Advertisement

ಕನ್ನಡಿಗರ ನೆರವು; ಪಂಜಾಬ್‌ ಗೆಲುವು

02:49 AM Apr 09, 2019 | sudhir |

ಮೊಹಾಲಿ: ಕರ್ನಾಟಕದ ಕ್ರಿಕೆಟಿಗರಾದ ಕೆ.ಎಲ್‌. ರಾಹುಲ್‌ ಮತ್ತು ಮಾಯಾಂಕ್‌ ಅಗರ್ವಾಲ್‌ ಅವರ ಅಮೋಘ ಜತೆಯಾಟದ ನೆರವಿನಿಂದ ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಪಡೆ 6 ವಿಕೆಟ್‌ಗಳಿಂದ ಹೈದರಾಬಾದ್‌ಗೆ ಸೋಲುಣಿಸಿತು.

Advertisement

ಮೊಹಾಲಿಯ ನಿಧಾನ ಗತಿಯ ಟ್ರ್ಯಾಕ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ 4 ವಿಕೆಟಿಗೆ 150 ರನ್‌ ಗಳಿಸಿದರೆ, ಪಂಜಾಬ್‌ 19.5 ಓವರ್‌ಗಳಲ್ಲಿ 4 ವಿಕೆಟಿಗೆ 151 ರನ್‌ ಗಳಿಸಿ ಜಯ ಸಾಧಿಸಿತು.

ಕ್ರಿಸ್‌ ಗೇಲ್‌ ಅವರನ್ನು ಬೇಗನೇ ಕಳೆದುಕೊಂಡ ಪಂಜಾಬ್‌ಗ ಕನ್ನಡಿಗರಾದ ರಾಹುಲ್‌-ಅಗರ್ವಾಲ್‌ ಆಸರೆಯಾದರು. ದ್ವಿತೀಯ ವಿಕೆಟಿಗೆ ಅವರಿಬ್ಬರು 114 ರನ್ನುಗಳ ಜತೆಯಾಟ ನಡೆಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. 55 ರನ್‌ ಗಳಿಸಿದ ಅಗರ್ವಾಲ್‌ ಔಟಾದ ಬಳಿಕ ಪಂಜಾಬ್‌ ಡೇವಿಡ್‌ ವಾರ್ನರ್‌ ಮತ್ತು ಮನ್‌ದೀಪ್‌ ಅವರನ್ನು ಬೇಗನೇ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ ಅಂತಿಮ ಓವರಿನಲ್ಲಿ ಕೆಎಲ್‌ ರಾಹುಲ್‌ ಬೌಂಡರಿ ಬಾರಿಸುವ ಮೂಲಕ ತಂಡದ ಗೆಲುವು ಖಚಿತಪಡಿಸಿದರು. ಒಂದು ಎಸೆತ ಬಾಕಿ ಇರುತ್ತಲೇ ಪಂಜಾಬ್‌ ಜಯಭೇರಿ ಬಾರಿಸಿತು.

ಹೈದರಾಬಾದ್‌ ಪರ ಆರಂಭಕಾರ ವಾರ್ನರ್‌ 62 ಎಸೆತಗಳಿಂದ 70 ರನ್‌ ಬಾರಿಸಿ ಅಜೇಯರಾಗಿ ಉಳಿದರು (62 ಎಸೆತ, 6 ಬೌಂಡರಿ, 1 ಸಿಕ್ಸರ್‌). ಇದು ಪಂಜಾಬ್‌ ವಿರುದ್ಧ ವಾರ್ನರ್‌ ಬಾರಿಸಿದ ಸತತ 7ನೇ 50 ಪ್ಲಸ್‌ ರನ್‌. ಇದರೊಂದಿಗೆ ವಾರ್ನರ್‌ 2 ತಂಡಗಳ ವಿರುದ್ಧ ಸತತವಾಗಿ ಅತೀ ಹೆಚ್ಚು 7 ಸಲ 50 ಪ್ಲಸ್‌ ರನ್‌ ಹೊಡೆದ ದಾಖಲೆ ಸ್ಥಾಪಿಸಿದರು. ವಾರ್ನರ್‌ ಆರ್‌ಸಿಬಿ ವಿರುದ್ಧವೂ ಸತತ 7 ಫಿಫ್ಟಿ ಪ್ಲಸ್‌ ರನ್‌ ಹೊಡೆದಿದ್ದರು.

ಇದು ಈ ಬಾರಿಯ ಐಪಿಎಲ್‌ನಲ್ಲಿ ವಾರ್ನರ್‌ ಹೊಡೆದ 4ನೇ ಅರ್ಧ ಶತಕ. ಆದರೆ ಇದು ಅವರ ನಿಧಾನ ಗತಿಯ ಫಿಫ್ಟಿ ಆಗಿದ್ದು, 49 ಎಸೆತಗಳಲ್ಲಿ ದಾಖಲಾಯಿತು.

Advertisement

ಕೊನೆಯ ಓವರಿನಲ್ಲಿ ಆಡಲಿಳಿದ ದೀಪಕ್‌ ಹೂಡಾ ಕೇವಲ 3 ಎಸೆತಗಳಿಂದ 14 ರನ್‌ ಸಿಡಿಸುವುದರೊಂದಿಗೆ ಹೈದರಾಬಾದ್‌ ಗೌರವಾರ್ಹ ಮೊತ್ತ ದಾಖಲಾಯಿತು. ಅವರು ಮೊಹಮ್ಮದ್‌ ಶಮಿ ಎಸೆತದಲ್ಲಿ 2 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿ ಮೆರೆದರು. 20ನೇ ಓವರಿನಲ್ಲಿ ಒಟ್ಟು 15 ರನ್‌ ಬಂತು.

ಸ್ಕೋರ್‌ಪಟ್ಟಿ

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌ ಔಟಾಗದೆ 70
ಜಾನಿ ಬೇರ್‌ಸ್ಟೊ ಸಿ ಅಶ್ವಿ‌ನ್‌ ಬಿ ಮುಜೀಬ್‌ 1
ವಿಜಯ್‌ ಶಂಕರ್‌ ಸಿ ರಾಹುಲ್‌ ಬಿ ಅಶ್ವಿ‌ನ್‌ 26
ಮೊಹಮ್ಮದ್‌ ನಬಿ ರನೌಟ್‌ 12
ಮನೀಷ್‌ ಪಾಂಡೆ ಸಿ ನಾಯರ್‌ ಬಿ ಶಮಿ 19
ದೀಪಕ್‌ ಹೂಡಾ ಔಟಾಗದೆ 14
ಇತರ 8
ಒಟ್ಟು (4 ವಿಕೆಟಿಗೆ) 150
ವಿಕೆಟ್‌ ಪತನ: 1-7, 2-56, 3-80, 4-135.
ಬೌಲಿಂಗ್‌: ಅಂಕಿತ್‌ ರಜಪೂತ್‌ 4-0-21-0
ಮುಜೀಬ್‌ ಉರ್‌ ರೆಹಮಾನ್‌ 4-0-34-1
ಮೊಹಮ್ಮದ್‌ ಶಮಿ 4-0-30-1
ಆರ್‌. ಅಶ್ವಿ‌ನ್‌ 4-0-30-1
ಸ್ಯಾಮ್‌ ಕರನ್‌ 4-0-30-0

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಕೆ.ಎಲ್‌. ರಾಹುಲ್‌ ಔಟಾಗದೆ 71
ಕ್ರಿಸ್‌ ಗೇಲ್‌ ಸಿ ಹೂಡಾ ಬಿ ರಶೀದ್‌ 16
ಮಾಯಾಂಕ್‌ ಅಗರ್ವಾಲ್‌ ಸಿ ಶಂಕರ್‌ ಬಿ ಶರ್ಮ 55
ಡೇವಿಡ್‌ ಮಿಲ್ಲರ್‌ ಸಿ ಹೂಡಾ ಬಿ ಶರ್ಮ 1
ಮನ್‌ದೀಪ್‌ ಸಿಂಗ್‌ ಸಿ ಹೂಡಾ ಬಿ ಕೌಲ್‌ 2
ಸ್ಯಾಮ್‌ ಕರನ್‌ ಔಟಾಗದೆ 5

ಇತರ 1
ಒಟ್ಟು (19.5 ಓವರ್‌ಗಳಲ್ಲಿ 4 ವಿಕೆಟಿಗೆ) 151
ವಿಕೆಟ್‌ ಪತನ: 1-18, 2-132, 3-135, 4-140
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-25-0
ಸಂದೀಪ್‌ ಶರ್ಮ 4-0-21-2
ರಶೀದ್‌ ಖಾನ್‌ 4-0-20-1
ಮೊಹಮ್ಮದ್‌ ನಬಿ 3.5-0-42-0
ಸಿದ್ಧಾರ್ಥ್ ಕೌಲ್‌ 4-0-42-1

Advertisement

Udayavani is now on Telegram. Click here to join our channel and stay updated with the latest news.

Next