Advertisement

ಸ್ಥಳೀಯ ಆರ್ಥಿಕತೆಯ ಪುನಶ್ಚೇತನಕ್ಕೆಂದೇ ಹುಟ್ಟಿದ ಸಂಘ

10:47 PM Feb 08, 2020 | Sriram |

ಸಮಾಜಮುಖೀ ನೆಲೆಯಲ್ಲಿ ಆಲೋಚಿಸುತ್ತಾ ಕ್ರಿಯಾಶೀಲವಾಗಿರುವ ಸಂಘ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘ. ಹಾಲು ಖರೀದಿಗೆ ಸೀಮಿತಗೊಳ್ಳದೆ
ಹೈನುಗಾರರ ಜ್ಞಾನ ಅಭಿವೃದ್ಧಿ ಕಡೆಗೂ ಗಮನ ಹರಿಸುತ್ತಿರುವುದು ವಿಶೇಷ.

Advertisement

ಉಪ್ಪುಂದ: ಸಮಾಜಮುಖೀ ಸಂಘ ವಾಗಿ ಗುರುತಿಸಿಕೊಂಡಿರುವ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘಕ್ಕೆ 45 ವರ್ಷಗಳ ಇತಿಹಾಸವಿದೆ.

ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 75 ಮಂದಿ ಸದಸ್ಯರನ್ನು ಒಟ್ಟು ಮಾಡಿ 1975 ರಲ್ಲಿ ಆರಂಭವಾದದ್ದು ಈ ಸಂಘ.

ಗ್ರಾಮೀಣ ಪ್ರದೇಶವಾದ ಕಿರಿಮಂಜೇಶ್ವರ, ಹೇರೂರು, ಉಳ್ಳೂರು, ಕಂಬದಕೋಣೆ, ಕೊಡೇರಿ ಭಾಗದ ಹೈನುಗಾರರು ಹಾಲನ್ನು ಹೊಟೆಲ್‌, ಮನೆಮನೆಗಳಿಗೆ ನೀಡಿ ಅಲ್ಪಸ್ವಲ್ಪ ಆದಾಯಗಳಿಸುತ್ತಿದ್ದರು. ಈ ಸಮಯದಲ್ಲಿ ಊರಿನ ಮುತ್ಸದಿಗಳನ್ನು ಒಳಗೊಂಡ ತಂಡ ರೈತರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಕಟ್ಟಿದ ಸಂಘಟನೆಯೇ ಈ ಸಂಘ.

ಸುಮಾರು 22 ವರ್ಷಗಳ ಕಾಲ ಬಾಡಿಗೆ ಕಟ್ಟದಲ್ಲಿದ್ದು, 1997 ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು. ಆರಂಭದಲ್ಲಿ ಸಂಗ್ರಹ ವಾಗುತ್ತಿದ್ದ ಪ್ರಮಾಣ ಕೇವಲ 100-125 ಲೀಟರ್‌ಗಳು. ಪ್ರಸ್ತುತ 357 ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ 1500ಲೀ.ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. 2008ರಲ್ಲಿ ಅಧ್ಯಕ್ಷ ಮಂಜುನಾಥ ಕಾರಂತರ ಅವಧಿಯಲ್ಲಿ 3ಸಾವಿರ ಲೀ. ಸಾಮರ್ಥ್ಯದ ಬಿಎಂಸಿ (ಬಲ್ಕ್ ಮಿಲ್ಕ್ ಕೂಲರ್‌) ಸ್ಥಾಪಿಸಲಾಗಿದೆ. ಡ್ರೈನೆಜ್‌ ವ್ಯವಸ್ಥೆ ಹಾಗೂ ಡೈರಿಯಲ್ಲಿಯೇ ಹಾಲಿನ ಪಾತ್ರೆ ಸ್ವಚ್ಚಗೊಳಿಸಲು ಬಿಸಿ ನೀರಿನ ಸೌಲಭ್ಯ ಕಲ್ಪಸಲಾಗಿದೆ.

Advertisement

ಅತೀ ಹೆಚ್ಚು ಲಾಭದ ನಿರೀಕ್ಷೆ ಇಟ್ಟುಕೊಳ್ಳದೇ ರೈತರಿಗೆ ಅಧಿಕ ಪ್ರಮಾಣದ ದರ ಸಿಗುವಂತೆ ಮಾಡುವ ಸಲುವಾಗಿ ಪ್ರಥಮ ಬಾರಿಗೆ ಹಾಲು ಉತ್ಪಾದಕರು ನೀಡುವ ಪ್ರತಿ ಮೀಲಿ ಲೀಟರ್‌ ಹಾಲನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ದರ ನೀಡುವ ನೂತನ ಪ್ರಯೋಗಕ್ಕೆ ಮುಂದಾಗಿದೆ ಈ ಸಂಘ.

ಆರಂಭದಲ್ಲಿ ಕಿರಿಮಂಜೇಶ್ವರ, ಹೇರೂರು, ಉಳ್ಳುರು, ಕಂಬದ ಕೋಣೆ, ಕೊಡೇರಿ ಪ್ರದೇಶದ ಹೈನು ಗಾರರು ಹಾಲು ಹಾಕುತ್ತಿದ್ದರು ಈಗ ಕೊಡೇರಿ, ಕಂಬದಕೋಣೆ, ಮೇಕೋಡಿನಲ್ಲಿ ಪ್ರತ್ಯೇಕ ಹಾಲು ಡೈರಿ ಸ್ಥಾಪನೆಯಾಗಿದೆ. ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳ ಬೇಕೆನ್ನುವುದು ಸಂಘದ ಮಹದಾಸೆ.

ಸಮಾಜಮುಖೀ ಕಾರ್ಯಕ್ರಮದತ್ತ ಒಲವು
ಪ್ರತಿ ವರ್ಷ ಕೃಷಿ ಅಧ್ಯಯನ ಪ್ರವಾಸ, ಹೈನುಗಾರಿಕೆ ಕುರಿತು ಮಾಹಿತಿ ಶಿಬಿರ, ಶುದ್ಧ ಹಾಲು ನಿರ್ವಹಣೆ ಶಿಬಿರ, ಜಾನುವಾರು ಪ್ರರ್ದಶನ, ಅತೀ ಹೆಚ್ಚು ಹಾಲು ನೀಡುವರಿಗೆ ಸಮ್ಮಾನ, ವಿದ್ಯಾರ್ಥಿ ವೇತನ, ಜಾನುವಾರುಗಳು ಅನಾರೋಗ್ಯಕ್ಕಿಡಾದಾಗ ಸಂಸ್ಥೆ ಮೂಲಕ ಸ್ಪಂದಿಸಲಾಗುತ್ತಿದೆ. ವಾರ್ಷಿಕವಾಗಿ ಹಲವಾರು ಉತ್ತೇಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರಶಸ್ತಿ
2005-6ನೇ ಸಾಲಿನಲ್ಲಿ ದ.ಕ.ಹಾಲು. ಒಕ್ಕೂಟದ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಸಂಘ ಪ್ರಶಸ್ತಿ, 2018-19ನೇ ಸಾಲಿನಲ್ಲಿ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಜಿಲ್ಲಾ ಉತ್ತಮ ಸಂಘ ಪ್ರಶಸ್ತಿ ದೊರಕಿದೆ. ಕೃಷ್ಣ ಬಳಗಾರ್‌ ಹಳಗೇರಿ, ಗೋವಿಂದ ಪೂಜಾರಿ, ವಿಶ್ವನಾಥ ಹವಾಲ್ದಾರ್‌ ಅತೀ ಹೆಚ್ಚು ಹಾಲು ನೀಡುವ ಹೈನುಗಾರರು.

ಅಧ್ಯಕ್ಷರು
ಕೆ.ರಾಮಪ್ಪಯ್ಯ ಕಾರಂತ, ಬಿ.ಪುಂಡರಿಕಾಕ್ಷ ಹೆಬ್ಟಾರ್‌, ವೈ.ಚಂದ್ರಶೇಖರ ಶೆಟ್ಟಿ, ಶೇಷಪ್ಪಯ್ಯ ಮಧ್ಯಸ್ಥ, ಅನಂತಕೃಷ್ಣ ಪಡಿಯಾರ, ಪಣಿಯಪ್ಪಯ್ಯ ಕಾರಂತ, ವೆಂಕಟರಮಣ ಉಡುಪ, ಎನ್‌.ಮಂಜುನಾಥ ಕಾರಂತ, ಪುಂಡರೀಕ ಮಧ್ಯಸ್ಥ. ಪ್ರಸ್ತುತ ಸುಬ್ಬಣ್ಣ ಶೆಟ್ಟಿ.

-  ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next