Advertisement

ಕೀರ್ತಿ ವಿಷ್ಣುವರ್ಧನ್‌ಗೆ ಅತ್ಯುತ್ತಮ ವಸ್ತ್ರವಿನ್ಯಾಸಕಿ ಪ್ರಶಸ್ತಿ

12:08 PM Dec 20, 2017 | |

ಡಾ.ರಾಜಕುಮಾರ್‌ ಅವರಿಗೆ ಪುನೀತ್‌ ರಾಜಕುಮಾರ್‌ ಅವರು ವಸ್ತ್ರವಿನ್ಯಾಸ ಮಾಡುತ್ತಿದ್ದದ್ದು ಗೊತ್ತೇ ಇದೆ. ಹಾಗೆಯೇ, ಕೀರ್ತಿ ವಿಷ್ಣುವರ್ಧನ್‌ ಅವರು ಸಹ ವಿಷ್ಣುವರ್ಧನ್‌ ಅವರಿಗೆ ವಸ್ತ್ರವಿನ್ಯಾಸ ಮಾಡುತ್ತಿದ್ದದ್ದೂ ಗೊತ್ತು. ಈಗ ಹೊಸ ವಿಷಯ ಅಂದರೆ, ಕೀರ್ತಿ ವಿಷ್ಣುವರ್ಧನ್‌ ಅವರು ಸಿನಿಮಾ ಕ್ಷೇತ್ರದಲ್ಲಿ ವಸ್ತ್ರವಿನ್ಯಾಸಕರಾಗಿ ಮಾಡಿರುವ ಸೇವೆ ಗುರುತಿಸಿ, “ಕರ್ನಾಟಕ ಚಿತ್ರ ರಸಿಕರ ಸಂಘ’ ಅವರನ್ನು ಇತ್ತೀಚೆಗೆ ಗೌರವಿಸಿ, ಸನ್ಮಾನಿಸುವ ಮೂಲಕ “ಕರ್ನಾಟಕ ಚಿತ್ರ ರಸಿಕರ ಸಂಘ’ ಪ್ರಶಸ್ತಿ ಪ್ರದಾನ ಮಾಡಿದೆ.

Advertisement

ಕೀರ್ತಿ ವಿಷ್ಣುವರ್ಧನ್‌ ಅವರು ಡಾ.ವಿಷ್ಣುವರ್ಧನ್‌ ಅಭಿನಯಿಸಿದ ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಸ್ತ್ರವಿನ್ಯಾಸ ಮಾಡಿದ್ದಾರೆ. “ಮೋಜುಗಾರ ಸೊಗಸುಗಾರ’ ಚಿತ್ರದಿಂದ ಶುರುಮಾಡಿದ ವಸ್ತ್ರವಿನ್ಯಾಸ ಕೆಲಸ “ಸೂರಪ್ಪ’, “ಯಜಮಾನ’, “ಕೋಟಿಗೊಬ್ಬ’,”ಆಪ್ತಮಿತ್ರ’ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಿಗೆ ಕೀರ್ತಿ ಅವರು ವಸ್ತ್ರವಿನ್ಯಾಸ ಮಾಡಿದ್ದಾರೆ.

ಅದಷ್ಟೇ ಅಲ್ಲ, ಕೀರ್ತಿ ವಿಷ್ಣುವರ್ಧನ್‌ ಅವರು ಪತಿ ಅನಿರುದ್ಧ ಅವರ ಚಿತ್ರಗಳಿಗೂ ವಸ್ತ್ರವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ.  ಈಗ ಬಿಡುಗಡೆಗೆ ರೆಡಿಯಾಗಿರುವ “ರಾಜಾಸಿಂಹ’ ಚಿತ್ರಕ್ಕೂ ವಸ್ತ್ರವಿನ್ಯಾಸ ಮಾಡಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ, “ಕರ್ನಾಟಕ ಚಿತ್ರ ರಸಿಕರ ಸಂಘ’ದ ಪದಾಧಿಕಾರಿಗಳು ಪ್ರೀತಿಯಿಂದ ಸನ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಜಮೀರ್‌ ಅಹ್ಮದ್‌ ಹಾಗೂ ಸಂಘದ ಸದಸ್ಯರು ಮತ್ತು ಚಿತ್ರರಂಗದ ಗಣ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next