Advertisement

ಮಾಜಿ ಕ್ರಿಕೆಟ್ ಆಯ್ಕೆಗಾರ ಕಿಶನ್‌ ರುಂಗ್ಟಾ ನಿಧನ

03:31 PM May 03, 2021 | Team Udayavani |

ಜೈಪುರ: ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಸಮಿತಿಯ ಮಾಜಿ ಸದಸ್ಯ, ರಾಜಸ್ಥಾನ ರಣಜಿ ತಂಡದ ಮಾಜಿ ನಾಯಕ ಕಿಶನ್‌ ರುಂಗ್ಟಾ ಇನ್ನಿಲ್ಲ. 88 ವರ್ಷದ ಅವರು ರವಿವಾರ ಜೈಪುರದ ಆಸ್ಪತ್ರೆಯೊಂದರಲ್ಲಿ ಕೊರೊನಾದಿಂದ ನಿಧನ ಹೊಂದಿದರು.

Advertisement

ಒಂದು ವಾರದ ಹಿಂದೆ ಕೊರೊನಾ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ರುಂಗ್ಟಾಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಿಶನ್‌ ರುಂಗ್ಟಾ 1998ರಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಸಮಿತಿಯ ಕೇಂದ್ರ ವಲಯದ ಸದಸ್ಯರಾಗಿದ್ದರು. 1953-1970ರ ಅವಧಿಯಲ್ಲಿ 59 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 2,717 ರನ್‌ ಬಾರಿಸಿದ್ದರು.

2000ದ ಮಧ್ಯ ಭಾಗದಲ್ಲಿ ಲಲಿತ್‌ ಮೋದಿ ಪ್ರವೇಶವಾಗುವುದಕ್ಕೂ ಮುನ್ನ 5 ದಶಕಗಳ ಕಾಲ ರುಂಗ್ಟಾ ಕುಟುಂಬ ರಾಜಸ್ಥಾನ್‌ ಕ್ರಿಕೆಟ್‌ ಮಂಡಳಿಯಲ್ಲಿ ತನ್ನ ಅಧಿಕಾರ ಚಲಾಯಿಸಿಕೊಂಡು ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next