Advertisement

10 ಕಿ.ಮೀ. ಓಟ: ಕಿಪ್ರುಟೊ ವಿಶ್ವದಾಖಲೆ

10:01 AM Jan 14, 2020 | Team Udayavani |

ವೆಲೆನ್ಸಿಯಾ: ಕೀನ್ಯಾದ ರೋನೆಕ್ಸ್‌ ಕಿಪ್ರುಟೊ 10 ಕಿ.ಮೀ. ರಸ್ತೆ ಓಟದಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ರವಿವಾರ ಇಲ್ಲಿ ನಡೆದ ಸ್ಪರ್ಧೆಯನ್ನು ಅವರು 26 ನಿಮಿಷ, 24 ಸೆಕೆಂಡ್‌ಗಳಲ್ಲಿ ಮುಗಿಸಿದರು.

Advertisement

ಹಿಂದಿನ ವಿಶ್ವದಾಖಲೆ ಉಗಾಂಡದ ಜೋಶುವ ಚೆಪ್ಟೆಗಿ ಹೆಸರಲ್ಲಿತ್ತು. ಕಳೆದ ತಿಂಗಳಲ್ಲಷ್ಟೇ ಅವರು ವೆಲೆನ್ಸಿಯಾದಲ್ಲೇ ದಾಖಲೆ ನಿರ್ಮಿಸಿದ್ದರು. ಇದನ್ನು ಕಿಪ್ರುಟೊ 14 ಸೆಕೆಂಡ್‌ಗಳಿಂದ ಉತ್ತಮಗೊಳಿಸಿದರು. ಕೀನ್ಯಾದವರೇ ಆದ ಬರ್ನಾರ್ಡ್‌ ಕಿಮೆಲಿ ದ್ವಿತೀಯ (27:12), ಸ್ವಿಜರ್‌ಲ್ಯಾಂಡಿನ ಜೂಲಿಯನ್‌ ವಾಂಡರ್ ತೃತೀಯ ಸ್ಥಾನ ಪಡೆದರು (27:13).

5 ಕೀ.ಮೀ. ದೂರವನ್ನೂ ಅತೀ ಕಡಿಮೆ ಅವಧಿಯಲ್ಲಿ ಪೂರ್ತಿಗೊಳಿಸುವ ಮೂಲಕವೂ ರೋನೆಕ್ಸ್‌ ಕಿಪ್ರುಟೊ ವಿಶ್ವ ವಿಕ್ರಮಗೈದರು. ಇದಕ್ಕೆ ತಗುಲಿದ ಅವಧಿ 13 ನಿಮಿಷ, 18 ಸೆಕೆಂಡ್‌ಗಳು.

ಇದಕ್ಕೂ ಮುನ್ನ 2018ರ ಪರಗ್ವೆ ಕೂಟದಲ್ಲಿ ಕಿಪ್ರುಟೊ 10 ಕಿ.ಮೀ. ಓಟದಲ್ಲಿ ವಿಶ್ವದಾಖಲೆಯನ್ನು ಸಮೀಪಿಸಿದ್ದರು. ಅಂದು ಈ ದೂರವನ್ನು 26 ನಿಮಿಷ, 44 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next