Advertisement
ಮನೆ ಕಟ್ಟುವುದು ಸುಲಭದ ಮಾತಲ್ಲ, ಅದರಲ್ಲಿಯೂ ಕಟ್ಟಿದ ನಂತರ ಮನೆಯ ಅಲಂಕಾರಕ್ಕೆ ಪ್ರಾಮುಖ್ಯತೆ ನೀಡಿ ಮನೆಯನ್ನು ಸುಂದರವಾಗಿರಿಸುವುದು ತುಸು ಕಷ್ಟಕರ ಕೆಲಸ. ಸೂಕ್ತವಾದ ಪೀಠೊಪಕರಣಗಳನ್ನು ಆಯ್ಕೆ ಮಾಡಿಕೊಳ್ಳದಿದ್ದರೇ ಮನೆಯ ಸೌಂದರ್ಯ ಹಾಳಾಗುವುದು.ಮನೆಯ ಅಲಂಕಾರಕ್ಕೆ ಪ್ರತಿ ವಸ್ತುಗಳನ್ನು ನಾವು ಆಯ್ಕೆ ಮಾಡುವಾಗ ಅದರ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೆ ಒಳ್ಳೆಯದು. ಮನೆಯ ಸುಂದರತೆ ಹೆಚ್ಚಿಸುವ ಯಾವುದೇ ವಸ್ತುಗಳನ್ನು ಕಡೆಗಣಿಸುವಂತಿಲ್ಲ. ಅದರಂತೆ ಮನೆಯ ಕಿಚನ್‌ನಲ್ಲಿ ಪ್ರಮುಖ ಪಾತ್ರವಹಿಸುವ ಡೈನಿಂಗ್ ಟೇಬಲ್ ಆಯ್ಕೆ ವಿಷಯದಲ್ಲೂ ಎಚ್ಚರ ವಹಿಸಬೇಕು.
ಮಾರುಕಟ್ಟೆಗೆ ವಿನೂತನ ರೀತಿಯ ಡಿಸೈನ್‌ಗಳು ಬಂದಿದ್ದು ಹೊಸ ಹೊಸ ಡಿಸೈನ್‌ಗಳಿರುವ ಡೈನಿಂಗ್ ಟೇಬಲ್‌ಗಳ ಆಯ್ಕೆಗೆ ಗ್ರಾಹಕರು ಬೇರಗಾಗಿದ್ದಾರೆ. ಮೊದಲು ಮರಗಳಿಂದ ಮಾಡಿದ ಮೇಜುಗಳು ಸಾಮಾನ್ಯವಾಗಿತ್ತು. ಈಗ ಮಾರ್ಬಲ್, ಹೊಸ ಶೈಲಿಯ, ಗಾಜು, ಟೈಲ್ಸ್ ಗಳಿಂದ ಮಾಡಿದ ಟೇಬಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ.
Related Articles
ಕೆಲವರಿಗೆ ಪರಿಸರವೆಂದರೆ ತುಂಬಾ ಇಷ್ಟ ಅಂತವರು ಮನೆಗಳಲ್ಲಿ ಪ್ರಕೃತಿಯಂತೆ ತೋರ್ಪಡಿಸಲು ಕೆಲವು ರೀತಿಯ ವಿನ್ಯಾಸಗಳನ್ನು ಮನೆಗಳಲ್ಲಿ ಸೃಷ್ಟಿಸುತ್ತಾರೆ. ಟೇಬಲ್ ಮೇಲೆ ಅಕ್ವೇರಿಯಂನಂತೆ ಮಾಡಿಅದರಲ್ಲಿ ಹಲವು ಬಗೆಯ ಮೀನುಗಳನ್ನು ಸಾಕುವುದು, ಇದು ಟೇಬಲ್ ಆಗಿ, ಅಕ್ವೇರಿಯಂ ಆಗಿ ಸುಂದರವಾಗಿ ಕಾಣುತ್ತದೆ. ಇನ್ನು ಕೆಲವರು ಕಲ್ಲುಗಳಲ್ಲಿ ಸಮುದ್ರದ ಚಿತ್ರಗಳನ್ನು ಬಿಡಿಸಿ ಟೇಬಲ್ ತಯಾರಿಸುತ್ತಾರೆ. ಕುಳಿತುಕೊಳ್ಳುವ ಆಸನವನ್ನು ಸಮುದ್ರದಲ್ಲಿ ಸಿಗುವ ಚಿಪ್ಪುಗಳ ಮೂಲಕ ರಚಿಸಿರುತ್ತಾರೆ ಇದು ಮನೆಯ ಒಳಾಂಗಣ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
Advertisement
ಸ್ಟೋರ್ ಮಾಡಲು ಉತ್ತಮಡೈನಿಂಗ್ ಟೇಬಲ್‌ಗಳಲ್ಲಿ ಸ್ಟೋರಿಂಗ್ ಆಯ್ಕೆ ಕೂಡ ಇಂದು ಲಭ್ಯವಿದೆ. ಸ್ಟೋರ್‌ನಂತೆ ಬಳಸಿದಾಗ ಜಾಗದ ಉಳಿತಾಯವಾಗುವುದಲ್ಲದೆ ಕೆಲವು ಸಾಮಗ್ರಿಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಇದನ್ನು ಎರಡು ರೀತಿಯಲ್ಲಿ ಉಪಯೋಗಿಸಹುದು. ಊಟ ಮಾಡುವಾಗ ಎಳೆದರೆ ಅದು ಅಗಲವಾಗುತ್ತದೆ ಹಾಗೂ ತರಕಾರಿಗಳನ್ನು ಕತ್ತರಿಸಿ ಇಡಲು ಸಹಾಯವಾಗುತ್ತದೆ. ವೈವಿಧ್ಯಮಯ ಟೇಬಲ್
ಗಾಜು, ಮಾರ್ಬಲ್, ಮರಗಳು ಸಹಿತ ಹಲವು ವಿಧಗಳಲ್ಲಿ ಲಭ್ಯವಿದ್ದು ಆಸನಗಳಲ್ಲಿಯೂ ಬೇರೆ ಬೇರೆ ವಿನ್ಯಾಸಗಳಿವೆ. ವೆಚ್ಚಕ್ಕೆ ತಕ್ಕಂತೆ ನಿಮಗೆ ಟೇಬಲ್‌ಗಳು ಲಭ್ಯವಿದೆ. ಈಗ ಮಾರುಕಟ್ಟೆಗಳಲ್ಲಿ ಫೀಶ್ ಡಿಸೈನ್‌ಗಳು ಹೆಚ್ಚು ಬೇಡಿಕೆಯಲ್ಲಿದೆ. ಪ್ರಾಚೀನ ಸಂಸ್ಕೃತಿಯ ಟೇಬಲ್
ಪ್ರಾಚೀನ ಸಂಸ್ಕೃತಿಯನ್ನು ಉಳಿಸಲು ಕೆಲವರು ಆಧುನಿಕತೆಯ ಟಚ್ ನೀಡಿ ಡೈನಿಂಗ್ ಟೇಬಲ್ ತಯಾರಿಸುತ್ತಾರೆ ಇದು ಹೇಗಿರುತ್ತವೆಂದರೆ ಟೇಬಲ್ ತುಂಬಾ ಕೆಳಗಡೆ ಇರುವ ಹಾಗೆ ಮಾಡಿಸಿ ಅದಕ್ಕಿರುವ ಆಸನ ಇನ್ನು ತಗ್ಗವಾಗಿ ಅಂದರೆ ನೆಲಕ್ಕೆ ಸ್ವಲ್ಪ ಹತ್ತಿರದಲಿರುತ್ತವೆ ಇವು ನೆಲದಲ್ಲಿಯೇ ಕುಳಿತುಕೊಂಡು ಊಟ ಮಾಡಿದ ಹಾಗಿನ ಅನುಭವ ನೀಡುತ್ತದೆ. ಆದರೆ ಇದರ ಬಳಕೆ ತುಂಬಾ ಕಡಿಮೆ. - ಪ್ರೀತಿ ಭಟ್ ಗುಣವಂತೆ