Advertisement

Kinnigoli – ಮೂಲ್ಕಿ ರಾಜ್ಯ ಹೆದ್ದಾರಿ ಹೊಂಡ ಗುಂಡಿಗಳಿಗೆ ತೇಪೆ ಕಾರ್ಯ

01:12 PM Sep 20, 2024 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ – ಮೂಲ್ಕಿ ರಾಜ್ಯ ಹೆದ್ದಾರಿಯಲ್ಲಿ ಕೆಲವೊಂದು ಕಡೆಗಳಲ್ಲಿ ಡಾಮರು ಕಿತ್ತುಹೋಗಿ ಗುಂಡಿಗಳಾಗಿದ್ದು, ದ್ವಿಚಕ್ರ ಚಾಲಕರಿಗೆ ಸಂಚಕಾರವಾಗಿತ್ತು. ಈ ಬಗ್ಗೆ ಉದಯವಾಣಿ ಸುದಿನದಲ್ಲಿ ಸೆ. 13ರಂದು ವರದಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಹೆದ್ದಾರಿ ಇಲಾಖೆ ವತಿಯಿಂದ ಜಲ್ಲಿಹುಡಿ ಹಾಕಿ ತೇಪೆ ಕಾರ್ಯ ಮಾಡಲಾಯಿತು.

Advertisement

ಮೂರುಕಾವೇರಿಯಿಂದ ಕರ್ನಾಡ್‌ ಗಾಂಧಿ ಮೈದಾನದ ತನಕ ಹೊಂಡ ಗುಂಡಿ ಮುಚ್ಚುವ ಕಾರ್ಯ ನಡೆದಿದೆ.

ಕಿನ್ನಿಗೋಳಿ ರಾಜಾಂಗಣದ ಬಳಿ ಇದ್ದ ಗುಂಡಿಯಲ್ಲಿ ಒಂದು ವಾರದಲ್ಲಿ ಸುಮಾರು 10 ದ್ವಿಚಕ್ರ ವಾಹನ ಬಿದ್ದು ಹಲವರ ಮೂಳೆ ಮುರಿತಗೊಂಡ ಘಟನೆ ಸಂಭವಿಸಿದೆ.

ಪಟ್ಟಣ ಪಂಚಾಯತ್‌ ಕಾಳಜಿ ವಹಿಸಲಿ
ಕಿನ್ನಿಗೋಳಿ ಪೇಟೆಯ ಮುಖ್ಯ ರಸ್ತೆಯ ಪರಿಸರದಲ್ಲಿ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದ್ದು ಚರಂಡಿಯಲ್ಲಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.