Advertisement

ಕಿನ್ನಿಗೋಳಿ ಗ್ರಾಮ ಪಂಚಾಯತ್‌ ತ್ಯಾಜ್ಯ ಸಮಸ್ಯೆ; ಸ್ವತ್ಛ ಗ್ರಾಮ ಯೋಜನೆಗೆ ತೊಡಕು

03:36 PM Apr 04, 2019 | pallavi |
ಕಿನ್ನಿಗೋಳಿ: ಕಿನ್ನಿಗೋಳಿ – ಮೂಲ್ಕಿ ರಾಜ್ಯ ಹೆದ್ದಾರಿಯ ಭಟ್ಟಕೋಡಿಯ ಸಮೀಪ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್‌ ತ್ಯಾಜ್ಯ, ಪೊಟ್ಟಣಗಳ ರಾಶಿಯೇ ಕಂಡು ಬರುತ್ತಿದ್ದು, ರಸ್ತೆ ಸಂಚಾರಿಗಳು ಮೂಗು ಮುಚ್ಚಿಕೊಂಡೇ ತಿರುಗಾಡಬೇಕಾದ ಪರಿಸ್ತಿತಿ ಉಂಟಾಗಿದೆ. ಗ್ರಾಮ ಪಂಚಾಯತ್‌ಗೆ ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಕಿನ್ನಿಗೋಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಅನತಿ ದೂರದ ಬಹುಮಹಡಿಯ ಕಟ್ಟಡಗಳು ಇದ್ದು ಅಲ್ಲಿನ ಜನರು ಕಸವನ್ನು ಈ ಪ್ರದೇಶದಲ್ಲಿ ಬಿಸಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್‌ ಮೂಲ ತಿಳಿಸಿದೆ.
ಈ ಹಿಂದೆ ರಸ್ತೆ ಹೆದ್ದಾರಿಯ ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದ ಸಮಸ್ಯೆಗೆ ಗ್ರಾಮಪಂಚಾಯತ್‌ ಕಠಿನ ಕ್ರಮ ಕೈಗೊಂಡು ತ್ಯಾಜ್ಯ ಬಿಸಾಡಬಾರದು ಎಂಬ ನಾಮಫ‌ಲಕವನ್ನು ಅಳವಡಿಸಲಾಗಿತ್ತು. ಕೆಲದಿನಗಳ ಕಾಲ ಈ ಸಮಸ್ಯೆ ಉದ್ಭವಿಸಿರಲಿಲ್ಲ. ಆದರೆ ಈಗ ಮತ್ತೆ ಅಲ್ಲಿನ ಜನತೆ ಕಸ ಬಿಸಾಡುತ್ತಿದ್ದು, ಸಮಸ್ಯೆ ಮತ್ತೆ ಪುನಾರವರ್ತನೆಯಾಗಿದೆ.
ಸಾಂಕ್ರಾಮಿಕ ರೋಗದ ಭೀತಿ
ಹೆದ್ದಾರಿ ಬದಿ ಇರುವ ತ್ಯಾಜ್ಯ ಕೊಳೆತು ದುರ್ನಾತದಿಂದ, ಸೊಳ್ಳೆ ಉಪಟಳ ಪ್ರಾರಂಭವಾಗಿದೆ. ಇದು ಮುಂದೆ ಸಾಂಕ್ರಾಮಿಕ ರೋಗಕ್ಕೂ ಕಾರಣ ಆಗ ಬಹುದು ಎನ್ನುತ್ತಾರೆ ಸ್ಥಳೀಯರು.
Advertisement

Udayavani is now on Telegram. Click here to join our channel and stay updated with the latest news.

Next