Advertisement

ಇಂಪಾದ ಹಾಡುಗಳೊಂದಿಗೆ ಕಿಕ್ಕೇರಿಸಿದ “ಕಿಸ್”!

09:59 AM Sep 18, 2019 | Team Udayavani |

ಬೆಂಗಳೂರು; ನಿರ್ದೇಶಕ ಎ.ಪಿ ಅರ್ಜುನ್ ಚಿತ್ರಗಳೆಂದ ಮೇಲೆ ಪ್ರೇಕ್ಷಕರಿಗೆಲ್ಲ ಹಾಡುಗಳ ಬಗ್ಗೆ ಅಗಾಧವಾದ ನಿರೀಕ್ಷೆಗಳಿರುತ್ತವೆ. ವಿ. ಹರಿಕೃಷ್ಣ ಮತ್ತು ಎ.ಪಿ ಅರ್ಜುನ್ ಜೋಡಿಯ ಮೆಲೋಡಿ ಕಾಂಬಿನೇಷನ್ ಕಿಸ್ ಮೂಲಕವೂ ಯಶಸ್ವಿಯಾಗಿ ಮುಂದುವರೆದಿದೆ.

Advertisement

ಆರಂಭದಲ್ಲಿ ಬಿಡುಗಡೆಯಾಗಿದ್ದು ಶೀಲ ಸುಶೀಲ ಯೂ ಡೋಂಟುವರಿ ಹಾಡು. ಈ ಮೂಲಕವೇ ಕಿಸ್ ಏಕಾಏಕಿ ಸಂಚಲನ ಸೃಷ್ಟಿಸಿತ್ತು. ಅದಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕ ವೀವ್ಸ್ ಬೆರಗಾಗುವಂತಿತ್ತು. ಲಕ್ಷಾಂತರ ವೀಕ್ಷಣೆಯೊಂದಿಗೆ ಅದು ಮುನ್ನುಗ್ಗುತ್ತಲೇ ಇದೆ. ಅದಾದ ನಂತರ ಬಂದ ಮೆಲೋಡಿ ಹಾಡಿಗೂ ಜನ ಫಿದಾ ಆಗಿದ್ದಾರೆ. ನಂತರ ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ ಎಂಬ ಹಾಡು ಬಿಡುಗಡೆಯಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿ ಬಿಡುಗಡೆಗೊಳಿಸಿರೋ ಈ ಹಾಡು ಕೂಡಾ ಹಿಟ್ ಆಗಿದೆ.

ಅದಾಗುತ್ತಲೇ ಇದೀಗ ಪ್ಯಾಥೋ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಂತೂ ವಿರಹಿಗಳ ಪಾಲಿಗೆ ಹಾಟ್ ಫೇವರಿಟ್ ಆಗಿಬಿಟ್ಟಿದೆ. ಸ್ವತಃ ಎ ಪಿ ಅರ್ಜುನ್ ಅವರೇ ಬರೆದಿರೋ ಈವರೆಗೆ ಬಿಡುಗಡೆಯಾದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ. ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರೋ ಈ ಹಾಡುಗಳೆಲ್ಲವೂ ಅಷ್ಟು ಸಲೀಸಾಗಿ ಬೀಟ್ ಮಾಡಲಾರದಂಥಾ ದಾಖಲೆಯನ್ನೇ ಸೃಷ್ಟಿಸಿವೆ. ಇದು ಅರ್ಜುನ್ ಪಾಲಿಗೆ ದಕ್ಕಿರೋ ಆರಂಭಿಕ ಗೆಲುವು. ಈ ಚಿತ್ರ ಅಕ್ಟೋಬರ್ 27ರಂದು ಬಿಡುಗಡೆಯಾಲು ಸಿದ್ಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next