ಹುಬ್ಬಳ್ಳಿ: ಇಲ್ಲಿನ ಕೋಯಿನ್ ರಸ್ತೆ ಲಕ್ಷ್ಮೀ ಮಾಲ್‌ನಲ್ಲಿರುವ ಸಪ್ನಾ ಬುಕ್ ಹೌಸ್‌ನಲ್ಲಿ ಗುರುವಾರದಿಂದ ಕಿಯೋಸ್ಕ್ ಯಂತ್ರದ ಅಳವಡಿಕೆ ಮಾಡಲಾಗಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಸಪ್ನಾ ಬುಕ್ ಹೌಸ್ ಆಡಳಿತ ಮಂಡಳಿ ಸದಸ್ಯ ನಿಜೇಶ ಷಾ ಮಾತನಾಡಿ, 14 ಶಾಖೆಗಳಲ್ಲಿ ಕಿಯೋಸ್ಕ್ ಪರಿಚಯಿಸಲಾಗುತ್ತಿದೆ. ಮಳಿಗೆಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕನಿಗೂ ಬೇಕಾದ ಪುಸ್ತಕ ಕೈ ಬೆರಳಿನಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೇವಲ ದೇಶದಲ್ಲಿ ಸಿಗುವ ಪುಸ್ತಕವಲ್ಲದೇ ವಿದೇಶಗಳಲ್ಲೂ ಹೆಸರು ಮಾಡಿರುವ ಪುಸ್ತಕಗಳನ್ನು ಪುಸ್ತಕ ಪ್ರೇಮಿಗಳಿಗೆ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.
ಒಂದು ಪುಸ್ತಕ ಮಳಿಗೆಯಲ್ಲಿ 1 ರಿಂದ 2 ಲಕ್ಷ ಪುಸ್ತಕ ಶೇಖರಣೆ ಮಾಡಿ ಇರಬಹುದು. ಆದರೆ ಈ ಕಿಯೋಸ್ಕ್ ಮೂಲಕ 2 ಕೋಟಿಗೂ ಅಧಿಕ ಪುಸ್ತಕಗಳನ್ನು ನೋಡಬಹುದಾಗಿದೆ. ಸದ್ಯ ಕಿಯೋಸ್ಕ್ದಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯ 2 ಕೋಟಿ ಪುಸ್ತಕಗಳ ಟೈಟಲ್ ಅಳವಡಿಕೆ ಮಾಡಲಾಗಿದೆ. ಹಂತ ಹಂತವಾಗಿ ಅಪ್‌ಗೆ ಗ್ರೇಡ್ ಮಾಡಲಾಗುವುದು ಎಂದರು.
ಮಳಿಗೆಯಲ್ಲಿ ಇರುವ ಪುಸ್ತಕಗಳ ಸಮಗ್ರ ಮಾಹಿತಿ ಒಳಗೊಂಡಿರುವ ಕಿಯೋಸ್ಕ್ದಲ್ಲಿ ಪುಸ್ತಕವನ್ನು ನೇರವಾಗಿ ತೆಗೆದುಕೊಳ್ಳಬಹುದು. ಒಂದು ವೇಳೆ ಮಳಿಗೆಯಲ್ಲಿ ಪುಸ್ತಕ ಇಲ್ಲದೇ ಇದ್ದಲ್ಲಿ ಪುಸ್ತಕದ ಹೆಸರು ಹಾಕಿ ನೋಂದಣಿ ಮಾಡಿಕೊಂಡರೆ ಅಂತಹ ಪುಸ್ತಕ ತರಿಸಿಕೊಡಲಾಗುವುದು. ಪುಸ್ತಕ ಆಗಮಿಸಿದ ನಂತರ ಮಳಿಗೆಗೆ ಬಂದು ತೆಗೆದುಕೊಳ್ಳಬಹುದು. ಇಲ್ಲವಾದರೆ ಅವರ ಹೇಳಿದ ವಿಳಾಸಕ್ಕೆ ಪುಸ್ತಕ ತಲುಪಿಸಲಾಗುವುದು. ಪುಸ್ತಕ ಬೇಕು ಎಂದು ನೋಂದಣಿ ಮಾಡಿಕೊಂಡವರು ಮಳಿಗೆಯಲ್ಲಿ ಹಣ ಸಂದಾಯ ಮಾಡಬಹುದು. ಇಲ್ಲವಾದಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆ ಮಾಡಿ ಹಣ ಸಂದಾಯ ಮಾಡಬಹುದು. ಇದಲ್ಲದೇ ಸಪ್ನಾ ಬುಕ್ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟ ಯೋಜನೆ ಈಗಾಗಲೇ ಜಾರಿಯಲ್ಲಿದ್ದು ಪುಸ್ತಕ ಪ್ರೇಮಿಗಳು ಆ ಮೂಲಕವಾದರೂ ಪುಸ್ತಕ ಖರೀದಿಸಬಹುದು ಎಂದರು.
ಶಾಖಾ ವ್ಯವಸ್ಥಾಪಕ ರಘು ಎಂ.ವಿ. ಮಾತನಾಡಿ, ಸಪ್ನಾ ಬುಕ್ ಹೌಸ್‌ನಲ್ಲಿ ಕಿಯೋಸ್ಕ್ ಇರಿಸಿಲಾಗಿದ್ದು, ಈ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳನ್ನು ಸಂಪರ್ಕಿಸಿದಾಗ ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಕಿಯೋಸ್ಕ್ ವಿಶ್ವವಿದ್ಯಾಲಯದಲ್ಲಿರಬೇಕು ಎಂದು ಹೇಳಿದ್ದು, ಸ್ವಪ್ನಾ ಬುಕ್ ಹೌಸ್‌ನ ಕಿಯೋಸ್ಕ್ಗಳನ್ನು ಅವಶ್ಯವಿರುವ ಕಡೆ ಅಳವಡಿಕೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಸಪ್ನಾ ಬುಕ್ ಹೌಸ್‌ನಲ್ಲಿ ನೂತನವಾಗಿ ಅಳವಡಿಸಿರುವ ಕಿಯೋಸ್ಕ್ನ್ನು ಎಸಿಪಿ ಎನ್.ಬಿ. ಸಕ್ರಿ ಅನಾವರಣಗೊಳಿಸಿ ಮೊದಲ ಪುಸ್ತಕ ಆರ್ಡರ್ ಮಾಡಿದರು. ದೊಡ್ಡೇಗೌಡ್ರ ಇನ್ನಿತರರಿದ್ದರು.