ಗಂಗಾವತಿ: ಕರ್ನಾಟಕ ವಿಧಾನಸಭಾ ಚುನಾವಣೆ ಮೇ10 ರಂದು ಮತದಾನ ನಡೆಯಲಿದ್ದು ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಅನುಕೂಲವಾಗುವಂತೆ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಆದರೆ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ಸೇರಿ ರಾಜ್ಯ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ವಿಧಾನಸಭೆಯ ಮತದಾನ ಹೆಚ್ಚಿನ ಸಂಖ್ಯೆಯಲ್ಲಿ ಆಗುವ ದೃಷ್ಟಿಯಿಂದ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ವಿಶೇಷ ರಜೆ ನೀಡಿ ಆದೇಶ ಹೊರಡಿಸಿದೆ ಜೊತೆಗೆ ಪ್ರವಾಸಿ ತಾಣಗಳ ಬಂದು ಮಾಡಿದ್ದು ರಜೆ ಹಾಕಿ ಪ್ರವಾಸಿ ತಾಣಗಳಿಗೆ ಹೋಗದಂತೆ ನಿರ್ಬಂಧ ಹೇರಿದೆ.ಆದರೆ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆಯಲ್ಲಿರುವ ರಾಜ್ಯದ ದೇವಾಲಯಗಳಿಗೆ ಭಕ್ತರು ಪ್ರವೇಶ ನಿರ್ಬಂಧ ಹೇರದೆ ಇರುವುದರಿಂದ ಮತದಾರರು ಮತದಾನದಲ್ಲಿ ಪಾಲ್ಗೊಳ್ಳದೇ ದೇವಾಲಯಗಳಿಗೆ ಹೋಗುವ ಸಾಧ್ಯತೆ ಇದೆ.ರಜಾದಿನಗಳು ಸೇರಿ ವಿಶೇಷ ದಿನಗಳಲ್ಲಿ ಕಿಷ್ಕಿಂಧಾ ಅಂಜನಾದ್ರಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಎಂದಿನಂತೆ ಪೂಜಾ ಧಾರ್ಮಿಕ ಕಾರ್ಯ ನಡೆಸಿ ಭಕ್ತರ ಪ್ರವೇಶ ನಿರ್ಬಂಧ ವಿಧಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತದೆ.
ಸರ್ಕಾರದಿಂದ ಆದೇಶ ಬಂದಿಲ್ಲ: ಮೇ 10 ರಂದು ಮತದಾನ ನಡೆಯುವುದರಿಂದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.
ಕಿಷ್ಕಿಂಧಾ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಪ್ರವೇಶ ನಿರ್ಬಂಧಿಸಿ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ಯಾವುದೇ ಆದೇಶ ಜಾರಿ ಮಾಡಿಲ್ಲ ಎಂದು ತಹಸಿಲ್ದಾರ್ ತಹಸೀಲ್ದಾರ್ ಮಂಜುನಾಥ್ ಸ್ವಾಮಿ ಹಿರೇಮಠ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಹುಪತ್ನಿತ್ವ ನಿಷೇಧಿಸಲು ಮುಂದಾದ ಅಸ್ಸಾಂ ಸರ್ಕಾರ: ತಜ್ಞರ ಸಮಿತಿ ರಚನೆ