Advertisement

ವಾಡಿಯ ಪ್ರಕರಣ: ಪಂಜಾಬ್‌ ಪ್ರಾಂಚೈಸಿಗೆ ಸಂಬಂಧವಿಲ್ಲ

09:09 PM May 06, 2019 | Sriram |

ಹೊಸದಿಲ್ಲಿ: ಜಪಾನಿನಲ್ಲಿ ಇತ್ತೀಚೆಗೆ ಡ್ರಗ್ಸ್‌ ಪ್ರಕರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಮಾಲಕ ನೆಸ್‌ ವಾಡಿಯ ವಿಚಾರ ವೈಯಕ್ತಿಕಎಂದು ತಂಡದ ಮತ್ತೂಬ್ಬ ಸಹ ಮಾಲಕ ಮೋಹಿತ್‌ ಬರ್ಮನ್‌ ತಿಳಿಸಿದ್ದಾರೆ.

Advertisement

ಬಿಸಿಸಿಐ ನೆಸ್‌ ವಾಡಿಯ ಬಂಧನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಫ್ರಾಂಚೈಸಿಗೆ ನೋಟಿಸ್‌ ಕಳುಹಿಸಿತ್ತು. ಇದಕ್ಕೆ ಉತ್ತರಿಸಿರುವ ಮೋಹಿತ್‌ ಬರ್ಮನ್‌ ನೆಸ್‌ ವಾಡಿಯ ಬಂಧನ ವಿಚಾರಕ್ಕೆ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಇದಕ್ಕೆ ತಂಡ ಹೊಣೆ ಆಗಲಾರದು. ಐಪಿಎಲ್‌ನಲ್ಲಿ ಇರುವ ನಾವು ಇದುವರೆಗೆ ಎಲ್ಲ ರೀತಿಯಲ್ಲೂ ವೃತ್ತಿಪರತೆಯನ್ನು ಕಾಪಾಡಿಕೊಂಡು ಬಂದಿದ್ದೇವೆಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next