Advertisement

ಕಿನ್ನಿಗೋಳಿ:ನಿತ್ಯ ಟ್ರಾಕ್‌ ಜಾಮ್‌ ಕಿರಿಕಿರಿ

09:33 AM May 21, 2022 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಬಸ್‌ ನಿಲ್ದಾಣದಲ್ಲಿ ಪತ್ರೀ ನಿತ್ಯ ಬೆಳಗ್ಗೆ, ಅಪರಾಹ್ನ, ಸಂಜೆಯ ಸಮಯದಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ನಿರಂತರವಾಗಿ ಹೆಚ್ಚಾಗುತ್ತಿದ್ದು, ಆಡಳಿತ ಇನ್ನೂ ಇದಕ್ಕೆ ಪರಿಹಾರ ಕಂಡುಕೊಂಡಿಲ್ಲ.

Advertisement

ಬೆಳೆಯುತ್ತಿರುವ ಕಿನ್ನಿಗೋಳಿ ಪಟ್ಟಣಕ್ಕೆ ಪ್ರತಿನಿತ್ಯ ಸುಮಾರು 200 ಟ್ರಿಪ್‌ ಗಳ ಮೂಲಕವಾಗಿ 100 ಕ್ಕೂ ಮಿಕ್ಕಿ ಬಸ್‌ ಗಳು ಸಂಚರಿಸುತ್ತಿವೆ. ಕೆಲವು ಸಂದರ್ಭಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಒಂದೆ ಹೊತ್ತಿನ ಸಮಯಕ್ಕೆ 20 ಕ್ಕೂ ಹೆಚ್ಚು ಬಸ್‌ಗಳು ಬಸ್‌ ನಿಲ್ದಾಣಕ್ಕೆ ಆಗಮಿಸಿ ನಿರ್ಗಮಿಸುತ್ತದೆ. ಇದರಿಂದ ಬಸ್‌ ನಿಲ್ಲಲು ಜಾಗವಿಲ್ಲದೆ ಟ್ರಾಫಿಕ್‌ ಜಾಮ್‌ ಸಮಸ್ಯೆಯಾಗುತ್ತಿದೆ.

ಬಸ್‌ ನಿಲ್ದಾಣದ ಆವರಣದಲ್ಲಿ ಅಂಚೆ ಕಚೇರಿ, ಬ್ಯಾಂಕ್‌, ಕ್ಲಿನಿಕ್‌, ಮೆಡಿಕಲ್‌ ಮುಂತಾದವುಗಳು ಇರುವುದರಿಂದ ಈ ಪ್ರದೇಶದಲ್ಲಿ ವಾಹನ ದಟ್ಟಣೆ, ಪಾರ್ಕಿಂಗ್‌ ನಿಂದ ಸಮಸ್ಯೆ ಉಂಟಾಗಿದೆ.

ಅವ್ಯವಸ್ಥಿತವಾಗಿ ವಾಹನ ಪಾರ್ಕಿಂಗ್‌ ಮಾಡುವುದು ಕೂಡ ಈ ಸಮಸ್ಯೆಗೆ ಕಾರಣವಾಗಿದೆ. ಗುತ್ತಕಾಡು, ಗೋಳಿಜೋರ ರಸ್ತೆ ಕಿನ್ನಿಗೋಳಿ ಬಸ್‌ ನಿಲ್ದಾಣ ಮೂಲಕವಾಗಿ ಗುತ್ತಕಾಡು, ಕವತ್ತಾರು ಹೋಗುವ ರಸ್ತೆ, ಗೋಳಿಜೋರ, ಪುನರೂರು, ಶಿಮಂತೂರು, ಪಂಜಿನಡ್ಕ, ಎಳತ್ತೂರು ಹೋಗಲು ಇದೇ ರಸ್ತೆಯನ್ನು ಬಳಸುವುದರಿಂದ ಮತ್ತಷ್ಟು ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ರಸ್ತೆ ಬ್ಯುಸಿಯಾಗಿರುತ್ತದೆ. ಕೆಲವು ರಿಕ್ಷಾಗಳು, ದ್ವಿಚಕ್ರ ವಾಹನಗಳ ಸವಾರರು ಸಂಚಾರ ನಿಯಮ ಪಾಲಿಸದೆ ಬಸ್‌ ನಿಲ್ದಾಣದ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದೆ ಇದರಿಂದ ಅಪಘಾತ ಸಂಭವಿಸುತ್ತಿದೆ.

ಖಾಲಿ ಜಾಗ ನೀಡಲಾಗಿದೆ

Advertisement

ಕಿನ್ನಿಗೋಳಿ ಪೇಟೆಗೆ ಬರುವ ಖಾಸಗಿ ವಾಹನಗಳ ನಿಲುಗಡೆಗೆ ರಾಜಾಂಗಣ ಎದುರುಗಡೆಯ ಖಾಲಿ ಜಾಗವನ್ನು ಸಮ ತಟ್ಟುಗೊಳಿಸಿ ನಿಲುಗಡೆ ಅವಕಾಶ ನೀಡಲಾಗಿದೆ. ಬಸ್‌ ನಿಲ್ದಾಣದ ಒಳಗಡೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಬಂದು ಪ್ರಯಾಣಿಕರನ್ನು ಕರೆದೊಯ್ದರೆ ಟ್ರಾಫಿಕ್‌ ಕಡಿಮೆಯಾಗುತ್ತದೆ. ಈ ಬಗ್ಗೆ ಬಸ್‌ ಮಾಲಕರು, ಚಾಲಕರು ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡಬೇಕಾಗಿದೆ. –ಸಾಯೀಶ್‌ ಚೌಟ, ಮುಖ್ಯಾಧಿಕಾರಿ ಕಿನ್ನಿಗೋಳಿ ಪ.ಪಂ

-ರಘುನಾಥ್‌ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next