Advertisement

ಕಿನ್ನಿಗೋಳಿ: ಸದ್ಯದಲ್ಲೇ ಇಂದಿರಾ ಕ್ಯಾಂಟೀನ್‌ ನಿರ್ಮಾಣ

02:41 PM Feb 08, 2024 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಜನತೆಯ ಬಹುದಿನ ಗಳ ಬೇಡಿಕೆಯಾದ ಇಂದಿರಾ ಕ್ಯಾಂಟೀನ್‌ ಸದ್ಯ ದಲ್ಲೇ ನಿರ್ಮಾಣವಾಗಲಿದೆ. ಪಟ್ಟಣವಾಗಿ ಬೆಳೆ ಯುತ್ತಿರುವ ಕಿನ್ನಿಗೋಳಿಯಲ್ಲಿ ಬಡ ಮತ್ತು ಶ್ರಮಿಕ ವರ್ಗ ಹೆಚ್ಚಾಗಿದ್ದು, ಇಂದಿರಾ ಕಾಂಟೀನ್‌ ನಿರ್ಮಾಣವಾದರೆ ಸಹಕಾರಿ ಯಾಗ ಲಿದೆ. ಮಾರ್ಚ್‌ ಅಂತ್ಯದೊಳಗೆ ಆರಂಭವಾಗಲಿದೆ.

Advertisement

ಸ್ಥಳ ಹುಡುಕಾಟ
ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಸೂಕ್ತ ಸ್ಥಳದ ಹುಟುಕಾಟದಲ್ಲಿದ್ದಾರೆ ಅಧಿಕಾರಿಗಳು. ಈಗಾಗಲೇ ಅಧಿಕಾರಿಗಳು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಆವರಣದೊಳಗೆ ಇದಕ್ಕಾಗಿ ಜಾಗ ಸೂಚಿಸಿದ್ದು, ಆದರೆ ಶಾಸಕ ಉಮಾನಾಥ ಕೋಟ್ಯಾನ್‌ ಮತ್ತು ಸಾರ್ವಜನಿಕರ ಅಪೇಕ್ಷೆಯಂತೆ ಇದನ್ನು ಬೇರೆಡೆ ಆರಂಭಿಸಲು ಸ್ಥಳ ಗುರುತಿಸಲಾಗಿದೆ.

ಪಂಚಾಯತ್‌ ಆವರಣದೊಳಗೆ ಕ್ಯಾಂಟಿನ್‌ ಆರಂಭಿಸಿದರೆ ಸಾರ್ವಜನಿಕರಿಗೆ ಇದರ ಉಪಯೋಗ ಸಿಗದು ಎಂಬ ಕಾರಣಕ್ಕಾಗಿ ಕಿನ್ನಿಗೋಳಿ ಪೇಟೆ ಅಥವಾ ಜನಸಂದಣಿ ಇರುವ ಜಾಗದಲ್ಲಿ ಆರಂಭಿಸಲು ಒಂದೆರಡು ಜಾಗವನ್ನು ಸೂಚಿಸಿದ್ದು, ಕೊನ್ಸೆಟಾ ಆಸ್ಪತ್ರೆಯ ಬಳಿ ಅಂದರೆ ಪ್ರಸ್ತುತ ಸಂತೆ ನಡೆಯುವ ಮುಂಭಾಗದಲ್ಲಿರುವ ಸರಕಾರಿ ಜಾಗದಲ್ಲಿ ಕ್ಯಾಂಟಿನ್‌ ಆರಂಭವಾಗಲಿದೆ. ಸದ್ಯಕ್ಕೆ ಗ್ರಾಮಕರಣಿಕ ಸುಜಿತ್‌ ಮತ್ತು ಸರ್ವೆ ಅಧಿಕಾರಿಗಳು ಸರ್ವೇ ಕಾರ್ಯ ಮುಗಿಸಿದ್ದು, ಒಂದೆರಡು ತಿಂಗಳಲ್ಲಿ ಕಿನ್ನಿಗೋಳಿಯ ಜನತೆಗೆ ಇಂದಿರಾ ಕ್ಯಾಂಟೀನ್‌ನ ಸೇವೆ ದೊರೆಯಲಿದೆ.

ಇಂದಿರಾ ಕ್ಯಾಂಟೀನ್‌ ಸೇವೆಯ ಜತೆಗೆ ಕಿನ್ನಿಗೋಳಿ ಪೇಟೆಗೆ ಸರಕಾರಿ ಆಸ್ಪತ್ರೆ, ರೈತಸಂಪರ್ಕ ಕೇಂದ್ರ, ಕೇಂದ್ರ ವಾಚನಾಲಯ, ಹೋಬಳಿ ಮಟ್ಟದ ಸರಕಾರಿ ಕಚೇರಿಗಳು, ಪೊಲೀಸ್‌ ಉಪಠಾಣೆ, ಖಾಯಂ ಸಂಚಾರಿ ಉಪಠಾಣೆಯ ಈ ಭಾಗಕ್ಕೆ ಅಗತ್ಯವಿದೆ.

ಪಟ್ಟಣ ಪಂಚಾಯತ್‌  ನಿಂದ ಉಸ್ತುವಾರಿ
ಕಿನ್ನಿಗೋಳಿಯಲ್ಲೂ ಇಂದಿರಾ ಕ್ಯಾಂಟಿನ್‌ ಆರಂಭವಾಗಲಿದ್ದು, ಈಗಾಗಲೇ ಸರ್ವೇ ಕಾರ್ಯ ಮುಗಿದಿದೆ. ಕಿನ್ನಿಗೋಳಿ – ಮೂರು ಕಾವೇರಿ ಮುಖ್ಯ ರಸ್ತೆಯ ಬದಿಯಲ್ಲಿ ಆರಂಭವಾಗಲಿದೆ. ಟೆಂಡರ್‌ ಪಡೆದುಕೊಂಡವರು ಕ್ಯಾಂಟೀನ್‌ ನಡೆಸಿದರೂ ಅದರ ಉಸ್ತುವಾರಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನೋಡಿಕೊಳ್ಳಲಿದೆ. ನಾಗರಾಜ್‌ ಎಂ. ಎಲ್‌., ಮುಖ್ಯಾಧಿಕಾರಿ ಪಟ್ಟಣ
ಪಂಚಾಯತ್‌ ಕಿನ್ನಿಗೋಳಿ

Advertisement

ಪ್ರಯೋಜನಕಾರಿ
ಕಿನ್ನಿಗೋಳಿ ಪೇಟೆಯ 100 ಮೀಟರ್‌ ಒಳಗಡೆ ಇಂದಿರಾ ಕ್ಯಾಂಟಿನ್‌ ಮಾಡಬೇಕಾಗಿದೆ. ಮುಖ್ಯ ರಸ್ತೆಯಲ್ಲಿರುವ ಕೇಂದ್ರ ಮಾರುಕಟ್ಟೆಯ ತೆರವುಗೊಳಿಸಿದ ಎಪಿಎಂಸಿ ಕಟ್ಟಡದಲ್ಲಿ ಅಥ ವಾ ಕೆಲವು ಅಂಗಡಿ ಮುಂಗಟ್ಟು ಗಳು ಖಾಲಿ ಇದ್ದು ಇಲ್ಲಿ ಇಂದಿರಾ ಕ್ಯಾಂಟೀನ್‌ ಮಾಡಿದರೆ ಜನರಿಗೆ ಪ್ರಯೋಜನಕಾರಿಯಾಗಲಿದೆ. ದೂರದ ಪಟ್ಟಣ ಪಂಚಾಯತ್‌ ಹತ್ತಿರ ಮಾಡಿದರೇ ಜನರಿಗೆ ಅಷ್ಟು ಅನುಕೂಲವಾಗುವುದಿಲ್ಲ.
ಗಿರೀಶ್‌ ಮಡಿವಾಳ ಉಲ್ಲಂಜೆ, ಸಮಾಜ ಸೇವಕ

*ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next