Advertisement
ಕಿಲ್ಪಾಡಿ ಗ್ರಾಮ ಪಂಚಾಯತ್ ನಾಲ್ಕೈದು ವರ್ಷಗಳ ಹಿಂದೆ ಇಬ್ಟಾಗವಾಗಿ ಕಿಲ್ಪಾಡಿ ಮತ್ತು ಅತಿಕಾರಿಬೆಟ್ಟು ಗ್ರಾ. ಪಂ. ಆಗಿ ಪರಿವರ್ತನೆ ಯಾಯಿತು. ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಿಲ್ಪಾಡಿ ಗ್ರಾಮ ಒಂದೇ ಇದ್ದು, ಅತಿಕಾರಿಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಶಿಮಂತೂರು ಮತ್ತು ಅತಿಕಾರಿ ಬೆಟ್ಟು ಗ್ರಾಮಗಳು ಸೇರಿ ಕೊಂಡಿವೆ. ಹೊಸದಾಗಿ ರೂಪಿಸಲಾದ ಈ ಎರಡೂ ಗ್ರಾ.ಪಂ. ಗಳಿಗೂ ಒಬ್ಬರೇ ಅಭಿವೃದ್ಧಿ ಅಧಿಕಾರಿ ಇದ್ದು, ವಾರದಲ್ಲಿ ಮೂರು ದಿನ ಎರಡು ಅವಧಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಸ್.ಸಿ. ಮತ್ತು ಎಸ್.ಟಿ. ಕಾಲನಿಯ ಬಳಿಯ ಸುಮಾರು ಐದು ಮನೆಗೆ ನೀರಿನ ಸಮಸ್ಯೆ ತೀವ್ರವಾಗಿದ್ದು, ಇದನ್ನು ಪರಿಹರಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆ ಮೂಲಕ ಟ್ಯಾಂಕ್ ನಿರ್ಮಿಸಲಾಗಿದೆ. ಕೊಳವೆ ಬಾವಿ ಮೂಲಕ ಟ್ಯಾಂಕ್‌ಗೆ ನೀರು ಸಂಪರ್ಕಕೊಟ್ಟು ಸಮಸ್ಯೆ ಪರಿಹರಿಸಲು ಪಂಚಾಯತ್ ಮುಂದಾಗಿದೆ. ಈ ಎರಡು ಪಂಚಾಯತ್‌ನಲ್ಲಿ ಹೇಳಿಕೊಳ್ಳುವಂತಹ ನೀರಿನ ಸಮಸ್ಯೆ ಸದ್ಯಕ್ಕಿಲ್ಲ ಎನ್ನುತ್ತಾರೆ ಪಂಚಾಯತ್ ಪಿಡಿಒ. ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್‌ನ ಕಕ್ವ, ಮಟ್ಟು ಮತ್ತು ಬಾನಬೆಟ್ಟು ಪ್ರದೇಶ ಮಾತ್ರವಲ್ಲ ಇತರ ಕಡೆಗಳಲ್ಲೂ ನೀರಿನ ಸಮಸ್ಯೆ ಇದೆಯಾದರೂ ಎರಡು ವರ್ಷಗಳಿಂದ ಕಿನ್ನಿಗೋಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಸರಬರಾಜು ಆಗುತ್ತಿದೆ ಹೀಗಾಗಿ ಇಲ್ಲಿನ ನೀರಿನ ಸಮಸ್ಯೆಗೆ ಸದ್ಯ ಪರಿಹಾರ ಸಿಕ್ಕಿದೆ.
Related Articles
ಬಾನಬೆಟ್ಟು ಎಂಬಲ್ಲಿ ನೀರು ಸಂಗ್ರಹಕ್ಕಾಗಿ ಇರುವ ಟ್ಯಾಂಕ್ ಕುಸಿಯುವ ಹಂತದಲ್ಲಿದೆ. ಈ ಟ್ಯಾಂಕ್‌ನಲ್ಲಿ ನೀರು ತುಂಬಿಸುವ ಹಾಗಿಲ್ಲದಿದ್ದರೂ ತುಂಬಿಸಲಾಗುತ್ತಿದೆ. ಈ ಪರಿಸರದಲ್ಲಿ ಅಂಗನವಾಡಿ ಹಾಗೂ ಮನೆಯೊಂದು ಇದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಗಮನಕ್ಕೆ ತಂದಿದ್ದರೂ ಈ ವರೆಗೆ ಕ್ರಮಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.
Advertisement
•ಸರ್ವೋತ್ತಮ ಅಂಚನ್