Advertisement

ರೇಸ್‌ಗೆ ಕಿಂಗ್‌ ಜಿಎಸ್‌ಎಕ್ಸ್‌ ಎಸ್‌750

06:15 AM Apr 30, 2018 | |

ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯನ್ನು ಬಹಳ ಸಲೀಸಾಗಿ ಆಕ್ರಮಿಸಿ ಮಾಡಿಕೊಂಡಿರುವ ಸುಜುಕಿ ಬ್ರಾಂಡ್‌ನ‌ ಅನೇಕ ಬೈಕ್‌ಗಳು ಯಶಸ್ಸು ಕಂಡಿವೆ. ಭಾರತದ ರಸ್ತೆ ಗುಣಮಟ್ಟ ಹಾಗೂ ಜನರ ಮನಸ್ಥಿತಿ ಅರಿತು ತನ್ನ ಪ್ರಾಡಕ್ಟ್ ಪರಿಚಯಿಸುವ ಜಾಣತನವನ್ನು ಜಪಾನ್‌ನ ಈ ಕಂಪನಿ ತೋರಿದೆ.

Advertisement

 “ಸುಜುಕಿ’ ಹೆಸರು ಕೇಳಿದಾಕ್ಷಣ ಕಣ್ಮುಂದೆ ನಿಲ್ಲುವುದು ಒಂದು ಕಾಲದಲ್ಲಿ ಅತಿ ಜನಪ್ರಿಯತೆ ಗಳಿಸಿಕೊಂಡಿದ್ದ 
“ಸಮರಾಯ್‌’. ಸುಜುಕಿ ಇದ್ದವನಿಗೆ ಲಡಕಿ ಒಲೀತಾಳೆ ಅನ್ನುವ ಮಾತೇ ಆಗ ಚಾಲ್ತಿಯಲ್ಲಿತ್ತು ! ಅಷ್ಟರ ಮಟ್ಟಿಗೆ ಮೆಚ್ಚುಗೆ ಪಡೆದುಕೊಂಡಿತ್ತು. ಆದರೆ ಕಾಲ ಉರುಳಿದಂತೆ ಜನರ ಟೇಸ್ಟ್‌ ಕೂಡ ಬದಲಾಗುತ್ತದಲ್ಲ. ಹಾಗಾಗಿ, ಆಯಾ ಕಾಲಘಟ್ಟಕ್ಕೆ ತಕ್ಕುದಾದ ಬದಲಾವಣೆ ಮಾಡಿಕೊಳ್ಳುತ್ತಲೇ, ಮಾರುಕಟ್ಟೆ ಗಟ್ಟಿಮಾಡಿಕೊಂಡಿರುವ ಜಪಾನ್‌ ಮೂಲದ ಸುಜುಕಿ, ಈಗ ಭಾರತದಲ್ಲಿ ಟಾಪ್‌ 5ನಲ್ಲೊಂದಾಗಿದೆ.

ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯನ್ನು ಬಹಳ ಸಲೀಸಾಗಿ ಆಕ್ರಮಿಸಿ ಮಾಡಿಕೊಂಡಿರುವ ಸುಜುಕಿ ಬ್ರಾಂಡ್‌ನ‌ ಅನೇಕ ಬೈಕ್‌ಗಳು ಯಶಸ್ಸು ಕಂಡಿವೆ. ಭಾರತದ ರಸ್ತೆ ಗುಣಮಟ್ಟ ಹಾಗೂ ಜನರ ಮನಸ್ಥಿತಿ ಅರಿತು ತನ್ನ ಪ್ರಾಡಕ್ಟ್ ಪರಿಚಯಿಸುವ ಜಾಣತನವನ್ನು ಜಪಾನ್‌ನ ಈ ಕಂಪನಿ ತೋರಿದೆ. ಅದೇ ಕಾರಣಕ್ಕೇ ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ.

ಇದೀಗ ಜಿಎಸ್‌ಎಕ್ಸ್‌ ಸರಣಿಯ ಹೊಸ ಮಾಡೆಲ್‌ ಜಿಎಸ್‌ಎಕ್ಸ್‌-ಎಸ್‌750 ಹೊಸ ಮಾಡೆಲ್‌ ಬೈಕ್‌ ಪರಿಚಯಿಸಿದೆ. 2018ರ ಬಹುನಿರೀಕ್ಷಿತ ನ್ಪೋರ್ಟ್ಸ್ ಬೈಕ್‌ಗಳಲ್ಲಿ ಇದೂ ಒಂದಾಗಿದ್ದು, ಸಿಕೆಡಿ (ಕಂಪ್ಲೀಟಿ ನಾಕ್ಡ್ ಡೌನ್‌) ಯುನಿಟ್‌ಗಳಿಂದ ಭಾರತದ ರಸ್ತೆಗಿಳಿಯಲಿದೆ. ಹಯಾಬುಸಾದಂಥ ದುಬಾರಿ ಬೈಕ್‌ನ ಬಳಿಕ ಸಂಪೂರ್ಣವಾಗಿ ಭಾರತದಲ್ಲಿಯೇ ಉತ್ಪಾದನೆಗೊಳ್ಳುವ ಮತ್ತೂಂದು ಬೈಕ್‌ ಇದು ಎಂದು ಕಂಪನಿ ಹೇಳಿಕೊಂಡಿದೆ.

ಜಿಎಸ್‌ಎಕ್ಸ್‌ ಸಾಗಿಬಂದ ದಾರಿ
ಲೈಟ್ಸ್‌ಗಳನ್ನು ಒಳಗೊಂಡ ರೇಸ್‌ ಬೈಕ್‌ಗಳೇ ಇಲ್ಲದ ದಿನದಲ್ಲಿ, ಅಂದರೆ 1984ರ ಸಾಲಿನಲ್ಲಿ ಸುಜುಕಿ ಕಂಪನಿ ಎರಡು ಹೆಡ್‌ಲೈಟ್‌ಗಳು  ಇರುವಂಥ ಜಿಎಸ್‌ಎಕ್ಸ್‌ ಸರಣಿಯ ರೇಸ್‌ ಬೈಕ್‌ಗಳನ್ನು ಪರಿಚಯಿಸಿತು. 1985ರಲ್ಲಿ ಮೊದಲ ಜನರೇಶನ್‌ ಬೈಕ್‌ ರಸ್ತೆಗಳಲ್ಲಿ ಧೂಳೆಬ್ಬಿಸಿದ ಬೆನ್ನಲ್ಲೇ, ಗ್ರಾಹಕನ ನಾಡಿಮಿಡಿತ ಅರಿತ ಸುಜುಕಿ 1988ರಲ್ಲಿ ಎರಡನೇ ಜನರೇಶನ್‌, 1992ರಲ್ಲಿ ಮೂರನೇ ಜನರೇಶನ್‌, 1994ರಲ್ಲಿ 4ನೇ, 1996ರಲ್ಲಿ 5ನೇ ಹಾಗೂ 2000ರಲ್ಲಿ 6ನೇ ಜನರೇಶನ್‌ ಮಾಡೆಲ್‌ಗ‌ಳನ್ನು ಪರಿಚಯಿಸಿತು. 2001ರಲ್ಲಿ ಜಿಎಸ್‌ಎಕ್ಸ್‌-ಆರ್‌ 1000 ಸಿಸಿ ಪರಿಚಯಿಸಿತು. ಇದಾದ ನಂತರ ಈ ಸರಣಿಯ ಯಾವುದೇ ಬೈಕ್‌ಗಳನ್ನು ಮತ್ತೆ ಪರಿಚಯಿಸಿರಲಿಲ್ಲ. 2017ರಲ್ಲಿ ಜಿಎಸ್‌ಎಕ್ಸ್‌-ಆರ್‌1000ಆರ್‌ ಹಾಗೂ ಜಿಎಸ್‌ಎಕ್ಸ್‌-ಆರ್‌125 ಮತ್ತು ಜಿಎಸ್‌ಎಕ್ಸ್‌-ಆರ್‌150 ಬೈಕ್‌ಗಳನ್ನು ಮಾರುಕಟ್ಟೆಗಿಳಿಸಿತು. ಇದೀಗ ಸಾಕಷ್ಟು ಬದಲಾವಣೆಯೊಂದಿಗೆ ಜಿಎಸ್‌ಎಕ್ಸ್‌-ಎಸ್‌750 ವೇರಿಯಂಟ್‌ನ ಬೈಕ್‌ ಅನ್ನು ಮಾರುಕಟ್ಟೆಗೆ ತಂದಿದೆ.   ಈಗಾಗಲೇ ಬುಕ್ಕಿಂಗ್‌ ಆರಂಭಗೊಂಡಿದ್ದು, ಮೇ ಮಧ್ಯಂತರದಲ್ಲಿ ಗ್ರಾಹಕರ ಕೈಸೇರಲಿವೆ.

Advertisement

ಎಂಜಿನ್‌ ಪವರ್‌, ಸುರಕ್ಷತೆ
113ಬಿಎಚ್‌ಪಿ ಮತ್ತು 81ಎನ್‌ಎಂ ಟಾರ್ಕ್‌ ಉತ್ಪಾದನೆಯ 745ಸಿಸಿ ಸಾಮರ್ಥ್ಯದ ಬೈಕ್‌ ಇದಾಗಿದ್ದು, ಶರವೇಗದಲ್ಲಿ ಮುನ್ನುಗ್ಗಬಲ್ಲದು. 4ಸಿಲಿಂಡರ್‌ನ 46 ಮಿ.ಮೀ. ಸ್ಟ್ರೋಕ್‌ ಹೊಂದಿದೆ. ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ನ ಈ ಬೈಕ್‌ಗೆ 6 ಸ್ಪೀಡ್‌ ಗೇರ್‌ಬಾಕ್ಸ್‌ ನೀಡಲಾಗಿದೆ. ಗಂಟೆಗೆ ಗರಿಷ್ಠ 250 ಕಿ.ುà ವೇಗದಲ್ಲಿ ಚಲಿಸಬಲ್ಲದು. ಗರಿಷ್ಠ ವೇಗದ ಮಿತಿ ತಲುಪಬೇಕೆಂದರೆ ಸೂಕ್ತ, ಗುಣಮಟ್ಟದ ರಸ್ತೆ ಕೂಡ ಅಷ್ಟೇ ಮುಖ್ಯ. ಅಷ್ಟಕ್ಕೂ ಎಲ್ಲೆಂದರಲ್ಲಿ ಈ ಪ್ರಯತ್ನ ಬೇಡ. ಸುರಕ್ಷತೆ ದೃಷ್ಟಿಯಿಂದ ನೋಡುವುದಾದರೆ ಬಹುತೇಕ ಎಲ್ಲವೂ ಡಿಜಿಟಲ್‌.  ಮುಂಭಾಗದ  ವೀಲ್‌ಗ‌ಳು ಡಿಸ್ಕ್ ಬ್ರೇಕ್‌ನಿಂದ ಕೂಡಿವೆ. ಹಿಂಬದಿಯಲ್ಲಿ 240ಮಿ.ಮೀ. ಹಾಗೂ ಮುಂಭಾಗದಲ್ಲಿ 310ಮಿ.ಮೀ ಡಿಸ್ಕ್ ಡ್ರಮ್‌ ನೀಡಲಾಗಿದೆ. ಡ್ಯುಯಲ್‌ ಚಾನಲ್‌ ಎಬಿಎಸ್‌ ಹೊಂದಿದ್ದು, ರೋಡ್‌ಗ್ರಿಪ್‌ ಉತ್ತಮ. ಮೂರು ಹಂತದ ಟ್ರಾಕ್ಷನ್‌ ಕಂಟ್ರೋಲ್‌ ವ್ಯವಸ್ಥೆಯನ್ನೂ ಹೊಂದಿರುವುದು ಇನ್ನೊಂದು ವಿಶೇಷ.

ವಿನ್ಯಾಸ ಬದಲು
ಈ ಹಿಂದಿನ ಜಿಎಸ್‌ಎಕ್ಸ್‌ ಬೈಕ್‌ಗಳಿಗೆ ಹೋಲಿಸಿ ನೋಡಿದರೆ ಜಿಎಸ್‌ಎಕ್ಸ್‌-ಎಸ್‌750 ಬೈಕ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೆಡ್‌ಲ್ಯಾಂಪ್‌, ಸೀಟ್‌ ಸೇರಿದಂತೆ ಬೈಕ್‌ ಹೊಸ ವಿನ್ಯಾಸದಲ್ಲಿ ರೂಪುಗೊಂಡಿದೆ. ಕವಾಸಕಿ ಝಡ್‌900 ಬೈಕ್‌ಗೆ ಸಾಕಷ್ಟು ಸಾಮ್ಯತೆ ಇರುವಂತೆ ತೋರುತ್ತದೆ. ಬೈಕ್‌ನ ಮೈಲೇಜ್‌ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.

ಎಕ್ಸ್‌ ಶೋ ರೂಂ ಬೆಲೆ: 7.45 ಲಕ್ಷ ರೂ.

ಪ್ರಮುಖ ಅಂಶಗಳು
– ಇಂಧನ ಶೇಖರಣಾ ಸಾಮರ್ಥ್ಯ 16 ಲೀಟರ್‌
– 2125ಮಿ.ಮೀ. ಉದ್ದ, 785ಮಿ.ಮೀ. ಅಗಲ/ 1055ಮಿ.ಮೀ. ಎತ್ತರ
– ಕರ್ಬ್ ವೇಟ್‌ 213ಕೆಜಿ
– 135 ಮಿ.ಮೀ. ಗ್ರೌಂಡ್‌ ಕ್ಲಿಯರೆನ್ಸ್‌

– ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next