ಉಡುಪಿ: ಎಂಸಿಪಿಎಚ್ (ಮಣಿಪಾಲ್ ಸೆಂಟರ್ ಫಾರ್ ಫಿಲಾಸಫಿ ಆ್ಯಂಡ್ ಹ್ಯುಮಾನಿಟೀಸ್) ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೈಸೂರಿನ ಇತಿಹಾಸ ತಜ್ಞ ಪ್ರೊ| ಅಚ್ಯುತ ರಾವ್ ಸ್ಮರಣಾರ್ಥ ಇತಿಹಾಸ ಸಮ್ಮೇಳನದಲ್ಲಿ “ದಿ ಪ್ರಿನ್ಸ್‌ಸ್ಲಿ ಸ್ಟೇಟ್ಸ್ ಆ್ಯಂಡ್ ಮೇಕಿಂಗ್ ಆಫ್ ಮಾಡರ್ನ್ ಇಂಡಿಯಾ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
20ನೇ ಶತಮಾನದ ರಾಷ್ಟ್ರೀಯತೆಗೆ ರಾಜ ಸಂಸ್ಥಾನಗಳ ಕೊಡುಗೆಯ ಮರು ಚಿಂತನೆಯ ಕುರಿತಾದ ಸಂಶೋಧನ ಲೇಖನಗಳ ಸಂಗ್ರಹವಾಗಿ ರುವ ಈ ಪುಸ್ತಕವನ್ನು ದಿಲ್ಲಿ ವಿ.ವಿ. ಇತಿಹಾಸ ತಜ್ಞೆ ಪ್ರೊ| ಉಪಿಂದರ್ ಸಿಂಗ್ ಬಿಡುಗಡೆ ಮಾಡಿದರು. ಕೇಂಬ್ರಿಜ್ ವಿ.ವಿ.ಯ ಟ್ರಿನಿಟಿ ಕಾಲೇಜಿನ ಫೆಲೋ ಹಾಗೂ ಈ ಪುಸ್ತಕಕ್ಕೆ ಲೇಖನ ಒದಗಿಸಿರುವವರಲ್ಲಿ ಪ್ರಮುಖರಾದ ಡೇವಿಡ್ ವಾಷ್‌ಬ್ರೂಕ್ ಮಾತನಾಡಿ, ವಾಸ್ತವವಾಗಿ, ಆಧುನಿಕಪೂರ್ವ ಭಾರತವು ಈಗ ತನ್ನ ರಾಜವಂಶಗಳ ಇತಿಹಾಸವನ್ನು ಹಿಂದಿರುಗಿ ನೋಡಲು ಆರಂಭಿಸಿದೆ. ಕನಿಷ್ಠಪಕ್ಷ ಸಾಂಸ್ಕೃತಿಕ – ಭೌಗೋಳಿಕ ಅಂಶಗಳನ್ನು ಮತ್ತೂಮ್ಮೆ ನೋಡಲು ಬಯಸುತ್ತಿದೆ. 1940ರ ಅಂತ್ಯದ ವೇಳೆಗೆ ತಮ್ಮ ಭೌತಿಕ ಅಸ್ತಿತ್ವ ಅತೀವ ಅಡಚಣೆಗೊಂಡಿದ್ದರಿಂದ ದಕ್ಷಿಣ ಭಾರತದ ರಾಜವಂಶೀಯ ಆಳ್ವಿಕೆಯ ರಾಜ್ಯಗಳು ಐತಿಹಾಸಿಕ ತಿಳಿವಳಿಕೆ ಮತ್ತು ಕಲ್ಪನೆ ದೃಷ್ಟಿಯಲ್ಲಿ ಗಹನ ಇತಿಹಾಸ ಹೊಂದಿವೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಪ್ರೊ| ಉಪಿಂದರ್ ಸಿಂಗ್, “ಆಧುನಿಕ, ಮಧ್ಯ ಕಾಲೀನ ಮತ್ತು ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಹೊಸ ಚಿಂತನೆಯನ್ನು ಉತ್ತೇಜಿಸಲು ಸಮಾವೇಶಗಳು ಸಾಕ್ಷಿ ಯಾಗಿವೆ. ಇವೆಲ್ಲ ಅಚ್ಯುತ ರಾವ್ ಅವರ ಸಂಶೋಧನಾ ಮೌಲ್ಯಗಳನ್ನು ಪ್ರತಿ ಬಿಂಬಿಸುತ್ತವೆ’ ಎಂದು ಹೇಳಿದರು.
ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಶುಭಕೋರಿದರು. ಡಿಎಸ್‌ಎ ಶತಮಾನೋತ್ಸವ ಸಮಿತಿ ಸಂಚಾಲಕ ಡಿ.ಎ. ಪ್ರಸನ್ನ ಮೊದಲಾ ದವರು ಉಪಸ್ಥಿತರಿದ್ದರು.
ಡಿಎಸ್‌ಎ (ಡಿ.ಎಸ್. ಅಚ್ಯುತ ರಾವ್) ಸ್ಮಾರಕ ಟ್ರಸ್ಟ್‌ನ ಅಡಿಯಲ್ಲಿ ಹಮ್ಮಿಕೊಳ್ಳ ಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಈ ಇತಿಹಾಸ ಸಮ್ಮೇಳನವೂ ಒಂದು. ಪುಸ್ತಕವನ್ನು ಮಣಿಪಾಲ ಯುನಿವ ರ್ಸಿಟಿ ಪ್ರಸ್‌ನಿಂದ ಪ್ರಕಟಿಸಲಾಗಿದೆ.