Advertisement
ಮಹಿಳೆಯರ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳು, ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದರ ಜತೆಗೆ ಕಲೆ, ಕ್ರೀಡೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಮಹಿಳೆಯರು ಮತ್ತು ಅಸಾಮಾನ್ಯ ಧೈರ್ಯ ಪ್ರದರ್ಶಿಸಿದ ಮಹಿಳೆ ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
Related Articles
Advertisement
ಕಲಾಕ್ಷೇತ್ರ: ವಿಜಯಪುರದ ಅನಸೂಯ ಕುಲಕರ್ಣಿ. ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಮಾಲತಿ ಸುಧೀರ್, ಬೆಂಗಳೂರು ಜಯನಗರದ ಪದ್ಮಾ ಹೇಮಂತ್, ಅನ್ನಪೂರ್ಣೇಶ್ವರಿನಗರದ ಪದ್ಮಜಾ ಜಯರಾಂ.
ಸಾಹಿತ್ಯ ಕ್ಷೇತ್ರ: ಮೈಸೂರು ಜಯನಗರದ ಪಿ.ಕುಸುಮ ಅಯರಹಳ್ಳಿ (ಕುಸುಮಬಾಲೆ), ಬೆಂಗಳೂರಿನ ಯಲಹಂಕದ ಅಟ್ಟೂರಿನ ಇಂದಿರಾ ಕೃಷ್ಣಪ್ಪ, ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಶಶಿಕಲಾ ವಸOಉದ.
ಕ್ರೀಡಾ ಕ್ಷೇತ್ರ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಲಿತಾ ಲಮಾಣಿ,ಮಂಡ್ಯ ಜಿಲ್ಲೆ ಮಲವಳ್ಳಿ ತಾಲೂಕಿನ ರತ್ನಮ್ಮ.
ಶಿಕ್ಷಣ ಕ್ಷೇತ್ರ: ಧಾರವಾಡ ಜಿಲ್ಲೆ ಹಳೆ ಹುಬ್ಬಳ್ಳಿಯ ಸುವರ್ಣಲತಾ ಜಿ. ಗದಿಗೆಪ್ಪಗೌಡ.
ವೀರ ಮಹಿಳೆ ಪ್ರಶಸ್ತಿ– ಬೆಂಗಳೂರು ಎಚ್‌ಎಸ್ ಆರ್ ಲೇಔಟ್‌ನ ಶಾಲಿನಿ ಸರಸ್ವತಿ. 2017-18ನೇ ಸಾಲಿಗೆ ರಾಜ್ಯಮಟ್ಟದ ಪ್ರಶಸ್ತಿಗೆ
ಆಯ್ಕೆಯಾದ ಸ್ತ್ರೀಶಕ್ತಿ ಗುಂಪು/ ಒಕ್ಕೂಟಗಳು
– ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕು ಹೆಸರಘಟ್ಟದ ಸ್ಪಂದನ ಸ್ತ್ರೀಶಕ್ತಿ ಗುಂಪು,ಕೋಲಾರ ಜಿಲ್ಲೆ ಮಾಲೂರು ತಾಲೂಕು ಭುವನಹಳ್ಳಿಯ ಶಿವಸ್ತ್ರೀಶಕ್ತಿ ಗುಂಪು, ಧಾರವಾಡ ಜಿಲ್ಲೆ ಕಲಘಟಕಿಯ ದಮ್ಮವಾಡದ ನಂದಿನಿ ಸ್ತ್ರೀಶಕ್ತಿ ಗುಂಪು. ವಿಭಾಗೀಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ
ಸ್ತ್ರೀಶಕ್ತಿ ಗುಂಪುಗಳು
ಬೆಂಗಳೂರು ನಗರ ಜಿಲ್ಲೆ ಹೊಸಕೋಟೆ ತಾಲೂಕಿನ ತತ್ತನೂರು ತೇಜಸ್ವಿನಿ ಸ್ತ್ರೀಶಕ್ತಿ ಗುಂಪು, ಹಾಸನ ಜಿಲ್ಲೆ ಅರಕಲಗೂಡಿನ
ದುರ್ಗಾಪರಮೇಶ್ವರಿ ಸ್ತ್ರೀಶಕ್ತಿ ಗುಂಪು, ಹಾವೇರಿ ತಾಲೂಕಿನ ಮೂಕಾಂಬಿಕ ಸ್ತ್ರೀಶಕ್ತಿ ಗುಂಪು, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕು ಕೂಡ್ಲಿಯ ತಾಜ್ ಬೀಬಿ ಸ್ತ್ರೀಶಕ್ತಿ ಗುಂಪು. ತಾಲೂಕು ಸ್ತ್ರೀಶಕ್ತಿ
ಒಕ್ಕೂಟಗಳು
– ಬೆಂಗಳೂರು ನಗರ ಜಿಲ್ಲೆ, ಉತ್ತರ ತಾಲೂಕು ಸ್ತ್ರೀಶಕ್ತಿ ಒಕ್ಕೂಟ
– ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕುಸ್ತ್ರೀಶಕ್ತಿ ಒಕ್ಕೂಟ,
– ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಸ್ತ್ರೀಶಕ್ತಿ ಒಕ್ಕೂಟ