ಕಾಸರಗೋಡು, ಮಾ.17: ಆರ್‌ಎಂಪಿ (ರೆವೊಲೂಶ್ಶನರಿ ಮಾರ್ಕಿಸ್ಟ್ ಪಕ್ಷ) ನಾಯಕಿ ಕೆ.ಕೆ.ರಮಾ ವಡಗರದಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರಮಾ ಹತ್ಯೆಗೀಡಾದ ಸಿಪಿಐ(ಎಂ) ಮಾಜಿ ಮುಖಂಡ ಟಿ.ಪಿ.ಚಂದ್ರಶೇಖರನ್ ಪತ್ನಿ.
ಇದನ್ನೂ ಓದಿ:ಬೈಕ್ ನಲ್ಲಿ ಹುಚ್ಚು ಸಾಹಸ ಮಾಡಿದವನ ಕೈಗೆ ಕೋಳ..
ಆರ್‌ಎಂಪಿ ಯನ್ನು ಬೆಂಬಲಿಸುವ ಯುಡಿಎಫ್ ತೀರ್ಮಾನವನ್ನು ಕಾಂಗ್ರೆಸ್‌ನ ನೇತಾರರ ಗುಂಪೊಂದು ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಕೊನೆಗೂ ಭಿನ್ನಾಭಿಪ್ರಾಯವನ್ನು ಬಗೆಹರಿಸಿ ಕೆ.ಕೆ.ರಮಾ ಅವರನ್ನು ಅಭ್ಯರ್ಥಿಯಾಗಿ ಕಾಂಗ್ರೆಸ್ ಕಣಕ್ಕಿಳಿಸಿದೆ.
ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷೆಯಾಗಿದ್ದ ಕೆ.ಕೆ.ರಮಾ ಅವರು ಪತಿ ಟಿ.ಪಿ.ಚಂದ್ರಶೇಖರನ್ ಅವರ ಹತ್ಯೆಯ ಬಳಿಕ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 2016 ರಲ್ಲಿ ವಡಗರದಲ್ಲಿ ಮೂರು ಒಕ್ಕೂಟಗಳ ವಿರುದ್ಧ ಸ್ಪರ್ಧಿಸಿ 20,504 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಅಂದು ಎಲ್‌ಡಿಎಫ್ ಅಭ್ಯರ್ಥಿ ಸಿ.ಕೆ.ನಾಣು 9511 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೆಕೆ ರಮಾ ನಿರ್ಧರಿಸಿದ್ದರು. ಆದರೆ ಕಾಂಗ್ರೆಸ್ ಅಧಿಕೃತವಾಗಿ ಆರ್ ಎಂಪಿಗೆ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಮತ್ತೆ ಚುನಾವಣಾ ಅಖಾಡಕ್ಕಿಳಿಯಲು ರಮಾ ನಿಲುವು ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.