡವೇ ಜಯ ಸಾಧಿಸಿದೆ. ಬಲಿಷ್ಠ ಹೈದರಾಬಾದ್ ಮತ್ತು ಪಂಜಾಬ್ ತಂಡಗಳಿಗೆ ಕೆಕೆಆರ್ ಇಲ್ಲಿ ಸೋಲುಣಿಸಿದೆ.