ಅವರು ತಾಲೂಕಿನ ಇತಿಹಾಸ ಪ್ರಸಿದ್ಧ ಪಂಪಾಸರೋವರಕ್ಕೆ ಭೇಟಿ ನೀಡಿ ಜೀರ್ಣೋದ್ಧಾರ ಕಾರ್ಯ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಹಂಪಿಯಲ್ಲಿ ನಾಲ್ಕು ಪುರಾತನ ದೇಗುಲ ಜೀರ್ಣೋದ್ಧಾರ ಮಾಡಿದ್ದು ಪಂಪಾಸರೋವರ ಹಾಗೂ ಇಲ್ಲಿಯ ದೇಗುಲವನ್ನು ಮೊದಲಿನ ಸ್ವರೂಪದಲ್ಲೇ ನಿರ್ಮಿಸಲಾಗುತ್ತಿದೆ. ವಿಶ್ವದಲ್ಲಿಯೇ ಖ್ಯಾತ ಸ್ಥಳವಾಗಿರುವ ಕಿಷ್ಕಿಂದಾ ಅಂಜನಾದ್ರಿ, ಪಂಪಾಸರೋವರ, ಋಷಿಮುಖ ಪರ್ವತ ಶ್ರೀಚಂದ್ರಮೌಳೇಶ್ವರ ದೇಗುಲಗಳನ್ನು ಪುರಾತತ್ವ ಕೇಂದ್ರ ಸರ್ವೇಕ್ಷಣಾ ಇಲಾಖೆ ಜೀರ್ಣೋದ್ಧಾರ ಮಾಡುವಂತೆ ಪತ್ರ ಬರೆಯಲಾಗಿದೆ.
Advertisement
ಭಾರತದ ಇತಿಹಾಸದಲ್ಲಿ ಅರಸರು ದೇಗುಲ, ಕೆರೆ, ಕಟ್ಟೆ, ರಸ್ತೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸ ಕಾರ್ಯ ಮಾಡಿದ್ದು ರಾಜ್ಯ ಸರಕಾರ ಈಗಲೂ ಇಂತಹ ಕಾರ್ಯ ಮಾಡಲು ಯೋಜನೆ ರೂಪಿಸಿದೆ. ಕೊರೊನಾ ಕಾರಣಕ್ಕಾಗಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಕಾರ್ಯದಲ್ಲಿ ವಿಳಂಭವಾಗಿದ್ದು ಮುಂದೆ ಸಮರೋಪಾದಿಯಲ್ಲಿ ಕೆಲಸಗಳು ನಡೆಯಲಿವೆ ಎಂದರು.
ಸಂಪ್ರದಾಯ ಸಂಗೀತ ಕಾರ್ಯಕ್ರಮ: ಸ್ಥಳೀಯ ಕಲಾವಿದ ಗಾಳೇಶ ತಂಡದವರು ಋಷಿಮುಖ ಪರ್ವತದ ತಪ್ಪಲಿನಲ್ಲಿ ಆಯೋಜಿಸಿದ್ದ ಸಂಪ್ರದಾಯಿಕ ವಾದ್ಯಗಳ ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಮರಳಿನ ಮೇಲೆ ಕುಳಿತು ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹಾಗೂ ಮಾಜಿ ಸಂಸದೆ ಬಿ. ಶಾಂತಮ್ಮ ಕಾರ್ಯಕ್ರಮ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಯ್ಯಸ್ವಾಮಿ, ಮುಖಂಡ ಕೆಲೋಜಿ ಸಂತೋಷ ಹಾಗೂ ಬಿಜೆಪಿ ಕಾರ್ಯಕರ್ತರಿದ್ದರು. ವೀಕ್ಷಿಸಿದರು.ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಪ್ರೇರಣೆಯಾಗಿದ್ದ ಕಿಷ್ಕಿಂದಾ ಪಂಪಾಸರೋವರ ಸಮಗ್ರ ಅಭಿವೃದ್ಧಿಗೆ ಸಚಿವ ಬಿ.ಶ್ರೀರಾಮುಲು ಪಣ ತೊಟ್ಟಿದ್ದು ಅವರಿಗೆ ಗುರುಗಳಾದ ವಿದ್ಯಾರಣ್ಯ ಹಕ್ಕಬುಕ್ಕರು ಹಾಗೂ ಶ್ರೀಕೃಷ್ಣದೇವರಾಯರ ಆಶೀರ್ವಾದವಿದೆ. ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಸಚಿವ ಶ್ರೀರಾಮುಲು ಸ್ವಂತ ಹಣ ಖರ್ಚು ಮಾಡಿ ಈಗಾಗಲೇ ಹಂಪಿಯಲ್ಲಿ ಹಲವು ದೇಗುಲ ನಿರ್ಮಿಸಿದ್ದು ಪ್ರಸ್ತುತ ಪಂಪಾಸರೋವರ ಜೀರ್ಣೋದ್ಧಾರ ಮಾಡುತ್ತಿದ್ದು ಪುಣ್ಯದ ಕೆಲಸವಾಗಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಉದಯವಾಣಿ ಗೆ ತಿಳಿಸಿದರು