Advertisement

ಕಿಸಾನ್‌ ಸ್ಕೀಮ್‌ ವಿಸ್ತರಣೆ ಅಧಿಸೂಚನೆ ಪ್ರಕಟ

12:27 AM Jun 09, 2019 | Sriram |

ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರದ ಮಹತ್ವಾ ಕಾಂಕ್ಷಿ ಯೋಜನೆ ಪಿಎಂ ಕಿಸಾನ್‌ ಅನ್ನು ಎಲ್ಲ ರೈತರಿಗೂ ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗಿದೆ.

Advertisement

ಇದರಿಂದಾಗಿ 14.5 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡಲಾಗುತ್ತದೆ. ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಮರುದಿನ ಅಂದರೆ ಮೇ 31ರಂದು ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿತ್ತು.

ಈ ವಿಚಾರವನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲೂ ಪ್ರಕಟಿಸಿತ್ತು. 2 ಹೆಕ್ಟೇರುಗಳಿಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಈ ಯೋಜನೆ ಅನ್ವಯವಾಗುತ್ತಿತ್ತು. ಆದರೆ ಈಗ ಎಷ್ಟೇ ಭೂಮಿ ಇದ್ದರೂ ವಾರ್ಷಿಕ ಆರು ಸಾವಿರ ರೂ. ಲಭ್ಯವಾಗಲಿದೆ.

ಆದರೆ ಮಾಸಿಕ 10 ಸಾವಿರ ಪಿಂಚಣಿ ಪಡೆ ಯುತ್ತಿರುವವರು, ಸರಕಾರಿ ಉದ್ಯೋಗದಲ್ಲಿರುವ ಕುಟುಂಬದವರಿಗೆ ಈ ಯೋಜನೆ ಅನ್ವಯ ವಾಗುವುದಿಲ್ಲ. ಹೊಸ ಯೋಜನೆ ಅಡಿ ಸರಕಾರ 2019-20 ರಲ್ಲಿ 87 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next