Advertisement

ಕಿಷ್ಕಿಂದಾ ಅಂಜನಾದ್ರಿ ಕ್ಷೇತ್ರವನ್ನು ಮಂತ್ರಾಲಯ ಮಠಕ್ಕೆ ಒಪ್ಪಿಸುವಂತೆ ಸರ್ಕಾರಕ್ಕೆ ಮನವಿ

05:47 PM May 08, 2022 | Team Udayavani |

ಗಂಗಾವತಿ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಕ್ಷೇತ್ರದ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಟ್ರಸ್ಟ್ ಗಳನ್ನು ರಚನೆ ಮಾಡಿಕೊಂಡು ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ಹಣವನ್ನು ಎತ್ತುವಳಿ ಮಾಡುತ್ತಿದ್ದಾರೆ. ಆದ್ದರಿಂದ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಜೊತೆಗೆ ಅಂಜನಾದ್ರಿ ಬೆಟ್ಟವನ್ನು ಮಂತ್ರಾಲಯ ಮಠದ ಸುಪರ್ದಿಗೆ ಒಪ್ಪಿಸುವಂತೆ ವಿಧಾನಪರಿಷತ್ ಮಾಜಿ ಸದಸ್ಯ ಎಚ್ .ಆರ್. ಶ್ರೀನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಅಂಜನಾದ್ರಿ ಕ್ಷೇತ್ರವು ದೇಶ ವಿದೇಶದಲ್ಲಿ ಖ್ಯಾತಿ ಪಡೆದಿದ್ದು ನಿತ್ಯವೂ ಸಾವಿರಾರು ಜನರು ಅಂಜನಾದ್ರಿಯನ್ನು ದರ್ಶನಕ್ಕೆ ಬರುತ್ತಾರೆ .ದೇಗುಲದ ಹುಂಡಿಯಲ್ಲಿ ಪ್ರತಿ ತಿಂಗಳು ಲಕ್ಷಾಂತರ ಸಂಗ್ರಹವಾಗುತ್ತಿದ್ದು ಸರಕಾರ ಈ ಕ್ಷೇತ್ರವನ್ನು ಮಂತ್ರಾಲಯ ಮಠಕ್ಕೆ ಒಪ್ಪಿಸಬೇಕು ಇದರಿಂದ ಸರಿಯಾದ ನಿರ್ವಹಣೆ ಸಾಧ್ಯವಾಗುತ್ತದೆ. ಅಂಜನಾದ್ರಿ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಟ್ರಸ್ಟ್ ಗಳನ್ನು ಸ್ಥಾಪನೆ ಮಾಡಿಕೊಂಡು ಆ ಟ್ರಸ್ಟ್ ಮೂಲಕ ಲಕ್ಷಾಂತರ ಚಂದಾ ಎತ್ತುವ ಕಾರ್ಯ ನಿರಂತರ ಮಾಡುತ್ತಿದ್ದಾರೆ.

ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಕೂಡಲೇ ಅಂಥ ವ್ಯಕ್ತಿಗಳನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸಬೇಕು. ಮತ್ತು ಟ್ರಸ್ಟ್ ಗಳನ್ನು ರದ್ದು ಮಾಡಿ ದೇಗುಲವನ್ನು ಮಂತ್ರಾಲಯ ಮಠಕ್ಕೆ ಒಪ್ಪಿಸಬೇಕು. ಇದರಿಂದ ಈ ಭಾಗದಲ್ಲಿ ಸಂಸ್ಕೃತ ಪಾಠಶಾಲೆ, ಗುರುಕುಲ ಸೇರಿದಂತೆ ನಿತ್ಯವೂ ಆಗಮಿಸುವ ಭಕ್ತರಿಗೆ ಮಂತ್ರಾಲಯ ಮಠ ಅನುಕೂಲಗಳನ್ನು ವ್ಯವಸ್ಥೆ ಮಾಡಿಕೊಡಲಿದೆ. ಈ ಹಿಂದೆ ಮಂತ್ರಾಲಯ ಮಠದ ಶ್ರೀಗಳು ಕ್ಷೇತ್ರವನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಸರಕಾರವನ್ನು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಾವು ಮುಖ್ಯಮಂತ್ರಿ ಮತ್ತು ಮುಜರಾಯಿ ಖಾತೆ ಸಚಿವರ ಬಳಿಗೆ ನಿಯೋಗವನ್ನು ತೆಗೆದುಕೊಂಡು ಹೋಗಿ ಅಂಜನಾದ್ರಿಯನ್ನು ಮಂತ್ರಾಲಯ ಮಠಕ್ಕೆ ಒಪ್ಪಿಸುವಂತೆ ಮನವಿ ಮಾಡಲಾಗುತ್ತದೆ. ಇದರಿಂದ ಖಾಸಗಿ ವ್ಯಕ್ತಿಗಳು ಸಹ ಅಂಜನಾದ್ರಿಯಲ್ಲಿ ಮೂಲಸೌಕರ್ಯಕ್ಕೆ ದಾನ ನೀಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ನೆರವಾಗಲಿದ್ದಾರೆ ಎಂದು ಶ್ರೀನಾಥ್ ಹೇಳಿದ್ದಾರೆ.

ಇದನ್ನೂ ಓದಿ : ವಾರಾಂತ್ಯ ರಜೆ: ಕಡಲತೀರಕ್ಕೆ ಪ್ರವಾಸಿಗರ ಲಗ್ಗೆ, ಮಲ್ಪೆಯಲ್ಲಿ ಟ್ರಾಫಿಕ್‌ ದಟ್ಟಣೆ

Advertisement

Udayavani is now on Telegram. Click here to join our channel and stay updated with the latest news.

Next