Advertisement
– ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಕೆ, ನಾರಿನ ಅಂಶ, ಪೊಟ್ಯಾಷಿಯಂ ಅಧಿಕವಾಗಿದೆ.– ಒಂದೇ ಒಂದು ಕಿವಿ ಹಣ್ಣನ್ನು ಸೇವಿಸಿದರೆ ದಿನನಿತ್ಯ ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಸಿ ಸಿಗುತ್ತದೆ.
-ದೃಷ್ಟಿ ನರಗಳನ್ನು ಬಲಗೊಳಿಸಿ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಹಣ್ಣು ತಡೆಗಟ್ಟುತ್ತದೆ.
– ವಿಟಮಿನ್ ಸಿ ಸಮೃದ್ಧವಾಗಿರುವ ಕಿವಿಯನ್ನು ತಿಂದರೆ, ಉಬ್ಬಸದಿಂದ ಕೂಡಿದ ಆಸ್ತಮಾ ಮತ್ತು ಇತರೆ ಶ್ವಾಸ ಸಂಬಧಿ ರೋಗಗಳಿಂದ ರಕ್ಷಣೆ ಸಿಗುತ್ತದೆ.
-ಪ್ರತಿದಿನ ಕಿವಿ ಹಣ್ಣು ತಿನ್ನುವುದರಿಂದ, ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತದಲ್ಲಿನ ಕೊಬ್ಬಿನ ಪ್ರಮಾಣ(ಟ್ರೆಗ್ಲಿಸರೈಡ್ಸ್) ಕಡಿಮೆಯಾಗುತ್ತದೆ.
– ಅಧಿಕ ನಾರಿನಂಶ ಹೊಂದಿರುವ ಈ ಹಣ್ಣು, ದೇಹದ ಕೊಬ್ಬಿನಂಶವನ್ನು ತಗ್ಗಿಸುವುದರಿಂದ, ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.
– ಈ ಹಣ್ಣು ಸೇವನೆ ಜೀರ್ಣಕ್ರಿಯೆಗೆ ಸಹಕಾರಿ.
-ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
– ಚರ್ಮದ ಕಾಂತಿಯನ್ನು ಹೆಚ್ಚಿಸುವ ಕಿವಿ ಹಣ್ಣು, ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ.