Advertisement

ಜಪಾನ್‌ ನೂತನ ದೊರೆ ನರುಹಿಟೊ ಪಟ್ಟಾಭಿಷೇಕ

10:10 AM Oct 24, 2019 | Hari Prasad |

ಟೋಕಿಯೋ: ಜಪಾನ್‌ನ ರಾಜನಾಗಿ ನರುಹಿಟೊ ಮಂಗಳವಾರ ಪಟ್ಟಾಭಿಷಿಕ್ತರಾಗಿದ್ದಾರೆ. 180 ದೇಶಗಳ 2 ಸಾವಿರಕ್ಕೂ ಹೆಚ್ಚು ಗಣ್ಯರ ಸಮ್ಮುಖದಲ್ಲಿ ನರುಹಿಟೊಗೆ ಪಟ್ಟಾಭಿಷೇಕ ಮಾಡಲಾಯಿತು. ಮೇಯಲ್ಲಿ ಇವರ ತಂದೆ ಅಕಿಹಿಟೋ ವೃದ್ಧಾಪ್ಯದ ಕಾರಣದಿಂದ ಪುತ್ರನಿಗೆ ಪಟ್ಟ ಬಿಟ್ಟುಕೊಟ್ಟಿದ್ದರು. ಅಂದಿನಿಂದಲೇ ಇವರನ್ನು ರಾಜ ಎಂದು ಪರಿಗಣಿಸಲಾಗಿತ್ತಾದರೂ, ಈಗ ಅಧಿಕೃತವಾಗಿ ಪಟ್ಟಾಭಿಷೇಕ ಮಾಡಲಾಗಿದೆ.

Advertisement

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಇಂಗ್ಲೆಂಡ್‌ನ‌ ರಾಜಕುಮಾರ ಚಾರ್ಲ್ಸ್‌, ಚೀನಾದ ಉಪಾಧ್ಯಕ್ಷ ವಾಂಗ್‌ ಖೀಶಾನ್‌ ಮತ್ತು ದಕ್ಷಿಣ ಕೊರಿಯಾ ಪ್ರಧಾನಿ ಲೀ ನಾಕ್‌ ಯೋನ್‌ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. ಈ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಜಪಾನ್‌ ಅರಮನೆಯ ವೈಭೋಗ ಹಾಗೂ ಐಶ್ವರ್ಯವನ್ನು ಗಣ್ಯರು ಕಣ್ತುಂಬಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next