Advertisement

ವನಿತಾ ಕೋಚ್‌ ಹುದ್ದೆಗೆ ಕರ್ಸ್ಟನ್‌ ಆಸಕ್ತಿ

06:00 AM Dec 16, 2018 | Team Udayavani |

ಹೊಸದಿಲ್ಲಿ: ಭಾರತೀಯ ವನಿತಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಕೆಯ ಗಡುವು ಶುಕ್ರವಾರಕ್ಕೆ ಮುಗಿದಿದೆ. ಇದಕ್ಕೆ ಅನೇಕ ಮಂದಿ ಉಮೇದುವಾರರು ಮುಂದೆ ಬಂದಿದ್ದಾರೆ. ಇವರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆರಂಭಕಾರ, ಭಾರತದ 2011ರ ಏಕದಿನ ವಿಶ್ವಕಪ್‌ ವಿಜೇತ ತಂಡದ ತರಬೇತುದಾರನೂ ಆಗಿರುವ 51ರ ಹರೆಯದ ಗ್ಯಾರಿ ಕರ್ಸ್ಟನ್‌ ಕೂಡ ಸೇರಿದ್ದಾರೆ.

Advertisement

ಕರ್ಸ್ಟನ್‌ ಅರ್ಜಿ ಸಲ್ಲಿಸಿರುವುದನ್ನು ಬಿಸಿಸಿಐ ಕೂಡ ದೃಢಪಡಿಸಿದೆ. ಈ ಹುದ್ದೆಗೆ ಆಯ್ಕೆಯಾದರೆ ಖಂಡಿತವಾಗಿಯೂ ನ್ಯಾಯ ಸಲ್ಲಿಸುತ್ತೇನೆ ಎಂಬುದು ಕರ್ಸ್ಟನ್‌ ಹೇಳಿಕೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಕೋಚ್‌ ಆಗಿಯೂ ಕರ್ಸ್ಟನ್‌ ಕರ್ತವ್ಯ ನಿಭಾಯಿಸಿದ್ದರು.

ವಿವಾದಕ್ಕೆ ಸಿಲುಕಿರುವ ಈ ಮಹತ್ವದ ಹುದ್ದೆಗೆ ಭಾರತದ ಮಾಜಿ ಕ್ರಿಕೆಟಿಗರಾದ ಅತುಲ್‌ ಬೆಡಾಡೆ, ಡೇವಿಡ್‌ ಜಾನ್ಸನ್‌, ಮನೋಜ್‌ ಪ್ರಭಾಕರ್‌; ವಿದೇಶಿ ಉಮೇದುವಾರರಾದ ಡೇವ್‌ ವಾಟ್‌ಮೋರ್‌, ಹರ್ಶಲ್‌ ಗಿಬ್ಸ್, ಓವೇಸ್‌ ಷಾ, ಡಿಮಿಟ್ರಿ ಮಸ್ಕರೇನಸ್‌ ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next