Advertisement

Kishore Kumar Jena; ಆಸ್ಟ್ರೇಲಿಯದಲ್ಲಿ ತರಬೇತಿಗೆ ಕ್ರೀಡಾ ಸಚಿವಾಲಯ ಒಪ್ಪಿಗೆ

11:52 PM Jan 11, 2024 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ತರಬೇತಿ ಪಡೆಯುವ ಏಷ್ಯನ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಜಾವೆಲಿನ್‌ ಎಸೆತಗಾರ ಕಿಶೋರ್‌ ಕುಮಾರ್‌ ಜೆನ ಅವರ ಪ್ರಸ್ತಾವಕ್ಕೆ ಕ್ರೀಡಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಒಲಿಂಪಿಕ್‌ ಪದಕ ವಿಜೇತೆ ಮೀರಾಬಾಯಿ ಚಾನು ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ಮೊದಲು ಅಮೆರಿಕದಲ್ಲಿ ಒಂದು ತಿಂಗಳ ಪುನರ್ವಸತಿ ತರಬೇತಿಗೆ ಧನಸಹಾಯ ನೀಡಲು ಕೂಡ ಒಪ್ಪಿಗೆ ಸೂಚಿಸಿದೆ.

Advertisement

ಕಿಶೋರ್‌ ಅವರು ಆಸ್ಟ್ರೇಲಿಯದ ಗೋಲ್ಡ್‌ ಕೋಸ್ಟ್‌ನಲ್ಲಿ 78 ದಿನಗಳ ಕಾಲ ತರಬೇತಿ ಪಡೆಯಲಿದ್ದಾರೆ. ಚಾನು ಅವರು ಸೇಂಟ್‌ ಲೂಯಿಸ್‌ನಲ್ಲಿ ತರಬೇತಿ ಪಡೆಯಲು ಅಮೆರಿಕಕ್ಕೆ ತೆರಳಲಿದ್ದಾರೆ. ಅವರು ಡಾ| ಆರನ್‌ ಹಾರ್ಷ್‌ಚಿಗ್‌ ಮತ್ತು ಮುಖ್ಯ ತರಬೇತುದಾರ ವಿಜಯ್‌ ಶರ್ಮ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next