Advertisement
ಕೆ.ಕೆ. ಪೈ ಸಿಂಡಿಕೇಟ್ ಬ್ಯಾಂಕ್‌ನಲ್ಲಿದ್ದಾಗ ಬ್ಯಾಂಕ್‌ನ ಅಭಿವೃದ್ಧಿಗೆ ಅವರು ಅಳವಡಿಸಿಕೊಂಡಿದ್ದ ಒಂದು ಪ್ರಮುಖ ತಂತ್ರವೆಂದರೆ ಸಹ ಭಾಗಿತ್ವ. ಬ್ಯಾಂಕ್‌ನ ಅಭಿವೃದ್ಧಿಗಾಗಿ ಮತ್ತು ಉತ್ತಮ ಗ್ರಾಹಕ ಸೇವೆಗಾಗಿ ನೌಕರರ ಹೃತೂ³ರ್ವಕ ಸಹಭಾಗಿತ್ವವನ್ನು ಅವರು ಬಳಸಿಕೊಂಡಿದ್ದರು. ಬ್ಯಾಂಕ್‌ನ ಆಡಳಿತ ವರ್ಗ ನೌಕರರ ಸಹಭಾಗಿತ್ವವನ್ನು ಬೆಳೆಸುವ ಕ್ರಮಗಳಿಗೆ ಮತ್ತು ನೀತಿಗೆ ಅತೀ ಹೆಚ್ಚಿನ ಒತ್ತು ನೀಡಬೇಕೆಂದು ಅವರು ಹೇಳುತ್ತಿದ್ದರು.
Related Articles
Advertisement
ಏಕ ರೀತಿಯ ನಿರ್ವಹಣೆ :
ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಬೇರೆ ಬೇರೆ ಪ್ರಾದೇಶಿಕ ಕಚೇರಿಗಳು ಏಕರೀತಿಯ ನಿರ್ವಹಣೆಯಿಲ್ಲದೆ ವಿಭಿನ್ನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಒಂದು ಪ್ರಮಾದಕ್ಕೆ ಒಂದು ಕ್ಷೇತ್ರೀಯ ಕಚೇರಿ ನೌಕರನಿಗೆ ಛೀಮಾರಿ ಹಾಕಿ ಬಿಡಬಹುದು. ಆದರೆ ಇನ್ನೊಂದು ಕ್ಷೇತ್ರೀಯ ಕಚೇರಿ ನೌಕರನನ್ನು ಕೆಲಸದಿಂದ ವಜಾ ಮಾಡಬಹುದು. ಪಾಪದವರಿಗೆ, ಮುಗ್ಧ ತಪ್ಪು ಮಾಡಿದವರಿಗೆ ದೊಡ್ಡ ಶಿಕ್ಷೆ ನೀಡಿದರೆ ಹಗರಣದ ಭಾಗಿಗಳಿಗೆ, ಲಂಚಗುಳಿತನ ನಡೆಸಿದವರಿಗೆ ಯಾವ ಶಿಕ್ಷೆಯೂ ಇಲ್ಲದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಭಡ್ತಿಗಳನ್ನು ನೀಡುವ ಇಂದಿನ ವ್ಯವಸ್ಥೆ ಯಿಂದಾಗಿ ಎಲ್ಲರೂ ಹತಾಶರಾಗುತ್ತಾರೆ. ಇಂತಹ ನಿರ್ವ ಹಣೆ ಸಹಭಾಗಿತ್ವಕ್ಕೆ ಮಾರಕವಾಗಿದೆ. ಇದನ್ನು ತಪ್ಪಿಸಲು ಎಲ್ಲೆಡೆ ವರ್ಗಾವಣೆ, ಭಡ್ತಿ, ಶಿಸ್ತುಕ್ರಮ ಇವೆಲ್ಲವುಗಳಲ್ಲಿ ಏಕರೀತಿಯ ನಿರ್ವಹಣೆಯಿರಬೇಕು ಎಂಬುದು ಕೆ.ಕೆ. ಪೈ ಅವರ ಅಭಿಪ್ರಾಯವಾಗಿತ್ತು.
ಸಹಭಾಗಿತ್ವ ಕ್ರಮಗಳು :
ಕೆ.ಕೆ. ಪೈ ಸಹಭಾಗಿತ್ವವನ್ನು ಬೆಳೆಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಂಡಿದ್ದರು. ಕೆ.ಆರ್. ಪ್ರಸಾದ್ ಅವರ ನೇತೃತ್ವದಲ್ಲಿ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ಮೂಲಕ ನೌಕರರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿತ್ತು. ಉಳಿತಾಯ ಖಾತೆ ಸ್ಪರ್ಧೆ, ಚಾಲ್ತಿ ಖಾತೆ ಸ್ಪರ್ಧೆ, ಅವಧಿ ಠೇವಣಿ ಸ್ಪರ್ಧೆ, ಸಾಲ ನೀಡಿಕೆ – ಹೀಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಈ ಸ್ಪರ್ಧೆಗಳಲ್ಲಿ ಎಲ್ಲ ನೌಕರರು ಭಾಗವಹಿಸುತ್ತಿದ್ದರು. ಸ್ಪರ್ಧೆಗಳಲ್ಲಿ ಆಕರ್ಷಕ ಬಹು ಮಾನಗಳಿರುತ್ತಿದ್ದುವು. ಮಾರುಕಟ್ಟೆ ವಿಂಗಡನೆಯ ತಣ್ತೀವನ್ನು ಬಳಸಿ ವಿವಿಧ ಮಾರುಕಟ್ಟೆ ವಿಭಾಗಗಳಿಗೆ ಸಪ್ತಾಹಗಳನ್ನು ಏರ್ಪಡಿಸಲಾಗುತ್ತಿತ್ತು. ಪ್ರತೀ ಶಾಖೆ ಈ ಸಪ್ತಾಹಗಳನ್ನು ನಡೆಸುತ್ತಿತ್ತು. ಅದರಂತೆ ವೈದ್ಯರ ಸಪ್ತಾಹ, ದಾದಿಯರ ಸಪ್ತಾಹ, ವ್ಯಾಪಾರಿಗಳ ಸಪ್ತಾಹ..ಇತ್ಯಾದಿ ಸಪ್ತಾಹಗಳ ಮೂಲಕ ವಿವಿಧ ವರ್ಗಗಳ ಕಾಣಿಕೆಯನ್ನು ಬ್ಯಾಂಕ್‌ನ ಅಭಿವೃದ್ಧಿಗಾಗಿ ಪಡೆದುಕೊಳ್ಳಲು ಯೋಜಿತ ಯತ್ನ ನಡೆಸಲಾಗುತ್ತಿತ್ತು. ವಿವಿಧ ನೌಕರರ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿತ್ತು. “ಜಯಂಟ್’ ಪತ್ರಿಕೆಯನ್ನು ನೌಕರ ಸಹಭಾಗಿತ್ವದ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತಿತ್ತು.
ಕೆ.ಕೆ. ಪೈ ನೌಕರರ ಸಹಭಾಗಿತ್ವವನ್ನು ಬೆಳೆಸಿ, ಬಳಸಿಕೊಂಡು ಎಲ್ಲ ಶಾಖೆಗಳಲ್ಲಿ ಉತ್ತಮ ಗ್ರಾಹಕ ಸೇವೆ ಒದಗಿಸುವಲ್ಲಿ ಮತ್ತು ಬ್ಯಾಂಕ್ ಅನ್ನು ಅಭಿವೃದ್ಧಿ ಪಥದಲ್ಲಿ ಒಯ್ಯುವಲ್ಲಿ ಅದ್ಭುತ ಯಶಸ್ಸು ಸಾಧಿಸಿದರು.
ಕೆ.ಕೆ. ಪೈ ಅಳವಡಿಸಿಕೊಂಡಿದ್ದ ಸಹಭಾಗಿತ್ವ ತಂತ್ರ ಬ್ಯಾಂಕ್ ಗ್ರಾಹಕ ಸೇವಾ ಗುಣಮಟ್ಟ ಮತ್ತು ಅಭಿವೃದ್ಧಿ ದರದ ಕುಸಿತ ಆಗುತ್ತಿರುವ ಈ ದಿನಗಳಲ್ಲಿ ಒಂದು “ಉತ್ತಮ ಉದಾಹರಣ ಅಧ್ಯಯನ’ ಆಗಬಹುದು ಮತ್ತು ಅದರ ಪ್ರಯೋಜನ ಪಡೆದುಕೊಂಡು ಬ್ಯಾಂಕ್‌ಗಳು ಗ್ರಾಹಕ ಸೇವಾ ಸುಧಾರಣೆಗಾಗಿ ಮತ್ತು ಅಭಿವೃದ್ಧಿಗಾಗಿ ಸೂಕ್ತ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು.
ಡಾ| ಕೆ.ಕೆ. ಅಮ್ಮಣ್ಣಾಯ