Advertisement

ಮಾಸ್‌ ಲುಕ್‌ ನಲ್ಲಿ ‘ರಾನಿ’ಎಂಟ್ರಿ; ನಾಯಕ ನಟನಾಗಿ ಕಿರಣ್‌ ರಾಜ್‌

06:14 PM Mar 26, 2023 | Team Udayavani |

ಕಿರುತೆರೆಯ “ಕನ್ನಡತಿ’ ಖ್ಯಾತಿಯ ನಟ ಕಿರಣ್‌ ರಾಜ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾ “ರಾನಿ’ಯ ಕೆಲಸಗಳು ಭರದಿಂದ ನಡೆಯುತ್ತಿದೆ. ಕೆಲ ತಿಂಗಳ ಹಿಂದಷ್ಟೇ ನಟ ಕಿರಣ್‌ ರಾಜ್‌, ದುಬೈನಲ್ಲಿ ಸುಮಾರು 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್‌ ಮಾಡುವ ಮೂಲಕ “ರಾನಿ’ ಸಿನಿಮಾದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದರು.

Advertisement

ಕಿರಣ್‌ ರಾಜ್‌ ಸಾಹಸಕ್ಕೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವಂತೆಯೇ, ಯುಗಾದಿ ಹಬ್ಬದ ಸಂದರ್ಭದಲ್ಲಿ “ರಾನಿ’ ಸಿನಿಮಾದಲ್ಲಿ ಕಿರಣ್‌ ರಾಜ್‌ ಕಾಣಿಸಿಕೊಂಡಿರುವ ಮಾಸ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ಇನ್ನು ಔಟ್‌ ಆ್ಯಂಡ್‌ ಔಟ್‌ ಮಾಸ್‌ ಕಥಾಹಂದರ ಹೊಂದಿರುವ “ರಾನಿ’ ಸಿನಿಮಾದಲ್ಲಿ ಕಿರಣ್‌ ರಾಜ್‌ ಅವರೊಂದಿಗೆ ರವಿಶಂಕರ್‌, ಮೈಕೋ ನಾಗರಾಜ್‌, ನಾಗತಿಹಳ್ಳಿ ಚಂದ್ರಶೇಖರ್‌, ಬಿ. ಸುರೇಶ, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್‌ ಹೆಗ್ಡೆ, ಪೃಥ್ವಿರಾಜ್‌, ಯಶ್‌ ಶೆಟ್ಟಿ, ಉಮೇಶ್‌, ಸುಜಯ್‌ ಶಾಸ್ತ್ರೀ, ಲಕ್ಷ್ಮೀ ಸಿದ್ದಯ್ಯ, ಸಂದೀಪ್‌ ಮಲಾನಿ, ಅನಿಲ್, ಧರ್ಮೆಂದ್ರ ಆರಸ್‌, ಮನಮೋಹನ್‌ ರೈ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಸ್ಟಾರ್‌ ಕ್ರಿಯೇಷನ್ಸ್‌’ ಮೂಲಕ ಚಂದ್ರಕಾಂತ್‌ ಪೂಜಾರಿ, ಉಮೇಶ್‌ ಹೆಗ್ಡೆ ನಿರ್ಮಿಸುತ್ತಿರುವ “ರಾನಿ’ ಸಿನಿಮಾಕ್ಕೆ ಗುರುತೇಜ್‌ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಬರೋಬ್ಬರಿ 6 ಸಾಹಸ ಸನ್ನಿವೇಶಗಳಿದ್ದು, ಈಗಾಗಲೇ ಸಿನಿಮಾದ ಶೇಕಡಾ 60ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಹಾಡುಗಳಿಗೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದು, ಪ್ರಮೋದ್‌ ಮರವಂತೆ ಸಾಹಿತ್ಯವಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯದ ವೇಳೆಗೆ “ರಾನಿ’ಯನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next